ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು ವಿಚಾರ ಸಂಕಿರಣದಲ್ಲಿ ಪ್ರೊ.ನರೇಂದ್ರನಾಯಕ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದ ಹೊರವಲಯದ ಶ್ರೀ ಇಮ್ಮಡಿಗಿರಿ ಭೋವಿ ಗುರುಪೀಠದ ಎಸ್‌ಜೆಎಸ್ ಸಮೂಹ ಸಂಸ್ಥೆವತಿಯಿಂದ ಎಸ್‍ಜೆಎಸ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು
ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು. ಆದರಿಂದ ಕಂಡು ಹಿಡಿದ ಮೊಬೈಲ್, ಟಿವಿ ವಾಟ್ಸಾಪ್, ಕಾರುಗಳ ಸಮರ್ಪಕ ಬಳಕೆ ಮಾಡುತ್ತಾರೆ. ಆದರೆ ಆದರೆ ವೈಜ್ಞಾನಿಕವಾದ ಚಿಂತನೆ ಬೇಡವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.ನಾವುಗಳು ಯಾವುದೇ ವಿಷಯವನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ಪ್ರಶ್ನಿಸದೇ ಇರುವುದರಿಂದಲೇ ನಮ್ಮ ಮೇಲೆ ವಿವಿಧ ರೀತಿಯ ಗದಾ ಪ್ರಹಾರಗಳಾಗುತ್ತಿವೆ. ನಮ್ಮ ಸಂವಿಧಾನದ ಜನತೆಯ ಕರ್ತವ್ಯಗಳು ಹಾಗೂ ಹಕ್ಕುಗಳನ್ನು ನೀಡಿದ್ದು ಎಲ್ಲರೂ ತಿಳಿದುಕೊಳ್ಳಬೇಕು. ಸಂವಿಧಾನ ಬದ್ಧವಾಗಿ ಈ ಕಾರ್ಯವನ್ನು ಮಾಡಬೇಕಿದೆ ಎಂದರು.
ಪವಾಡ ಹಾಗೂ ಜ್ಯೋತಿಷ್ಯದ ಗುಟ್ಟನ್ನು ಬಯಲಿಗೆ ಎಳೆಯುವ ಕಾರ್ಯವಾಗಬೇಕಿದೆ. ಇದಕ್ಕೆ ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಜಗತ್ತಿನಲ್ಲಿ ಇಲ್ಲಿಯವರೆಗೆ ವಿಜ್ಞಾನದಿಂದಲೇ ಪ್ರಗತಿ ಆಗಿದೆ. ಭಕ್ತಿ, ಮೌಢ್ಯದಿಂದಾಗಲಿ ಅಲ್ಲ. ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು. ಚಿಂತನೆಗಳು ಬೇಡವಾಗಿವೆ. ಚೀನಾದೇಶ ಭಾರತಕ್ಕಿಂತ ಅಭಿವೃದ್ದಿಯಲ್ಲಿ ತುಂಬಾ ಹಿಂದೆ ಇತ್ತು. ಈಗ ಎಲ್ಲ ದೇಶಗಳನ್ನು ಮೀರಿಸುವಂತೆ ಬೆಳೆದಿರುವುದರ ಹಿಂದೆ ವಿಜ್ಞಾನದ ಕೊಡುಗೆ ಇದೆ. ಜಪಾನ್ ಪ್ರಗತಿಯನ್ನು ಸಾಧಿಸಿದೆ. ಇದಕ್ಕೆ ಯಾವುದೇ ಮತ, ಧರ್ಮ, ಅಚರಣೆ ಕಾರಣವಲ್ಲವೆಂದರು.
ಈ ಸಂದರ್ಭದಲ್ಲಿ ನರೇಂದ್ರನಾಯಕ್ ಅವರು ಮಕ್ಕಳಿಂದಲೇ ಕೆಲವು ಪವಾಡಗಳ ಮಾಡಿಸಿ ಗುಟ್ಟು ಬಯಲು ಮಾಡಿದರು. ಭೋವಿ ಗುರುಪೀಠದ ಸಿಇಒ ಗೌನಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.