ಸೋಮವಾರ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಶಾಲೆಯ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ರೋಣ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಳವಾಗಬೇಕು ಎಂಬ ಸದುದ್ದೇಶದಿಂದ ತಾಲೂಕಿನ ಕೊತಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಹಿಳಾ ಎಸ್ಡಿಎಂಸಿ ಸದಸ್ಯೆಯರು ತಮ್ಮ ಗೃಹಲಕ್ಷ್ಮಿ ಯೋಜನೆಯ ಹಣದಿಂದ 1ನೇ ತರಗತಿಗೆ ಪ್ರವೇಶ ಪಡೆದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸ್ಕೂಲ್ ಬ್ಯಾಗ್ ವಿತರಿಸಿದ್ದಾರೆ.ಸೋಮವಾರ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಶಾಲೆಯ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಎಸ್ಡಿಎಂಸಿ ಮಹಿಳಾ ಸದಸ್ಯರಾದ ರೇಖಾ ಕೋಡಿಕೊಪ್ಪದ, ಹುಲಿಗೆವ್ವ ಪಾಟೀಲ, ಸುವರ್ಣಾ ಅಸೂಟಿ, ಮಂಜುಳಾ ಮಾದರ, ಮಂಜುಳಾ ಚಂದರಗಿ, ವಿಜಯಲಕ್ಷ್ಮಿ ವಸ್ತ್ರದ, ರೇಣುಕಾ ಅವಾರಿ, ನಾಗರತ್ನಾ ಚವಡಿ, ಯಶೋದಾ ಸಂದಿಮನಿ, ಗಿರಿಜಾ ಗಡಾದ ಅವರು ಸ್ಕೂಲ್ ಬ್ಯಾಗ್ ನೀಡಿದ್ದಾರೆ.ಗೃಹಲಕ್ಷ್ಮೀ ಹಣದಲ್ಲಿ ಒಳ್ಳೆಯ ಗುಣಮಟ್ಟದ ಸ್ಕೂಲ್ ಬ್ಯಾಗಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವುದು ನಿಜಕ್ಕೂ ಮಹಿಳೆಯರ ಪಾಲಿಗೆ ಹೆಮ್ಮೆಯ ವಿಚಾರ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ತಿಳಿಸಿದರು. ಅದೇ ರೀತಿ ಶಾಸಕ ಜಿ.ಎಸ್. ಪಾಟೀಲ, ಕೊತಬಾಳ ಗ್ರಾಮದ ಅಡವಿಸಿದ್ದೇಶ್ವರ ಮಠದ ಗಂಗಾಧರ ಶ್ರೀಗಳು ಎಸ್ಡಿಎಂಸಿ ಮಹಿಳಾ ಸದಸ್ಯರನ್ನು ಅಭಿನಂದಿಸಿದ್ದಾರೆ.ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ
ರೋಣ: ಪಟ್ಟಣದ ಶ್ರೀ ಶಾರದಾ ಬಾಲಕಿಯರ ಪ್ರೌಢಶಾಲೆ ಹಾಗೂ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ಜರುಗಿತು.ಶಾಲೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹೂಗುಚ್ಛ, ಸಿಹಿ ವಿತರಿಸಿ ಸ್ವಾಗತಿಸಲಾಯಿತು. ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಹೊಸಮನಿ, ಎಸ್ಡಿಎಂಸಿ ಅಧ್ಯಕ್ಷ ಶಿವಣ್ಣ ನವಲಗುಂದ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ಬಿ. ಮಡಿವಾಳರ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಐ.ಆರ್. ಕುಲಕರ್ಣಿ, ಶಿಕ್ಷಕರಾದ ವಿ.ಎಂ. ಬಾವಿ, ಎಚ್.ಆರ್. ಓಲೇಕಾರ, ಬಿ.ಎಚ್. ಕೊರ್ಲಹಳ್ಳಿ, ಮಂಜುಳಾ ಮಡಿವಾಳರ, ಎಸ್.ಡಿ. ಹುಲ್ಲೂರ, ಎ.ಎಚ್. ಹೊಸಮನಿ, ಎ.ಆರ್. ಹೆಬ್ಬಳ್ಳಿ, ಗೀತಾ ಮ್ಯಾಕಲ್, ಎಂ.ಎಸ್. ಹೊಸಮನಿ, ಎಸ್.ಐ. ನೀಲಪ್ಪಗೌಡ್ರ, ವಿ.ಡಿ. ಮಾಳಗಿ, ಎಸ್.ಎಂ. ಪಾಟೀಲ, ಆರ್.ಎಚ್. ನಾಯಕ, ಎಂ.ಎ. ಬಡೇಖಾನ, ಎಸ್.ಟಿ. ವಾಲ್ಮೀಕಿ, ಎಸ್.ಎಫ್. ಹುಣಸಿಮರದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.