ನಿವೃತ್ತ ಸರ್ಕಾರಿ ಅಧಿಕಾರಿಯಿಂದ ಶಾಲೆ ದತ್ತು ಸ್ವೀಕಾರ

KannadaprabhaNewsNetwork |  
Published : May 08, 2025, 12:31 AM IST
7ಜಿಡಿಜಿ11 | Kannada Prabha

ಸಾರಾಂಶ

ಸಾಮಾನ್ಯವಾಗಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುವಂತೆ ಸರ್ಕಾರಗಳು ಜನಪ್ರತಿನಿಧಿಗಳಿಗೆ ನಿರ್ದೇಶನ ನೀಡುತ್ತದೆ.

ಗದಗ: ನಗರದ ವೀರನಾರಾಯಣ ದೇವಸ್ಥಾನದ ಹತ್ತಿರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾಜಿ ಜಿಲ್ಲಾಧಿಕಾರಿ ಹಾಗೂ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ರವಿ ಗುಂಜೀಕರ ಅವರ ನಿವೃತ್ತಿ ಅಂಗವಾಗಿ, ಅವರು ಪ್ರಾಥಮಿಕ ಶಿಕ್ಷಣ ಪೂರೈಸಿದ ಸರ್ಕಾರಿ ಹಿರಿಯ ಕನ್ನಡ ಗಂಡುಮಕ್ಕಳ ಶಾಲೆ ನಂ. 2ರ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಎಸ್.ವಿ. ಸಂಕನೂರ, ಸಾಮಾನ್ಯವಾಗಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುವಂತೆ ಸರ್ಕಾರಗಳು ಜನಪ್ರತಿನಿಧಿಗಳಿಗೆ ನಿರ್ದೇಶನ ನೀಡುತ್ತದೆ. ಆದರೆ ಓರ್ವ ನಿವೃತ್ತ ಸರ್ಕಾರಿ ಅಧಿಕಾರಿಯಾಗಿ ಈ ಕಲ್ಯಾಣ ಕಾರ್ಯಕ್ಕೆ ಮುಂದಾಗಿರುವ ರವಿ ಗುಂಜೀಕರ ಅವರಲ್ಲಿ ಜನಪ್ರತಿನಿಧಿಗಳ ಕರ್ತವ್ಯ ಬದ್ಧತೆ ಕಾಣಬಹುದಾಗಿದೆ ಎಂದು ಹೇಳಿದರು.

ಹಿರಿಯರಾದ ಜಿ.ಎಸ್. ಹಿರೇಮಠ ಮಾತನಾಡಿ, ಇಲ್ಲಿ ಹೆಣ್ಣಮಕ್ಕಳ ಹಾಗೂ ಗಂಡುಮಕ್ಕಳ ಶಾಲೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದು, ಎರಡೂ ಬಡಮಕ್ಕಳ ಶಾಲೆಗಳಾಗಿವೆ. ರವಿ ಗುಂಜೀಕರ ಅವರು ಎರಡೂ ಶಾಲೆಗಳ ಅಭಿವೃದ್ಧಿಗೂ ನೆರವಾಗಬೇಕು ಎಂದು ಮನವಿ ಮಾಡಿದರು.

ಶಾಲಾ ಶಿಕ್ಷಕರ ಸಂಘಟನೆಗಳು ಹಾಗೂ ಗಂಡುಮಕ್ಕಳ ಸರ್ಕಾರಿ ಶಾಲೆ ನಂ. 2ರ ವತಿಯಿಂದ ನಿವೃತ್ತಿಗೊಂಡ ರವಿ ಗುಂಜೀಕರ ಹಾಗೂ ನೂತನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.

ರವಿ ಗುಂಜೀಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಾಂದಸಾಬ ಕೊಟ್ಟೂರ ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಗರಸಭೆ ಸದಸ್ಯೆ ಶ್ರೀಮತಿ ಮುಲ್ಲಾ, ಅರುಣಕುಮಾರ ಚವ್ಹಾಣ, ವಿ.ಎಂ. ಹಿರೇಮಠ, ಗ್ರಾಮೀಣ ಬಿಇಒ ನಡುವಿನಮನಿ, ಕಾಸಿಮ್‌ಸಾಬ್‌ ತಹಶೀಲ್ದಾರ, ಆರ್.ವಿ. ಸಂಕಣ್ಣವರ, ಉಮೇಶ ಹಿರೇಮಠ, ಸುರೇಶ ಕೊಪ್ಪದ, ಶಿವಯೋಗಿ ಬಂಡಿ, ಶಾಲೆಯ ಪ್ರಧಾನ ಶಿಕ್ಷಕಿ ಎಫ್.ಎ. ದಲಬಂಜನ, ಪಿ.ಎ. ಕಣಾಜ, ಐ.ಕೆ. ಕಮ್ಮಾರ ಹಾಗೂ ರವಿ ಗುಂಜೀಕರ ಅಭಿಮಾನಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ