ದೊಡ್ಡಕೆರೆ ಮೈದಾನ ಸಂರಕ್ಷಿಸಬೇಕು: ಪ್ರೇಮಕುಮಾರ್‌

KannadaprabhaNewsNetwork |  
Published : Dec 18, 2025, 12:00 AM IST
39 | Kannada Prabha

ಸಾರಾಂಶ

ದೊಡ್ಡಕೆರೆ ಮೈದಾನ ಸುಮಾರು 130 ಎಕರೆ ಪ್ರದೇಶದಲ್ಲಿದೆ. ಕೆರೆಯ ದಕ್ಷಿಣ ಭಾಗದಲ್ಲಿ ಮನೆ ಕಟ್ಟಲು ಅವಕಾಶ ಇಲ್ಲ ಎಂದು ಹೇಳುವ ಸರ್ಕಾರ ಬೃಹತ್‌ ಮಾಲ್‌ ನಿರ್ಮಿಸಲು ಅನುಮತಿ ನೀಡಿತು.

ಫೋಟೋ - 17ಎಂವೈಎಸ್‌ 39ಕನ್ನಡಪ್ರಭ ವಾರ್ತೆ ಮೈಸೂರುನಿಯಮದಂತೆ ರಾಜ್ಯ ಸರ್ಕಾರವು ದೊಡ್ಡಕೆರೆ ಮೈದಾನವನ್ನು ರಕ್ಷಿಸಬೇಕು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೂನಿಟಿ ಮಹಲ್‌ ಗೆ ಕೆರೆ ಜಾಗ ಗುರುತಿಸಿ ಸಂಸದರು, ಶಾಸಕರನ್ನು ದಿಕ್ಕು ತಪ್ಪಿಸಿದ ಜಿಲ್ಲಾಡಳಿತದ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮ್‌ ಕುಮಾರ್‌ ಒತ್ತಾಯಿಸಿದ್ದಾರೆ.ದೊಡ್ಡಕೆರೆ ಮೈದಾನ ಸುಮಾರು 130 ಎಕರೆ ಪ್ರದೇಶದಲ್ಲಿದೆ. ಕೆರೆಯ ದಕ್ಷಿಣ ಭಾಗದಲ್ಲಿ ಮನೆ ಕಟ್ಟಲು ಅವಕಾಶ ಇಲ್ಲ ಎಂದು ಹೇಳುವ ಸರ್ಕಾರ ಬೃಹತ್‌ ಮಾಲ್‌ ನಿರ್ಮಿಸಲು ಅನುಮತಿ ನೀಡಿತು. 1970 ರಲ್ಲಿ ದೊಡ್ಡಕೆರೆ ಏರಿ ಅಸೋಸಿಯೇಷನ್‌ ನಿವೇಶನ ರಚಿಸಲು ಮುಂದಾದಾಗ ಜಿಲ್ಲಾಡಳಿತ ಕೆರೆ ಎಂಬ ಕಾರಣಕ್ಕೆ ಅನುಮತಿ ನೀಡಲಿಲ್ಲ. ಆದರೆ ಈಗ ಕೆರೆಯ ಮಧ್ಯಭಾಗದಲ್ಲಿ ಯೂನಿಟಿ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ನೀಡಿರುವುದು ಎಷ್ಟು ಸರಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.ಸರ್ಕಾರ ಮೊದಲು ಕೆರೆಯನ್ನು ಸಂರಕ್ಷಿಸಬೇಕು. ಕೆರೆಯ ಸುತ್ತಮುತ್ತ ಯಾರದೇ ಆಸ್ತಿ ಇದ್ದರೂ ಅದನ್ನು ಮುಟ್ಟಬಾರದು. ಯೂನಿಟಿ ಮಹಲ್‌ ನಿರ್ಮಾಣಕ್ಕೆ ಬೇರೆಯದೇ ಸ್ಥಳ ಗುರುತಿಸಬೇಕು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪರಿಶ್ರಮದಿಂದ ಈ ಯೋಜನೆ ತಂದಿದ್ದಾರೆ. ಅದು ವ್ಯರ್ಥವಾಗಬಾರದು ಎಂದು ಅವರು ಒತ್ತಾಯಿಸಿದರು.ಏತ ನೀರಾವರಿ ಮೂಲಕ ನೇತ್ರಾವತಿ ನದಿ ನೀರಿನ ಹರಿವನ್ನೇ ಬದಲಿಸಿದ ಸರ್ಕಾರಕ್ಕೆ ದೊಡ್ಡಕೆರೆ ಮೈದಾನವನ್ನು ತುಂಬಿಸುವುದು, ಕೆರೆಯನ್ನು ಪುನರುಜ್ಜೀವನಗೊಳಿಸುವುದು ದೊಡ್ಡ ಕೆಲಸವಲ್ಲ. ಆ ಕೆಲಸವನ್ನು ಕೂಡಲೇ ಮಾಡಬೇಕು. ರಾಜವಂಶಸ್ಥರ ಜಾಗವಿದ್ದರೆ ಅದನ್ನು ಮಾತುಕತೆ ಮೂಲಕ ಬಗಹರಿಸಿಕೊಂಡು, ಸೂಕ್ತ ಪರಿಹಾರ ನೀಡಿ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟ ಸಾಹಿತ್ಯ ರಚಿಸಲು ಶುದ್ಧ ಮನಸ್ಸು ಅಗತ್ಯ
ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಬೇಡಿ