ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಚಾಮರಾಜನಗರದ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆ, ಐಕ್ಯಂ ತಂಡದ ಸಹಯೋಗದಲ್ಲಿ ಮೈಸೂರು ಅರಮನೆ ಆವರಣದಲ್ಲಿ ಅಳವಡಿಸಿದ ತಾತ್ಕಾಲಿಕ ಶಾಲೆಯಲ್ಲಿನ ಮಾವುತರ ಮಕ್ಕಳಿಗಾಗಿ ವಿಶೇಷ ವಿಜ್ಞಾನ ಚಟುವಟಿಕೆಗಳ ಕಾರ್ಯಕ್ರಮವನ್ನು ವೈಜ್ಞಾನಿಕ ಕುತೂಹಲ ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಅನೇಕ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಅನೇಕ ವಿಜ್ಞಾನದ ಚಟುವಟಿಕೆಗಳು ಪ್ರಯೋಗಗಳು, ಪ್ರದರ್ಶನಗಳು ಹಾಗೂ ಪ್ರತಿದಿನದ ಜೀವನದಲ್ಲಿ ಉಪಯೋಗವಾಗುವ ಸರಳ ವಿಜ್ಞಾನ ಪರಿಕಲ್ಪನೆಗಳ ಬಗೆಗೆ ಮಕ್ಕಳಿಗೆ ವಿವರಿಸಿದರು.ಇಸ್ರೋ ಸಂಸ್ಥೆಯ ಸ್ಪೇಸ್ ಟ್ಯೂಟರ್ ಕಾರ್ಯಕ್ರಮದ ಅಂಗವಾಗಿ, ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆ ಮಕ್ಕಳಿಗೆ ಉಪಗ್ರಹದ ಕಾಗದದ ಮಾದರಿಗಳು, ಪೋಸ್ಟರ್‌ಗಳು, ಪುಸ್ತಕಗಳು ಇತ್ಯಾದಿಗಳನ್ನು ವಿತರಿಸಿತು.
ಈ ಕಾರ್ಯಕ್ರಮದಲ್ಲಿ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆಯ ಸೋಮರಾಜು, ಗಾಯತ್ರಿ ಎಂ, ಸುಕೃತಾ ಹಾಗೂ ಐಕ್ಯಂ ತಂಡದ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.