ಶನಿವಾರಸಂತೆ: ಸ್ಥಳೀಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತುಗಳ ಮಾದರಿ ತಯಾರಿಕೆ ಹಾಗೂ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಡಿಸಲಾಗಿತ್ತು. ಐದರಿಂದ 10ನೇ ತರಗತಿಯ ಪ್ರತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಭಿನ್ನ ಮಾದರಿಗಳನ್ನುಪ್ರದರ್ಶಿಸಿದರು.
ಚಿರಂಜೀವಿ ಹಾಗೂ ಗಣಿತ ಶಿಕ್ಷಕ ಅಶ್ವಥ್ ಮತ್ತು ವಿಜ್ಞಾನ ಶಿಕ್ಷಕಿ ಚಾಂದಿನಿ ತೀರ್ಪುಗಾರರಾಗಿದ್ದರು.
ಪ್ರಾಂಶುಪಾಲೆ ಡಿ. ಸುಜಲಾ ದೇವಿ ಮಾತನಾಡಿ ಪ್ರತಿ ವರ್ಷ ಐದರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನೋಪಕರಣಗಳನ್ನು ತಯಾರಿಸುವ ಸ್ಪರ್ಧೆ ನಡೆಸಿ ಅವರಲ್ಲಿ ವೈಜ್ಞಾನಿಕ ಚಿಂತನೆಯನ್ನು ಹಾಗೂ ಕ್ರಿಯಾತ್ಮಕತೆಯನ್ನು ಬೆಳೆಸಲಾಗುತ್ತಿದೆ. ಭಾಗವಹಿಸುವ ಪ್ರತಿ ವಿದ್ಯಾರ್ಥಿಗಳಿಗೂ ಬಹುಮಾನವನ್ನು ನೀಡಲಾಗುತ್ತಿದ್ದು ತರಗತಿವಾರು ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ವಿಜೇತರಿಗೆ ನೀಡಲಾಗುತ್ತಿದೆ ಎಂದರು.