ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಚಿನ್ಮಯಿಜ್ಞಾನಿ ಚನ್ನಬಸವಣ್ಣನ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಧರ್ಮವು ಕನ್ನಡಿಗರ ಏಕೈಕ ಧರ್ಮವಾಗಿದೆ ಎಂದರು.
ಬೌದ್ಧ ಧರ್ಮಕ್ಕೆ ಪಾಳಿ ಮೂಲಭಾಷೆಯಾದರೆ, ಇಸ್ಲಾಂ ಧರ್ಮಕ್ಕೆ ಅರೇಬಿಕ್ ಮೂಲಭಾಷೆಯಾಗಿದೆ. ಅದೇ ರೀತಿ ಜಗತ್ತಿನಲ್ಲಿ ಬೇರೆ ಬೇರೆ ಧರ್ಮಗಳಿಗೆ ಬೇರೆ ಮೂಲಭಾಷೆಗಳಿವೆ. ಆದರೆ ಲಿಂಗಾಯತ ಸ್ವತಂತ್ರ ಧರ್ಮವನ್ನು ಕನ್ನಡ ಮೂಲದ್ದು ಎಂಬುದು ನಾವೆಲ್ಲರೂ ಹೆಮ್ಮಪಡುವ ಸಂಗತಿಯಾಗಿದೆ ಎಂದು ತಿಳಿಸಿದರು.ಲಿಂಗಾಯತ ಧರ್ಮಕ್ಕೂ, ಕನ್ನಡ ಭಾಷೆಯೂ ತಾಯಿ-ಮಗನ ಸಂಬಂಧವಿದೆ. ಇಂತಹ ಕನ್ನಡವೇ ಧರ್ಮ, ಸಂಸ್ಕೃತಿ ಪರಂಪರೆಯಾಗಿದೆ. ಆದಿ ಕಾಲದಿಂದಲೂ ಆಧುನಿಕ ಕಾಲದವರೆಗೆ ಸಾಕಷ್ಟು ರಾಜ, ಮಹಾರಾಜರು, ಕವಿ, ಸಾಹಿತಿಗಳು ಈ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಮತ, ಮೌಢ್ಯ, ಭೇದಭಾವವು ಶರಣರಲ್ಲಿರಲಿಲ್ಲ. ಶರಣರ ಕಾಲದಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ತತ್ವ ಚಾಲ್ತಿಯಲ್ಲಿತ್ತು. ಶರಣರಲ್ಲಿ ಅನೇಕರು ಅನಕ್ಷರಸ್ಥರಾಗಿದ್ದರೂ ಅಂತರಂಗದ ಜ್ಯೋತಿ ಬೆಳಗಿಸಿಕೊಂಡಿದ್ದರು. ಆದರೆ, ಈಗ ವಿಶ್ವ ವಿದ್ಯಾನಿಯಗಳಿದ್ದರೂ ಜನರ ಅಂತರಂಗದ ಜ್ಯೋತಿ ಆರಿದೆ. ಮಕ್ಕಳು ಪರೀಕ್ಷೆಯಲ್ಲಿ ಅಂಕ, ಜೀವನದಲ್ಲಿ ಸಂಪತ್ತನ್ನು ಗಳಿಸಬೇಕೆಂದು ಬಯಸುವ ಪಾಲಕರು ಸರಿಯಾದ ಸಂಸ್ಕಾರ, ಆದರ್ಶ ಗುಣಗಳನ್ನೇ ಕಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಬಸವ ಬಳಗದ ಅಧ್ಯಕ್ಷ ಎ.ಹೆಚ್.ಹುಚ್ಚಪ್ಪ ಮಾಸ್ತರ್, ಎನ್.ಎಸ್.ರಾಜು, ಚಿತ್ತರಗಿ ಶಿವಕುಮಾರ, ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ, ಆವರಗೆರೆ ರುದ್ರಮುನಿ ಇತರರು ಇದ್ದರು.
ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ