ಟ್ರಾಫಿಕಲ್ಲಿ ನಿತ್ಯ 2 ತಾಸು ಕಳೆವ ಶಾಲಾ ಮಕ್ಕಳು!

KannadaprabhaNewsNetwork |  
Published : Sep 24, 2026, 03:45 AM IST
ಎಐ ಚಿತ್ರ | Kannada Prabha

ಸಾರಾಂಶ

ರಾಜಧಾನಿಯ ಪೂರ್ವ ಭಾಗದ ಹೊಸಕೋಟೆ, ವೈಟ್‌ಫೀಲ್ಡ್, ವರ್ತೂರು, ಗುಂಜೂರು, ಆನೇಕಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿ-35ರಲ್ಲಿ ಹದಗೆಟ್ಟ ರಸ್ತೆ, ಗುಂಡಿಗಳು, ಸವಾರರ ಅಶಿಸ್ತು, ಟ್ರಾಫಿಕ್ ಜಾಮ್‌ನಿಂದಾಗಿ ಶಾಲೆಗೆ ಹೋಗುವ ಮಕ್ಕಳು ನಿತ್ಯ 2 ತಾಸು ಬರೀ ಟ್ರಾಫಿಕ್‌ನಲ್ಲೇ ಕಳೆಯುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯ ಪೂರ್ವ ಭಾಗದ ಹೊಸಕೋಟೆ, ವೈಟ್‌ಫೀಲ್ಡ್, ವರ್ತೂರು, ಗುಂಜೂರು, ಆನೇಕಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿ-35ರಲ್ಲಿ ಹದಗೆಟ್ಟ ರಸ್ತೆ, ಗುಂಡಿಗಳು, ಸವಾರರ ಅಶಿಸ್ತು, ಟ್ರಾಫಿಕ್ ಜಾಮ್‌ನಿಂದಾಗಿ ಶಾಲೆಗೆ ಹೋಗುವ ಮಕ್ಕಳು ನಿತ್ಯ 2 ತಾಸು ಬರೀ ಟ್ರಾಫಿಕ್‌ನಲ್ಲೇ ಕಳೆಯುವಂತಾಗಿದೆ.

ಅದರಲ್ಲೂ ಕಳೆದ 2 ವರ್ಷಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಶಾಲಾ ವಾಹನದಲ್ಲಿ ಕಳೆಯುವ ಸಮಯ ಶೇ.22ರಷ್ಟು ಏರಿಕೆಯಾಗಿದೆ. ವ್ಯಾಸಂಗ, ಕ್ರೀಡೆ ಮತ್ತಿತರ ಸದುದ್ದೇಶಗಳಿಗೆ ಬಳಕೆಯಾಗಬೇಕಿದ್ದ ಅಮೂಲ್ಯ ಸಮಯ ರಸ್ತೆಯಲ್ಲೇ ವ್ಯರ್ಥವಾಗುತ್ತಿದೆ. ಇದು ಕೇವಲ ನಗರ ಪೂರ್ವದ ಭಾಗಕ್ಕೆ ಸೀಮಿತವಾಗಿಲ್ಲ. ಹೆಚ್ಚು ಟ್ರಾಫಿಕ್ ದಟ್ಟಣೆ ಇರುವ ನಗರದ ಬಹುತೇಕ ಪ್ರದೇಶಗಳಲ್ಲಿನ ಶಾಲೆಗಳಿಗೆ ತೆರಳುವ ಎಲ್ಲಾ ಮಕ್ಕಳ ಪರಿಸ್ಥಿತಿಯು ಇದೆ ಆಗಿದೆ.

ರಾಜ್ಯ ಹೆದ್ದಾರಿ-35ರಲ್ಲಿನ ಶಾಲೆಗಳು, ಟ್ರಾಫಿಕ್ ಜಾಮ್‌ನಲ್ಲಿ ಕಳೆಯುವ ಸಮಯದ ಕುರಿತು ಇನ್ವೆಂಚರಿ ಅಕಾಡೆಮಿಯಿಂದ ನಡೆಸಿದ ಸರ್ವೇಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ನಗರದ ಪೂರ್ವ ಭಾಗದ ಪ್ರಮುಖ ರಸ್ತೆಯಾಗಿರುವ ರಾಜ್ಯ ಹೆದ್ದಾರಿ-35ರಲ್ಲಿ 42 ಶಾಲೆಗಳು ಇವೆ. ಸರಾಸರಿ 40,000 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ರಸ್ತೆಯು ಐಟಿಬಿಟಿ ಕಂಪನಿಗಳು ಹಾಗೂ ಅವುಗಳ ಉದ್ಯೋಗಿಗಳು ಹೆಚ್ಚು ನೆಲೆಸಿರುವ ಪ್ರದೇಶವಾಗಿದೆ. ಹೀಗಾಗಿ, ಬಹುಮಹಡಿ ವಸತಿ ಕಟ್ಟಡಗಳಿಗೆ ಬೇಡಿಕೆ ತೀವ್ರವಾಗಿದೆ. ಅಲ್ಲದೇ, ಖಾಸಗಿ ಶಾಲೆಗಳ ಸಂಖ್ಯೆಯು ಹೆಚ್ಚಾಗಿದೆ.

2024-25ರಲ್ಲಿ ಮಕ್ಕಳು ಟ್ರಾಫಿಕ್‌ನಲ್ಲಿ 92 ನಿಮಿಷ ಕಳೆದರೆ, 2025-26ರಲ್ಲಿ 102 ನಿಮಿಷಗಳಿಗೆ ಏರಿಕೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ ಸರಾಸರಿ 112 ರಿಂದ 120 ನಿಮಿಷಕ್ಕೆ ಏರಿಕೆಯಾಗಿದೆ. ಕೆಲವೊಮ್ಮೆ ಮಳೆ, ರಸ್ತೆ ಕಾಮಗಾರಿ, ವಾಹನಗಳು ಕೆಟ್ಟು ನಿಂತು ಹೆಚ್ಚು ಟ್ರಾಫಿಕ್ ಉಂಟಾದರೆ ಮಕ್ಕಳು 3 ತಾಸು ಅಥವಾ ಅದಕ್ಕೂ ಹೆಚ್ಚು ಸಮಯವನ್ನು ಟ್ರಾಫಿಕ್‌ನಲ್ಲೇ ಕಳೆಯುತ್ತಾರೆ. ಟ್ರಾಫಿಕ್ ಜಾಮ್‌ನಿಂದಾಗಿ ಮಕ್ಕಳು ಶಾಲಾ ಸಮಯಕ್ಕೆ ಸರಿಯಾಗಿ ತಲುಪಲು ಮನೆಯಿಂದ ಬೇಗ ಹೊರಡಬೇಕು. ಮನೆಯಿಂದ ಬೇಗ ಹೊರಡಲು ಬೆಳಗ್ಗೆ ಬೇಗ ಏಳಬೇಕು. ಇದರಿಂದ ಮಕ್ಕಳಿಗೆ ಸರಿಯಾಗಿ ನಿದ್ದೆಯು ಆಗುತ್ತಿಲ್ಲ ಎನ್ನುವ ಆತಂಕ ಪಾಲಕರದ್ದಾಗಿದೆ.

ಸರ್ವೇ ಕುರಿತಾದ ವರದಿಯನ್ನು ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಇನ್ವೆಂಚರಿ ಅಕಾಡೆಮಿಯ ಸಿಇಒ ನೂರೈನ್ ಫಜಲ್, ವರ್ಷದಲ್ಲಿ 200 ದಿನ ಶಾಲೆ ನಡೆಯುತ್ತದೆ. ಅದರಲ್ಲಿ 374 ತಾಸು ಪ್ರಯಾಣದಲ್ಲೇ ಹೋಗುತ್ತಿದೆ. ಈ 374 ತಾಸುಗಳನ್ನು ಶಾಲಾ ದಿನಕ್ಕೆ ಲೆಕ್ಕ ಹಾಕಿದರೆ 53 ಶಾಲಾ ದಿನಗಳಾಗುತ್ತವೆ ಎಂದು ಹೇಳಿದ್ದಾರೆ. ಮಕ್ಕಳು ಬಹುತೇಕ ಸಮಯವನ್ನು ಶಾಲೆ ಮತ್ತು ಶಾಲೆಗೆ ಹೋಗಿ ಬರುವುದರಲ್ಲೇ ಕಳೆಯುತ್ತಿರುವ ಕಾರಣ ಆಟ ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಸಮಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆಂದು ನೂರೈನ್ ತಿಳಿಸಿದ್ದಾರೆ.ದಟ್ಟಣೆಗೆ ಪ್ರಮುಖ ಕಾರಣಗಳು

ರಸ್ತೆ ಗುಂಡಿಗಳು, ಎಲ್ಲೆಂದರಲ್ಲೇ ತ್ಯಾಜ್ಯ ಬಿದ್ದಿರುವುದು, ನೀರು ನಿಂತಿರುವುದು, ಟಾರು ಕಿತ್ತು ಹೋಗಿರುವುದು, ಬೇಕಾಬಿಟ್ಟಿ ಪಾರ್ಕಿಂಗ್, ಲೇನ್ ಮಾರ್ಕಿಂಗ್ ಇಲ್ಲದಿರುವುದು ಹಾಗೂ ವಾಹನ ಸವಾರರ ಅಶಿಸ್ತು ಕೂಡ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ ಎಂದು ಸರ್ವೇಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರ್ತಿದ್ದ ಗ್ಯಾಂಗ್‌ನ ಬಂಧನ
ಶಿಕ್ಷಣ ನೀತಿ ಬದಲಾಗದೆ ದೇಶಬದಲಾಗದು: ಡಾ. ಬಿಳಿಮಲೆ