ಬೇಸಿಗೆ ರಜೆ ಬಳಿಕ ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಆರಂಭ

KannadaprabhaNewsNetwork |  
Published : May 28, 2025, 11:47 PM ISTUpdated : May 29, 2025, 07:19 AM IST
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿನ ಹೆಣ್ಣು ಮಕ್ಕಳ ಶಾಲೆಯನ್ನು ಪಿಂಕ್ ಬಣ್ಣದಿಂದ ಶೃಂಗರಿಸಿ, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಿದ್ಧಗೊಳಿಸಿರುವುದು.  | Kannada Prabha

ಸಾರಾಂಶ

ಬೇಸಿಗೆ ರಜೆ ಬಳಿಕ ರಾಜ್ಯಾದ್ಯಂತ 2025-2026ನೇ ಸಾಲಿನ ಶೈಕ್ಷಣಿಕ ಅವಧಿಗೆ ಮೇ 29ರಿಂದ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗುತ್ತಿದ್ದು, ಬಹುತೇಕ ಶಾಲೆಗಳು ಮಕ್ಕಳ ಆಗಮಕ್ಕೆ ಸಿದ್ಧತೆ ಮಾಡಿಕೊಂಡಿವೆ.

 ಬೆಂಗಳೂರು : ಬೇಸಿಗೆ ರಜೆ ಬಳಿಕ ರಾಜ್ಯಾದ್ಯಂತ 2025-2026ನೇ ಸಾಲಿನ ಶೈಕ್ಷಣಿಕ ಅವಧಿಗೆ ಮೇ 29ರಿಂದ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗುತ್ತಿದ್ದು, ಬಹುತೇಕ ಶಾಲೆಗಳು ಮಕ್ಕಳ ಆಗಮಕ್ಕೆ ಸಿದ್ಧತೆ ಮಾಡಿಕೊಂಡಿವೆ.

ಹಲವು ಖಾಸಗಿ ಶಾಲೆಗಳು ಈಗಾಗಲೇ ತರಗತಿಗಳನ್ನು ಆರಂಭಿಸಿದ್ದು, ಸರ್ಕಾರಿ ಶಾಲೆಗಳು ಗುರುವಾರದಿಂದ ಅಧಿಕೃತವಾಗಿ ಪುನಾರಂಭ ಆಗಲಿವೆ. ಆದರೆ, ಮಳೆಯ ಕಾರಣದಿಂದ ಕೊಡಗಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 2 ದಿನ ರಜೆ ನೀಡಲಾಗಿದ್ದು, ಏ.2ರಿಂದ ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಳ್ಳುವ ಸಾಧ್ಯತೆಯಿದೆ.

ರಜೆಯಲ್ಲಿ ಬೇಸಿಗೆ ಶಿಬಿರ, ಪ್ರವಾಸ, ಅಜ್ಜಿ ಮನೆ, ನೆಂಟರಿಷ್ಟರ ಮನೆಗಳಿಗೆ ತೆರಳಿದ್ದ ಮಕ್ಕಳು ತಮ್ಮ ಊರುಗಳಿಗೆ ಮರಳಿದ್ದು, ಶಾಲೆಗೆ ತೆರಳುವ ಸಂಭ್ರಮದಲ್ಲಿದ್ದಾರೆ.ಶಿಕ್ಷಣ ಇಲಾಖೆಯ ಸೂಚನೆಯಂತೆ ಬೇಸಿಗೆಯ ರಜೆ ಮುಗಿಸಿಕೊಂಡು ವಾಪಸ್ ಬರುತ್ತಿರುವ ಚಿಣ್ಣರಿಗೆ ಮೊದಲ ದಿನ ಬಿಸಿಯೂಟದಲ್ಲಿ ಸಿಹಿ ತಿನಿಸು ತಯಾರಿಸಿ ಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆಗಳನ್ನು ಸ್ವಚ್ಛಗೊಳಿಸಲಾಗಿದ್ದು, ಕೆಲವೇಡೆ ತಳಿರು ತೋರಣ, ರಂಗೋಲೆ ಬಿಡಿಸಿ, ಚಿಣ್ಣರ ಸ್ವಾಗತಕ್ಕೆ ಕಾಯಲಾಗುತ್ತಿದೆ.

 ಶಾಲೆಗೊಂದು ವಿಶೇಷ ಕೊಠಡಿ : ಗದಗ ಜಿಲ್ಲೆಯ 7 ತಾಲೂಕು ವ್ಯಾಪ್ತಿಯಲ್ಲಿ ಶಾಲೆಗಳ ಪ್ರಾರಂಭಕ್ಕೆ ಹಾಗೂ ವಿದ್ಯಾರ್ಥಿಗಳನ್ನು ಶಾಲೆಯತ್ತ ಆಕರ್ಷಿಸಲು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಕ್ರಮ ತೆಗೆದುಕೊಂಡಿದೆ. ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಫೆಬ್ರವರಿಯಲ್ಲಿಯೇ ಸಭೆ ನಡೆಸಲಾಗಿದ್ದು, ಶಾಲೆಗಳಲ್ಲಿ ಕಲಿಕಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕನಿಷ್ಠ 1 ಕೊಠಡಿಯನ್ನಾದರೂ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಇದು ಮಾದರಿ ಕೊಠಡಿಯಾಗಿದ್ದು, ವಿಶೇಷ ಚಿತ್ರಗಳು, ಮಕ್ಕಳ ಕಲಿಕಾ ವಿಷಯಕ್ಕೆ ಬೇಕಾದ ಪೂರಕ ಅಂಶಗಳನ್ನು ಈ ಕೊಠಡಿಗಳು ಹೊಂದಿದೆ. ಸದ್ಯ ಇದೇ ಕೊಠಡಿಗಳೇ ಆಕರ್ಷಣೆಯ ಕೇಂದ್ರಬಿಂದುವಾಗಿವೆ.

ಮಕ್ಕಳಿಗೆ ಮಾರ್ಗಸೂಚಿ ಇಲ್ಲ

ಕೊರೋನಾ ಸಂಬಂಧ ಕೇಂದ್ರ ನೀಡುವ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಲಿದೆ. ಮಕ್ಕಳಿಗೆ ಯಾವುದೇ ಮಾರ್ಗಸೂಚಿ ಸದ್ಯಕ್ಕೆ ಇಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು.

-ಮಧು ಬಂಗಾರಪ್ಪ, ಸಚಿವ 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಾಕಿ ಲಕ್ಷ್ಮಿ ಶನಿವಾರದೊಳಗೆ ಮಹಿಳೆಯರ ಬ್ಯಾಂಕ್‌ ಖಾತೆಗೆ
ರಾಜಣ್ಣ ಸಿಎಂಗಷ್ಟೇ ಅಲ್ಲ, ನನಗೂ ಪರಮಾಪ್ತ: ಡಿಕೆಶಿ