ಪುನರೂರು ಸೇವಾನಿಧಿ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

KannadaprabhaNewsNetwork |  
Published : Aug 07, 2024, 01:05 AM IST
ಪುನರೂರು ಸೇವಾನಿಧಿ ಟ್ರಸ್ಟ್ ವತಿಯಿಂದ ಶಿಕ್ಷಣಕ್ಕೆ ಸಹಾಯ | Kannada Prabha

ಸಾರಾಂಶ

ಸಾಧಕರ ನೆಲೆಯಲ್ಲಿ ಪತ್ರಕರ್ತ ಪುನೀತ್ ಕೃಷ್ಣ ಅವರನ್ನು ಗೌರವಿಸಲಾಯಿತು.

ಮೂಲ್ಕಿ: ಪುನರೂರು ಸೇವಾನಿಧಿ ಟ್ರಸ್ಟ್ ವತಿಯಿಂದ ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ ನಡೆದ ಶಿಕ್ಷಣಕ್ಕೆ ಸಹಾಯಹಸ್ತ ಕಾರ್ಯಕ್ರಮದಲ್ಲಿ ಶಿಮಂತೂರು ಶ್ರೀ ಶಾರದಾ ಮಾದರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಸ್ತಾಂತರಿಸಲಾಯಿತು. ಸಾಧಕರ ನೆಲೆಯಲ್ಲಿ ಪತ್ರಕರ್ತ ಪುನೀತ್ ಕೃಷ್ಣ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಸಂಸ್ತೆಯ ಗೌರವಾಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಸೇವಾನಿಧಿ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಪುನರೂರು, ಕಾರ್ಯದರ್ಶಿ ಗೋವರ್ಧನ್, ಟ್ರಸ್ಟಿ ರವಿ ಶೆಟ್ಟಿ ಪುನರೂರುಗುತ್ತು, ಸದಸ್ಯ ರಾಕೇಶ್ ಕೊರಗಪ್ಪ ಪುನರೂರು, ಗುರಿಕಾರರಾದ ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಗುರಿಕಾರ ಮುತ್ತಪ್ಪ, ಅಧ್ಯಕ್ಷ ಪಿ.ಹರೀಶ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಆರ್., ಹೇಮಾನಂದ್ ಪುನರೂರು, ರವೀಂದ್ರ ದೇವಾಡಿಗ ಪುನರೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಜಿಯ ಇಷ್ಟ ತಂದಿತು ಸಂಕಷ್ಟ : ಅಜ್ಜಿ ತಿಥಿಗೆ ಆಮೆ ಬೇಟೆ ಆಡಿದವರ ಸೆರೆ
ಲಕ್ಷಾಂತರ ಭಕ್ತಸಾಗರದ ನಡುವೆ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ