- ಧ್ರುವ ಎಜುಕೇಷನ್ ಟ್ರಸ್ಟ್‌ನಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಪ್ರೊ. ವೈ.ವೃಷಭೇಂದ್ರಪ್ಪ ಸಲಹೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಹೊರವಲಯದಲ್ಲಿರುವ ಧ್ರುವ ಎಜುಕೇಷನ್ ಟ್ರಸ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ವಿಜ್ಞಾನ ಮೇಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಪ್ರಕೃತಿಯಲ್ಲಿ ಅನೇಕ ವಿಸ್ಮಯಗಳು ಅಡಕವಾಗಿವೆ. ಅಂತಹ ನಿಗೂಢತೆಗಳನ್ನು ಸಂಶೋಧನೆಗಳ ಮೂಲಕ ವಿಜ್ಞಾನಿಗಳು ಪತ್ತೆಹಚ್ಚಿ ಜನಸಾಮಾನ್ಯರ ಉಪಯೋಗಕ್ಕೆ ತರುತ್ತಿದ್ದಾರೆ ಎಂದರು.
ವಿಜ್ಞಾನ ಎನ್ನುವುದು ಕಣ್ಣಿಗೆ ಕಾಣದಂತಹ ನಿಗೂಢತೆಯಲ್ಲಿದೆ. ಅದರ ಸಂಶೋಧನೆಗಳನ್ನು ಪ್ರಪಂಚದಲ್ಲಿರುವ ವಿಜ್ಞಾನಿಗಳು ಸಂಶೋಧನೆಗಳ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿಯೇ ನಾವೀಗ ಮೊಬೈಲ್, ದೂರದರ್ಶನ, ಕಂಪ್ಯೂಟರ್, ಇಂಟರ್‌ನೆಟ್ ಸೇರಿದಂತೆ ಇನ್ನಿತರೆ ಆಧುನಿಕ ಸೌಲಭ್ಯಗಳನ್ನು ಬಳಸುವಂತಾಗಿದೆ ಎಂದರು.ಶಾಲೆಗಳಲ್ಲಿ ನಡೆಯುವಂತಹ ಇಂತಹ ವಿಜ್ಞಾನ ಮೇಳಗಳು ವಿದ್ಯಾರ್ಥಿಗಳಾದ ನಿಮಗೆ ಸ್ಫೂರ್ತಿಯನ್ನು ನೀಡಲಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಾದ ನಿಮ್ಮಲ್ಲಿ ಎಂತೆಂಥ ಪ್ರೌಢಿಮೆಗಳು ಅಡಗಿದೆಯೋ ತಿಳಿದಿಲ್ಲ. ನೀವು ವಿದ್ಯಾಭ್ಯಾಸ ಮಾಡುವ ಸಂದರ್ಭ ಶಿಕ್ಷಕರು ಹೇಳಿಕೊಡುವಂತಹ ಪಠ್ಯ ವಿಷಯಗಳನ್ನು ಅರ್ಥ ಮಾಡಿಕೊಂಡು ಮುನ್ನಡೆದಾಗ ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಅಂತಹ ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತೀರಿ ಎಂದರು.
ನಮ್ಮ ಶಾಲೆಯಲ್ಲಿ ಪ್ರತಿವರ್ಷ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳುತ್ತ ವಿದ್ಯಾರ್ಥಿಗಳಿಂದಲೇ ಹೊಸ ಹೊಸ ಪ್ರಯೋಗ, ಅನ್ವೇಷಣೆಗಳನ್ನು ಮಾಡಿಸಿ, ವಿದ್ಯಾರ್ಥಿಗಳ ಬೌದ್ಧಿಕಮಟ್ಟದ ಬೆಳವಣಿಗೆಗೆ ಸಹಕಾರಿ ಆಗುತ್ತಿದೆ ಎಂದು ತಿಳಿಸಿದರು.
- - - -12ಕೆಸಿಎನ್‌ಜಿ1: