ಕನ್ನಡಪ್ರಭ ವಾರ್ತೆ ವಿಧಾನಸಭೆ
ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಶಾಲೆ, ಕಾಲೇಜುಗಳು ಇರುವಂಥ ಜಮೀನುಗಳನ್ನು ಕೆಲವರು ದಾನ ನೀಡಿರುತ್ತಾರೆ. ಆದರೆ ಆಗ ಇಲಾಖೆ ಹೆಸರಿಗೆ ಮಾಡಿಸಿಕೊಂಡಿರುವುದಿಲ್ಲ. ಅಂಥ ಜಮೀನುಗಳಿಗೆ ದಾನ ಮಾಡಿದವರ ವಾರಸುದಾರರು ತಕರಾರು ಮಾಡುತ್ತಿರುವ ನಿದರ್ಶನಗಳಿವೆ. ಅಂಥ ಆಸ್ತಿಗಳನ್ನೆಲ್ಲ ಸಂರಕ್ಷಿಸಿ ಸರ್ಕಾರಿ ಇಲಾಖೆ ಹೆಸರಿಗೆ ಮಾಡಿಕೊಳ್ಳಲು ವಿಧೇಯಕ ತರಲಾಗಿದೆ ಎಂದು ವಿವರಣೆ ನೀಡಿದರು.
ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧೇಯಕ ಸದುದ್ದೇಶದಿಂದ ಕೂಡಿದ್ದು ನಾವು ಬೆಂಬಲ ನೀಡುತ್ತಿದ್ದೇವೆ. ಈ ಕಾಯಿದೆ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಜತೆಗೆ ಕೆಲವರು ಶಾಲೆ, ಕಾಲೇಜು ಜಾಗ ಉಳುಮೆ ಮಾಡಿ ಸಾಗುವಳಿ ಪತ್ರಕ್ಕೆ ಕಾಯುತ್ತಿದ್ದಾರೆ. ಅಂತಹವರಿಗೆ ಅವಕಾಶ ಮಾಡಿಕೊಡಬೇಡಿ ಎಂದರು.ಸ್ಪೀಕರ್ ಯು.ಟಿ. ಖಾದರ್, ನಮ್ಮ ಕ್ಷೇತ್ರದಲ್ಲೂ ಈ ಸಮಸ್ಯೆ ಇತ್ತು. ವಿಧೇಯಕ ತಂದಿರುವ ನಿಮಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಏನಿದು ವಿಧೇಯಕ?:
ಸ್ಥಿರಾಸ್ತಿ ಮೇಲೆ ಯಾವುದೇ ಋಣಭಾರ ಇರಲಿ, ಕ್ಲೇಮುಗಳಿರಲಿ ಅಥವಾ ಯಾರದ್ದೇ ಉತ್ತರಾಧಿಕಾರ ಇರಲಿ ಅವೆಲ್ಲವೂ ಮುಕ್ತಗೊಳ್ಳಲಿವೆ. ಸದರಿ ಆಸ್ತಿ ಸರ್ಕಾರಿ ಆಸ್ತಿಯಾಗಿ ಪರಿವರ್ತನೆಯಾಗಲಿದೆ.