ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿಜ್ಞಾನ ವಿಭಾಗ ಲಭ್ಯ

KannadaprabhaNewsNetwork | Published : Nov 6, 2023 12:45 AM

ಸಾರಾಂಶ

ಸರ್ಕಾರಿ ಪದವಿ ಕಾಲೇಜಿನ ಕಾರ್ಯಾಧ್ಯಕ್ಷ

ಕನ್ನಡಪ್ರಭ ವಾರ್ತೆ ಆನವಟ್ಟಿ

ವಿಜ್ಞಾನ ವಿಭಾಗಕ್ಕೆ ಬೇಕಾದ ಪ್ರಯೋಗಾಲಯ ಉಪಕರಣಗಳು ಲಭ್ಯ ಇರುವುದರಿಂದ ಬರುವ ಶೈಕ್ಷಣಿಕ ವರ್ಷಕ್ಕೆ ಪಿಯುಸಿ ಮುಗಿಸುತ್ತಿರುವ ವಿದ್ಯಾರ್ಥಿಗಳು ಆನವಟ್ಟಿ ಪದವಿ ಕಾಲೇಜಿನಲ್ಲೇ ದಾಖಲಾತಿ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಪದವಿ ಕಾಲೇಜಿನ ಕಾರ್ಯಾಧ್ಯಕ್ಷ ಮಧುಕೇಶ್ವರ ಪಾಟೀಲ್ ಹೇಳಿದರು.

ಆನವಟ್ಟಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ, ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ವರ್ಷದಿಂದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಕಟ್ಟಡ ಇದ್ದರೂ, ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಳ್ಳಲು ಮನಸ್ಸು ಮಾಡುತ್ತಿಲ್ಲ. ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರು ಇಲ್ಲ ಎಂಬ ಕಾರಣದಿಂದ ದಾಖಲಾಗುತ್ತಿಲ್ಲ ಎಂಬ ಕಾರಣ ಪೋಷಕರು ನೀಡುತ್ತಿದ್ದಾರೆ. ಪೋಷಕರು ಉಪನ್ಯಾಸಕರು ಇಲ್ಲ ಎಂಬ ಭಯ ಬೇಡ ಎಂದರು.

ಕಾಲೇಜಿನ ಅಧ್ಯಕ್ಷರೂ ಆಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಪ್ರಾಂರಭಿಸಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಗಳ ಅಭಿವೃದ್ಧಿಗೂ ಒತ್ತು ನೀಡುತ್ತಿದ್ದಾರೆ. ಬರುವ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಆನವಟ್ಟಿ ಸರ್ಕಾರಿ ಪದವಿ ಕಾಲೇಜಿನಲ್ಲಿ ದಾಖಲಾಗಿ, ಕೋರ್ಸ್ ಪ್ರಾರಂಭ ಆಗುತ್ತಿದ್ದಂತೆ ಸಚಿವರು ಉಪನ್ಯಾಸಕರನ್ನು ವ್ಯವಸ್ಥೆಗೊಳಿಸುವರು. ಕಾಲೇಜಿನ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಸಹ ಸಿದ್ಧಮಾಡಿಕೊಂಡಿದ್ದಾರೆ ಎಂದರು.

ಉತ್ತಮ ಉಪನ್ಯಾಸಕರ ತಂಡ ಕಾಲೇಜಿನಲ್ಲಿ ಇದೆ. ಪ್ರತಿವರ್ಷ ಉತ್ತಮ ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. ನ್ಯಾಕ್ ಮಾನ್ಯತೆಯನ್ನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಾಗರದ ಉಳ್ಳೂರು ಸಿಗಂದೂರೇಶ್ವರಿ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಎನ್. ಕೃಷ್ಣಮೂರ್ತಿ, ಪ್ರಾಂಶುಪಾಲ ಗಣಪತಿ, ಸಿಡಿಸಿ ಸಮಿತಿ ಸದಸ್ಯರಾದ ಎಚ್.ಎಚ್ ಬಸವರಾಜಪ್ಪ, ಚನ್ನನಾಯಕ, ಚಾಂದ್ ನೂರಿ ಇದ್ದರು.

- - - -ಕೆಪಿ5ಎಎನ್‌ಟಿ1ಇಪಿ:

ಆನವಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಿಗಂದೂರೇಶ್ವರಿ ಟ್ರಸ್ಟ್‌ ಅಧ್ಯಕ್ಷ ಕೃಷ್ಣಮೂರ್ತಿ ಅವರಿಗೆ ಸಿಡಿಸಿ ಕಾರ್ಯಾಧ್ಯಕ್ಷ ಮಧುಕೇಶ್ವರ್ ಪಾಟೀಲ್‌ ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು.

Share this article