ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ, ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯಾವುದೇ ಕೆಲಸ, ಕಾರ್ಯಗಳನ್ನು ಅಭಿವೃದ್ದಿ ಪಡಿಸಬೇಕೆಂದರೆ ಜನರ ಸಹಕಾರ ಬಹಳ ಮಹತ್ವವಾಗಿರುತ್ತದೆ ಅಂತಹ ಸಹಕಾರದಿಂದ ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡವು ನಿರ್ಮಾಣವಾಗಿದೆ ಇದಕ್ಕೆ 15ಲಕ್ಷರೂಗಳ ಅನುದಾನವನ್ನು ನೀಡಲಾಗಿದೆ ಎಂದರು.ಮಹಿಳೆಯರು ತಯಾರಿಸಿದ ದಿನನಿತ್ಯ ಬಳಕೆ ವಸ್ತುಗಳು, ಸಾಂಪ್ರದಾಯಿಕ ಆಹಾರ ಉತ್ಪನ್ನಗಳು, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಹಲವು ವೈವಿದ್ಯಮಯ ಉತ್ಪನ್ನಗಳನ್ನು ವೀಕ್ಷಿಸಿದರು.
ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಜನವರಿ ತಿಂಗಳಿಗೆ ಅಂತ್ಯವಾಗಲಿದ್ದು ಈ ಬಗ್ಗೆ ಸರ್ಕಾರ ಉಆವುದೇ ಕ್ರಮ ಕೈಗೊಂಡಿಲ್ಲ ಎಂದರು.ಶಾಸಕ ಡಿ.ಜಿ.ಶಾಂತನಗೌಡರು ಮಾತನಾಡಿ ಗ್ರಾಮದಲ್ಲಿ ಸ್ಮಶಾನ ಜಾಗವನ್ನು ಗುರುತಿಸಿದ್ದು ಒಂದು ತಿಂಗಳಿನಲ್ಲಿ ಮಂಜೂರು ಮಾಡಲಾಗುವುದು. ಸದ್ಯಕ್ಕೆ ಕಾನೂನು ಅಡಿಯ ಪ್ರಕಾರ ಗ್ರಾಮದಲ್ಲಿ ಆಸ್ಪತ್ರೆಯನ್ನು ಮಾಡಲು ಬರುವುದಿಲ್ಲ ಎಂದು ಹೇಳಿದರು.
ಚಟ್ನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ರಂಗಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ವಿಶ್ವನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್, ಗ್ರಾಪಂ ಮಾಜಿ ಅಧ್ಯಕ್ಷ ಚನ್ನಪ್ಪ, ಗ್ರಾಪಂ ಉಪಾಧ್ಯಕ್ಷ ನವೀನ್ ಎಂ.ಎಸ್., ಸದಸ್ಯ ಮಲ್ಲೇಶಪ್ಪ ಮಾತನಾಡಿದರು.ಗ್ರಾಪಂ ಸದಸ್ಯರಾದ ನೇತ್ರಾವತಿ ಹೆಗ್ಗಪ್ಪ, ಶೃತಿ ರವಿಕುಮಾರ್, ವೀರೇಶ್, ನೀಲಾಬಾಯಿ ತತ್ಯಾನಾಯ್ಕ, ಶಾಮತಿಬಾಯಿ, ಉಮೇಶ್‌ನಾಯ್ಕ, ಮಂಜಪ್ಪ, ರೇಖಾನಾಯ್ಕ, ತಾಪಂ ಇಒ ರಾಘವೇಂದ್ರ, ವಿಜಯಕುಮಾರ್, ಗ್ರಾಮಸ್ಥರು ಇದ್ದರು.