ಕಟೀಲಿನಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ

KannadaprabhaNewsNetwork |  
Published : Nov 21, 2026, 02:45 AM IST
ಕಟೀಲಿನಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ  | Kannada Prabha

ಸಾರಾಂಶ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಉತ್ತರ ವಲಯ ಹಾಗೂ ಕಟೀಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಕಟೀಲಿನಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅಂಗರಗುಂಡಿ ಸರ್ಕಾರಿ ಪ್ರೌಢಶಾಲೆಯ ಲವೀಶಾ, ಶ್ರೀನಿಧಿ ಹಾಗೂ ದ್ವಿತೀಯ ಬಹುಮಾನವನ್ನು ಕಟೀಲು ಶ್ರೀ ದು.ಪ. ದೇ, ಪ್ರೌಢಶಾಲೆಯ ಮನೀಶ್, ಚಿನ್ಮಯ್ ಎಚ್. ಕೋಟ್ಯಾನ್ ಪಡೆದರು.

ಕನ್ನಡಪ್ರಭವಾರ್ತೆ ಮೂಲ್ಕಿ

ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಮೃದ್ ಶೆಟ್ಟಿ, ಎಸ್ ಡಿ ಪಿ ಟಿ ಪ್ರೌಢಶಾಲೆ (ಕನ್ನಡ ಮಾಧ್ಯಮ) ಕಟೀಲು ಹಾಗೂ ದ್ವಿತೀಯ ಸ್ಥಾನವನ್ನು ಮಹಮ್ಮದ್ ಜುನೈದ್ ಸರ್ಕಾರಿ ಪ್ರೌಢಶಾಲೆ ಉರ್ದು ಶಾಲೆ, ಬಂದರು ಇವರು ಪಡೆದಿದ್ದಾರೆ. ವಿಜೇತರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತಾಲೂಕಿನ 15 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯದ ರಮೇಶ್ ಆಚಾರ್ಯ, ಕಟೀಲು ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕ ದಯಾನಂದ ಮಾಡ, ಕಟೀಲು ಪದವಿ ಕಾಲೇಜಿನ ಪ್ರಾಚಾರ್ಯ ಕು.ಕುಸುಮಾವತಿ, ಪ್ರಾಚಾರ್ಯ ರಾಜಶೇಖರ ಎನ್, ಗಿರೀಶ್ ತಂತ್ರಿ, ಕವಿತಾ, ರಮ್ಯ, ಕೇಶವ ನಾಯಕ್, ಕಿರಣ್ ಕುಮಾರ್, ವಿಜ್ಞಾನ ಶಿಕ್ಷಕ ಹರೀಶ್ ಬಿ,. ತೀರ್ಪುಗಾರರಾದ ವಾದಿರಾಜ ರಾವ್, ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ