- ಹರಿಹರ ಸರ್ಕಾರಿ ಕಾಲೇಜಿನಲ್ಲಿ ‘ಥರ್ಮೋಡೈನಮಿಕ್ಸ್’ ವಿಶೇಷ ಉಪನ್ಯಾಸ
ಕನ್ನಡಪ್ರಭ ವಾರ್ತೆ ಹರಿಹರ
ದೈನಂದಿನ ಜೀವನ ಸುಧಾರಿಸಲು ಮತ್ತು ನಾವೀನ್ಯತೆ ಹೆಚ್ಚಿಸಲು ವಿಜ್ಞಾನ ಅವಶ್ಯಕವಾಗಿದೆ. ಜನಜೀವನದ ಗುಣಮಟ್ಟವನ್ನು ಸುಧಾರಿಸಲು ವಿಜ್ಞಾನ ಸಹಕಾರಿಯಾಗಿದೆ ಎಂದು ಎಸ್.ಜೆ.ವಿ.ಪಿ. ಪದವಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅರುಣ ಕುಮಾರ್ ಟಿ. ಬುದ್ಧನವರ್ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ. ಹಾಗೂ ರಸಾಯನ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಥರ್ಮೋಡೈನಮಿಕ್ಸ್’ (ಉಷ್ಣಬಲ ವಿಜ್ಞಾನ) ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಸಾಯನ ಶಾಸ್ತ್ರವು ಭೌತಿಕ ವಿಜ್ಞಾನದ, ಜೀವ ವಿಜ್ಞಾನದ ಮತ್ತು ಪರಿಸರ ವಿಜ್ಞಾನದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಿದರು.
ಐ.ಕ್ಯೂ.ಎಸ್.ಸಿ. ಸಹ ಸಂಯೋಜಕ ಅಬ್ದುಲ್ ಬಷೀರ್ ಮಾತನಾಡಿ, ವಿದ್ಯಾರ್ಥಿಗಳು ಕುತೂಹಲದ ಗುಣ ಬೆಳೆಸಿಕೊಂಡರೆ, ಪ್ರಶ್ನೆ ಮಾಡುವ ಪ್ರವೃತ್ತಿ ವೃದ್ಧಿಯಾಗುತ್ತದೆ. ಅದರಿಂದ ಹೊಸ ವಿಷಯಗಳನ್ನು ಆವರಿಸಲು ಸಹಾಯಕವಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಆವಿಷ್ಕಾರ ಅಥವಾ ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.
- - -
ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ. ಹಾಗೂ ರಸಾಯನ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಥರ್ಮೋಡೈನಮಿಕ್ಸ್’ (ಉಷ್ಣಬಲ ವಿಜ್ಞಾನ) ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಅರುಣ ಕುಮಾರ್ ಟಿ. ಬುದ್ಧನವರ್ ಉದ್ಘಾಟಿಸಿದರು.