ಕುಂದಾಪುರ: ಇಲ್ಲಿನ ಐಎಂಜೆ ಸಂಸ್ಥೆಗಳ ವತಿಯಿಂದ ಭಾರತದ ವೈಜ್ಞಾನಿಕ ಪರಂಪರೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಖಗೋಳ ವಿಜ್ಞಾನದ ಕ್ಷೇತ್ರದಲ್ಲಿಯೂ ಪ್ರಾಚೀನ ಭಾರತೀಯರ ಸಾಧನೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದ ಅವರು, ಆಧುನಿಕ ವಿಜ್ಞಾನ ಉದಯಿಸುವುದಕ್ಕೂ ಮುನ್ನವೇ ಭಾರತೀಯರು ಗ್ರಹಗಳ ಚಲನೆ, ಗ್ರಹಣಗಳ ಲೆಕ್ಕಾಚಾರ ಹಾಗೂ ಕಾಲಗಣನೆಯಲ್ಲಿ ಅಪೂರ್ವ ಪರಿಣತಿಯನ್ನು ಹೊಂದಿದ್ದರು. ಭಾರತದ ವೈಜ್ಞಾನಿಕ ಪರಂಪರೆಯನ್ನು ವೈಜ್ಞಾನಿಕ ಹಾಗೂ ಐತಿಹಾಸಿಕ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಅಗತ್ಯವಿದೆ ಎಂದವರು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್, ಎಂಐಟಿ ಕುಂದಾಪುರದ ಪ್ರಾಂಶುಪಾಲ ಹಾಗೂ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ, ವಿವಿಧ ಘಟಕ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.