ವೈಜ್ಞಾನಿಕ ಕೃಷಿ ಪದ್ಧತಿಗೆ ರೈತರಿಗೆ ಆರ್ಥಿಕ ಲಾಭ

KannadaprabhaNewsNetwork |  
Published : Jan 24, 2026, 04:00 AM IST
ಸಮೀರವಾಡಿ ಸುದ್ದಿ ಪೋಟೊ | Kannada Prabha

ಸಾರಾಂಶ

ದೇಶದ ಶೇ.50 ರಷ್ಟು ರೈತರು ಕೃಷಿಯಲ್ಲಿ ತೊಡಗಿದ್ದರೂ ಆರ್ಥಿಕ ಪರಿಸ್ಥಿತಿ ಮಾತ್ರ ಅಂದಾಜು ಶೇ.25 ರಷ್ಟಿದೆ ಎಂದರೇ ವೈಜ್ಞಾನಿಕ ಪದ್ಧತಿಯ ಕೃಷಿ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕೊಂಡಿಲ್ಲ ಎನ್ನುವುದು ಎದ್ದು ಕಾಣುತ್ತದೆ ಎಂದು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.

ಕನ್ನಡಫ್ರಭ ವಾರ್ತೆ ಮಹಾಲಿಂಗಪುರ

ದೇಶದ ಶೇ.50 ರಷ್ಟು ರೈತರು ಕೃಷಿಯಲ್ಲಿ ತೊಡಗಿದ್ದರೂ ಆರ್ಥಿಕ ಪರಿಸ್ಥಿತಿ ಮಾತ್ರ ಅಂದಾಜು ಶೇ.25 ರಷ್ಟಿದೆ ಎಂದರೇ ವೈಜ್ಞಾನಿಕ ಪದ್ಧತಿಯ ಕೃಷಿ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕೊಂಡಿಲ್ಲ ಎನ್ನುವುದು ಎದ್ದು ಕಾಣುತ್ತದೆ ಎಂದು ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದರು.

ಸೈದಾಪುರ-ಸಮೀರವಾಡಿಯ ಕೆ.ಜೆ.ಸೋಮಯ್ಯ ಕೃಷಿ ಅನ್ವಯಿತ ಸಂಶೋಧನಾ ಸಂಸ್ಥೆ ಮತ್ತು ಮುಂಬೈ ಇಂಜನಿಯರಿಂಗ್‌ ಸಹಯೋಗದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಶುಕ್ರವಾರ ನಡೆದ ಅಗ್ರಿಟೆಕ್ ಹೆಕಥಾನ್‌-2026ರ ಸಮಾರಂಭದಲ್ಲಿ ರೈತರು ಮತ್ತು ಮುಂಬೈಯಿಂದ ಆಗಮಿಸಿದ ಇಂಜನಿಯರಿಂಗ್‌ ವಿದ್ಯಾರ್ಥಿಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಪ್ರಸ್ತುತ ಇದು ಆಧುನಿಕ ಯುಗ ಎಲ್ಲ ರಂಗಗಳು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಸ್ವಾವಲಂಬನೆಯತ್ತ ಸಾಗಿವೆ. ಕೃಷಿ ವಲಯವು ಕೂಡ ಹೊರತಾಗಿಲ್ಲ ಪರ್ವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಚಟುವಟಿಕೆಗಳಲ್ಲಿ ತೊಡಗಿದ್ದು, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ. ನಮ್ಮ ದೇಶದ ರೈತರು ಯಾವುದೇ ಬೆಳೆ ಬೆಳೆಯಲಿ ಅದಕ್ಕೆ ಒಳ್ಳೆಯ ಮತ್ತು ಕೆಟ್ಟದ್ದಕ್ಕೆ ವಾತಾವರಣದ ಸಬೂಬು ಹೇಳುತ್ತಾರೆ. ಇದು ಈಗಲೂ ಚಾಲ್ತಿಯಲ್ಲಿದೆ. ಇದೊಂದು ಮೌಢ್ಯಕ್ಕೆ ಸಮವಾಗಿದೆ ಎಂದರು. ನಾವು ಬೆಳೆಯುವ ಕಬ್ಬು ಬೆಳೆ 3 ಕುಳೆಗಳನ್ನು ದಾಟಬಾರದು. ಇದರಿಂದ ಮಣ್ಣಿನ ಸವಕಳಿಯಾಗುತ್ತದೆ. ಬದಲಾಗಿ ಸನಬು, ತೊಗರಿ, ಸೊಯಾಬೀನ್, ಗೋವಿನ ಜೋಳ ಮತ್ತು ಕಾಯಿಪಲ್ಯ ಇನ್ನೂ ಇತ್ಯಾದಿ ಬೆಳೆಗಳು ಲಾಭದಾಯಕ ಎನಿಸಿದ್ದು, ಇವುಗಳನ್ನು ಬೆಳೆ ಬೆಳೆಯಬಹುದು. ದೇಶದ ರಾಜಸ್ತಾನ ಹಾಗೂ ಇಸ್ರೇಲ್‌ ದೇಶದ ರೈತರ ಹನಿ ನೀರಾವರಿ ಪದ್ಧತಿಯು ಸವಳು ಜವಳಿಗೆ ಮುಕ್ತಿ ನೀಡುತ್ತದೆ. ಭೂಮಿಯಲ್ಲಿಯ ಸಾವಯವ ಗೊಬ್ಬರ, ಸೂಕ್ಷ್ಮಾಣುಗಳು ಮತ್ತು ಎರೆ ಹುಳುಗಳು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ತೋಟದಲ್ಲಿ ರೈತರು ಕೃಷಿ ತ್ಯಾಜ್ಯವನ್ನು ಸುಡದೆ ಬದಲಾಗಿ ಅದೇ ಮಣ್ಣಿನಡಿ ಹುದುಗಿಸಿ ಕೊಳೆಸಬೇಕು. ಆಗ ಅದುವೆ ಸಾವಯವ ಗೊಬ್ಬರವಾಗಿ ಫಸಲು ಹುಲುಸಾಗಿ ಬರುತ್ತದೆ ಎಂದರು.ಅಮೆರಿಕನ್ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಇತರ ವಿಷಯಗಳ ಕುರಿತು 40 ವರ್ಷಗಳವರೆಗೆ ಶಿಕ್ಷಣ ನೀಡಿದ ಡಾ.ಲ್ಯಾರಿ ವಾಕರ್ ಮತ್ತು ಅಮೇರಿಕದ ಇನ್ನೋರ್ವ ಡಾ.ಲಿಸಾ ಮಾತನಾಡಿ, ವೈಜ್ಞಾನಿಕ ಕೃಷಿಯ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದ್ದೇನೆ. ಆದರೆ, ಈ ಸೈದಾಪುರ- ಸಮೀರವಾಡಿ ಭಾಗದ ರೈತರ ಜೊತೆ ಬೆರೆತು ನಾನು ಕಲಿತದ್ದು ಬಹಳಷ್ಟಿದ್ದು, ಈ ಭಾಗದ ರೈತರೆ ನನಗೆ ಗುರುಗಳು. ಇವರಲ್ಲಿರುವ ಪುರಾತನ ಕೃಷಿ ಪದ್ಧತಿ ನನಗೆ ಸಾಕಷ್ಟು ಚಿಂತನೆ ನಡೆಸುವಂತೆ ಮಾಡಿದೆ. ಈ ಭಾಗದ ರೈತರಿಗೆ ನೆರವಾಗಲಿ. ವೃತಾಶ್ರಮ ಹಾಳು ಮಾಡಿಕೊಳ್ಳದೇ ಕೃಷಿಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ರೈತರ ಪರ ಕಾಳಜಿ ಮೆರೆದರು.ಜಿಬಿಎಲ್ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಕತಾನ ಎನ್ನುವುದು ಕೇವಲ ಯೋಜನೆ ಅಲ್ಲ ಬದಲಾಗಿ ನೇರ ಕಲಿಕೆ ಮತ್ತು ರೈತರ ಸಮಸ್ಯೆಗಳನ್ನು ನೀಗಿಸುವ ವೇದಿಕೆಯಾಗಿದೆ. ರೈತರು ತಮ್ಮ ಅನಾದಿಕಾಲದ ಪಾರಂಪರಿಕ ಕೃಷಿ ಚಟುವಟಿಕೆಗಳಿಗೆ ವೈಜ್ಞಾನಿಕ ರೂಪ ನೀಡಿ ಉತ್ತಮ ಬೆಳೆ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಬೇಕೆನ್ನುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ರೈತ ಗೀತೆಯೊಂದಿಗೆ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಭಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿಜಲಿಂಗಪ್ಪ ಇನ್‌ಸ್ಟಿಟ್ಯೂಟ್‌ ಡಾ.ರಾಜಗೋಪಾಲ, ಬೆಳಗಾವಿ ಕೃಷಿ ಜಂಟಿ ನಿರ್ದೇಶಕರು ಡಾ.ಎಚ್.ಡಿ.ಕೋಲೇಕಾರ, ಬಾಗಲಕೋಟೆ ಜಂಟಿ ನಿರ್ದೇಶಕರು ಟಿ.ಎಸ್.ರುದ್ರೇಶಪ್ಪ, ಪ್ರಗತಿಪರಾದ ರೈತ ಬಿ.ಬಿ.ಬೆಳಕೂಡ, ರಾಮನಗೌಡ ಪಾಟೀಲ್, ಡಾ.ನಿತಿನ ದೇಸಾಯಿ, ಹಿರಿಯ ಕಬ್ಬು ನಿರೀಕ್ಷಕರಾದ ವೆಂಕಟೇಶ್ ಕಣಬೂರ, ರಂಗನಗೌಡ ಪಾಟೀಲ್, ಡಾ.ಸುರೇಶ ಉಕರಂಡೆ, ನಂದಕುಮಾರ ಕುಂಚಗೆ, ವಿಜಯಕುಮಾರ ಕಣವಿ, ಡಾ.ಚಿದಾನಂದ ಎ.ಅರ್, ಡಾ.ಎ.ಆಸಂಗಿ, ಸೋಮಶೇಖರ ಪೇಟಿಮನಿ, ವೃಶಾಲಿ ಡಿ ಸೇರಿದಂತೆ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು, ಮೈಸೂರಲ್ಲಿ ಇಂದು ಮೋದಿ ಹವಾ- ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಇಂದು ಕರ್ನಾಟಕದ ಅನೇಕ ಪ್ರಥಮಗಳಿಗೆ ಪಿಎಂ ಮೋದಿ ಚಾಲನೆ