ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರತರಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ: ಡಾ. ಸಿ.ಟಿ. ಜಯದೇವ್

KannadaprabhaNewsNetwork |  
Published : Dec 18, 2025, 12:00 AM IST
ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಅಂತರ್‌ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಡಾ.ಸಿ.ಟಿ. ಜಯದೇವ್‌ ಅವರು ಉದ್ಘಾಟಿಸಿದರು. ಟಿ. ರಾಜಶೇಖರ್‌, ರತೀಶ್‌ಕುಮಾರ್‌, ತ್ಯಾಗರಾಜ್‌, ತೇಜಸ್ವಿನಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರುವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುವ ಜೊತೆಗೆ ಅವರಲ್ಲಿರುವ ಪ್ರತಿಭೆ ಹೊರತರಲು ವಿಜ್ಞಾನ ವಸ್ತು ಪ್ರದರ್ಶನ ಬಹಳ ಉಪಯುಕ್ತ ಎಂದು ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ ಜಯದೇವ್ ಹೇಳಿದರು.

- ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರ್‌ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸುವ ಜೊತೆಗೆ ಅವರಲ್ಲಿರುವ ಪ್ರತಿಭೆ ಹೊರತರಲು ವಿಜ್ಞಾನ ವಸ್ತು ಪ್ರದರ್ಶನ ಬಹಳ ಉಪಯುಕ್ತ ಎಂದು ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ ಜಯದೇವ್ ಹೇಳಿದರು.ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆಯಿಂದ ಬುಧವಾರ ಏರ್ಪಡಿಸಲಾಗಿದ್ದ ಅಂತರ್‌ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನ, ಕೃಷಿ ಮುಂತಾದವುಗಳಿಗೆ ಸಂಬಂದಿಸಿದ ವಸ್ತುಗಳ ತಯಾರಿಕೆ ಬಗ್ಗೆ ಬಹಳಷ್ಟು ಶಿಕ್ಷಕರು ಮಾರ್ಗದರ್ಶನದ ಮೂಲಕ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಹಿನ್ನೆಲೆಯಲ್ಲಿ ಜೆವಿಎಸ್ ಶಾಲೆ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚು ಹೆಚ್ಚು ತಿಳಿಯಲು ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿ ಪ್ರಾಯೋಗಿಕವಾಗಿ ಉಪಯೋಗಿಸಿಕೊಳ್ಳುವ ಬಗ್ಗೆ ತಿಳಿದು ಕೊಂಡಿಲ್ಲ. ಈ ಸಂಬಂಧ ಸಮಾಜಕ್ಕೆ ಉಪಯೋಗವಾಗುವ ರೀತಿ ವಸ್ತುಪ್ರದರ್ಶನ ಬಳಕೆಯಾಗಬೇಕೆಂದು ಹೇಳಿದರು.ಸಾರ್ವಜನಿಕರಿಗೆ ವಿಜ್ಞಾನವಿಲ್ಲದೆ ಬದುಕು ದುಸ್ತರವಾಗುತ್ತದೆ. ಇಂದು ವಿಜ್ಞಾನ ಕ್ಷೇತ್ರದಲ್ಲಿ ನೂತನ ಎಐ ತಂತ್ರಜ್ಞಾನ ದಂತಹ ಆವಿಷ್ಕಾರಗಳಾಗುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ತಿಳಿಯುವ ಅಗತ್ಯ ಇದೆ ಎಂದು ಹೇಳಿದರು.ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದೇ ವಿಜ್ಞಾನ ವಸ್ತು ಪ್ರದರ್ಶನದ ಉದ್ದೇಶ, ಮನುಷ್ಯನ ಆಸೆಗೆ ತಕ್ಕಂತೆ ತಂತ್ರಜ್ಞಾನ ಬೆಳೆಯುತ್ತಿದ್ದು, ದುರಾಸೆಯಿಂದ ಇಡೀ ಭೂ ಮಂಡಲ ನಾಶ ಮಾಡುವ ತಂತ್ರಜ್ಞಾನ ಒಂದೆಡೆಯಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತೀರ್ಪುಗಾರರಾದ ಸತ್ಯನಾರಾಯಣ ಮಾತನಾಡಿ, ವೈಜ್ಞಾನಿಕ ಬುದ್ದಿ, ಮನೋಭಾವ ಬೆಳೆಸುವ ವಿಜ್ಞಾನ ವಸ್ತು ಪ್ರದರ್ಶನ ಅರ್ಥಪೂರ್ಣ ಎಂದರು.

ಇತ್ತೀಚಿನ ದಿನಗಳಲ್ಲಿ ಈ ರೀತಿ ವಸ್ತು ಪ್ರದರ್ಶನಗಳು ಕಡಿಮೆಯಾಗುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಅವರು, ಸಮಾಜಕ್ಕೆ ಉಪಯೋಗವಾಗುವ ಹೊಸ ಆವಿಷ್ಕಾರಗಳ ಪ್ರದರ್ಶನ ಇದ್ದರೆ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಲು ಸಹಕಾರಿ ಎಂದರು.ಲೂಯಿಪಾಶ್ಚರ್, ಸರ್ ಸಿ.ವಿ. ರಾಮನ್, ಸರ್. ಎಂ. ವಿಶ್ವೇಶ್ವರಯ್ಯ ಮುಂತಾದವರ ಸಾಧನೆ ಬಗ್ಗೆ ಅವಲೋಕಿಸಿ ಸಾಮಾನ್ಯ ಸಮಸ್ಯೆ ಬಗೆಹರಿಸಲು ವಿಜ್ಞಾನದ ಪಾತ್ರ ಬಹಳ ಮುಖ್ಯ. ಕಡಿಮೆ ವೆಚ್ಚದಲ್ಲಿ ಸಮಾಜಕ್ಕೆ ಉಪಯೋಗವಾಗುವ ರೀತಿ ವಸ್ತುಗಳ ತಯಾರಿಕೆ ಬಗ್ಗೆ ಕ್ರಮವಹಿಸಬೇಕೆಂದು ಕರೆನೀಡಿದರು.ನಗರದ ವಿವಿಧ 12 ಶಾಲೆಗಳ ವಿದ್ಯಾರ್ಥಿಗಳು ಈ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಸಂಘದ ಉಪಾಧ್ಯಕ್ಷ ಟಿ.ಡಿ. ಮಲ್ಲೇಶ್, ಗೌರವ ಕಾರ್ಯದರ್ಶಿ ಎಂ.ಎಸ್.ಪ್ರದೀಪ್‌ಕುಮಾರ್, ಶಾಲಾ ಸಹ ಕಾರ್ಯದರ್ಶಿ ಕೆ.ಯು.ರತೀಶ್‌ಕುಮಾರ್, ನಿರ್ದೇಶಕರಾದ ಭವ್ಯ ನಟೇಶ್, ಶಾಲಾ ಮುಖ್ಯ ಶಿಕ್ಷಕ ವಿಜಿತ್, ಕಾಲೇಜು ಪ್ರಾಂಶುಪಾಲೆ ತೇಜಸ್ವಿನಿ, ತೀರ್ಪುಗಾರರಾದ ಓಂಕಾರಪ್ಪ, ತ್ಯಾಗರಾಜ್, ಸಿಇಒ ಕುಳ್ಳೇಗೌಡ ಉಪಸ್ಥಿತರಿದ್ದರು. 17 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಅಂತರ್‌ ಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಡಾ.ಸಿ.ಟಿ. ಜಯದೇವ್‌ ಅವರು ಉದ್ಘಾಟಿಸಿದರು. ಟಿ. ರಾಜಶೇಖರ್‌, ರತೀಶ್‌ಕುಮಾರ್‌, ತ್ಯಾಗರಾಜ್‌, ತೇಜಸ್ವಿನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೇತುವೆ ಕಾಮಗಾರಿ ನನೆಗುದಿಗೆ ತಂತ್ರಜ್ಞಾನಕ್ಕೇ ಅವಮಾನ
ಕಬ್ಬಿನ ಟ್ಯಾಕ್ಟರ್‌ಗೆ ಸಿಲುಕಿ ಇಬ್ಬರು ಮಹಿಳೆಯರ ಸಾವು