ಕುಷ್ಟಗಿ: ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆ ಕಲಿಸುವ ಮೂಲಕ ಜ್ಞಾನ ಹೆಚ್ಚಿಸಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಗುರುಕುಲ ಪಾಠಶಾಲೆ ಕಾರ್ಯದರ್ಶಿ ನಾಗರಾಜ ಓಲಿ ಹೇಳಿದರು.
ಶಾಲಾ ಕೊಠಡಿಗಳಲ್ಲಿ ವಿಜ್ಞಾನ, ಗಣಿತ, ಸಮಾಜ, ಪ್ರಾಯೋಗಿಕತೆ ಹೀಗೆ ವಿವಿಧ ಚಟುವಟಿಕೆಗಳ ವಸ್ತು ಪ್ರದರ್ಶನ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು ವೀಕ್ಷಣೆ ಮಾಡಿದರು.
ತಾವರಗೇರಾ ವಲಯ ಸಂಪನ್ಮೂಲ ಅಧಿಕಾರಿ ಕಾಶಿನಾಥ ನಾಗಲಿಕರ, ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕ ಶಿವುಕುಮಾರ ದುಮತಿ, ಆಡಳಿತಾಧಿಕಾರಿ ಲಕ್ಷ್ಮಣ ವಗರನಾಳ, ದಶರಥ ದೇವದುರ್ಗ ಮತ್ತು ಪೋಷಕರು ವಿದ್ಯಾರ್ಥಿಗಳು ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳು ಇದ್ದರು.