ಕನ್ನಡಪ್ರಭ ವಾರ್ತೆ ನಾಲತವಾಡ
ಸಮೀಪದ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ನಿರ್ವಹಣಾ ತಂತ್ರಗಳು, ಓದುವ ಶೈಲಿ, ಗುರಿ ಸಾಧನೆ ಮತ್ತು ಶೈಕ್ಷಣಿಕ ತಯಾರಿ ಕುರಿತಂತೆ ಸಂವಾದದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನವೆಂದರೆ ಬಾಳಲ್ಲಿ ಶ್ರೇಷ್ಠ ಹಂತ. ಈ ಹಂತದಲ್ಲಿ ಶ್ರಮಿಸಿದರೆ ಯಶಸ್ಸು ಖಚಿತ. ತಾನು ಓದಿದ ವಿಷಯವನ್ನು ನಿಖರವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸ್ಮಾರ್ಟ್ ಸ್ಟಡಿಗೆ ಹೆಚ್ಚಿನ ಒತ್ತು ನೀಡಬೇಕು. ಪರೀಕ್ಷೆಯ ವೇಳೆ ನೋಟ್ಸ್ ಬಳಸಿ, ಆತ್ಮವಿಶ್ವಾಸದೊಂದಿಗೆ ಉತ್ತರಿಸಬೇಕು ಎಂಬ ಸಲಹೆ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ ಮಾತನಾಡಿ, ಪ್ರತಿವರ್ಷ 180 ವಿದ್ಯಾರ್ಥಿಗಳು ಸಂಸ್ಥೆಯ ನೀಟ್ ತರಬೇತಿಯಿಂದ ಎಂ.ಬಿ.ಬಿ.ಎಸ್‌ಗೆ ಆಯ್ಕೆಯಾಗುತ್ತಿದ್ದಾರೆ. ಇದು ಸಂಸ್ಥೆಯ ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಅನುಭವಿ ಉಪನ್ಯಾಸಕರು ಹಾಗೂ ಸ್ಮಾರ್ಟ್ ಕ್ಲಾಸ್‌ಗಳ ಪರಿಣಾಮ ಎಂದರು. ಇದನ್ನು ಸೇವಾಭಾವದಿಂದ ನಡೆಸಲಾಗುತ್ತಿರುವ ಸಂಸ್ಥೆಯ ಧ್ಯೇಯದ ಪ್ರತಿಬಿಂಬ ಎಂದು ವಿವರಿಸಿದರು.ನಿವೃತ್ತ ಮುಖ್ಯಾಧ್ಯಾಪಕ ಎಸ್.ಎಸ್.ಹಿರೇಮಠ, ರಾಯಚೂರಿನ ಕೋಚಿಂಗ್ ಕೇಂದ್ರದ ಮುಖ್ಯಸ್ಥ ಚನ್ನಪ್ಪ ಬೂದಿಹಾಳ ಮಾತನಾಡಿದರು. ಶಿಕ್ಷಕ ಮೌನೇಶ ಶಹಾಪುರ ಕಾರ್ಯಕ್ರಮ ನಿರ್ವಹಿಸಿದರು.ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿಭಾಗಗಳ ಸುಮಾರು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ವೇಳೆ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಉಪಸ್ಥಿತರಿದ್ದರು.