ಸನಾತನ ಧರ್ಮದಲ್ಲಿ ವೈಜ್ಞಾನಿಕ ಆಚಾರ ವಿಚಾರ

KannadaprabhaNewsNetwork |  
Published : Oct 24, 2026, 02:30 AM IST
ಹರಪನಹಳ್ಳಿಯ ಮೇಗಳಪೇಟೆಯಲ್ಲಿ ಪುರಾಣ ಸಮಿತಿಯವರು ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಕಾಶಿ ಜಗದ್ಗುರುಗಳು ಉದ್ಘಾಟಿಸಿದರು.ವರಸದ್ಯೋಜಾತ ಶ್ರೀಗಳು, ಮತ್ತಿತರರು ಇದ್ದರು. | Kannada Prabha

ಸಾರಾಂಶ

ಉಪವಾಸ ಮಾಡುವುದು ಶಾರೀರಕ ಆರೋಗ್ಯ ಕಾಪಾಡಲು, ಅಗ್ನಿ ಕುಂಡ ಹಾಯುವುದರಿಂದ ಪಾದದಲ್ಲಿ ಬೆಂಕಿ ತಾಗಿ ನರ ನಾಡಿಗಳು ಚುರುಕುಗೊಳ್ಳುತ್ತವೆ

ಹರಪನಹಳ್ಳಿ: ಸನಾತನ ಧರ್ಮದಲ್ಲಿ ಮೌಢ್ಯವಿಲ್ಲ ಅದರ ಬದಲಾಗಿ ವೈಜ್ಞಾನಿಕ ಆಚಾರ ವಿಚಾರವಿದೆ ಎಂದು ಕಾಶಿಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಮಹಾಸ್ವಾಮೀಜಿ ಹೇಳಿದರು.

ಅವರು ನಗರದ ಮೇಗಳಪೇಟೆಯ ಗುಗ್ಗಳ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಶ್ರೀದೇವಿ ಪುರಾಣ ಸಮಿತಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಉಪವಾಸ ಮಾಡುವುದು ಶಾರೀರಕ ಆರೋಗ್ಯ ಕಾಪಾಡಲು, ಅಗ್ನಿ ಕುಂಡ ಹಾಯುವುದರಿಂದ ಪಾದದಲ್ಲಿ ಬೆಂಕಿ ತಾಗಿ ನರ ನಾಡಿಗಳು ಚುರುಕುಗೊಳ್ಳುತ್ತವೆ, ವಾತಾವರಣ ಶುದ್ಧಿಗಾಗಿ ಹೋಮ ಹವನ ಮಾಡಲಾಗುತ್ತದೆ, ಆದರೆ ಇವೆಲ್ಲ ಸುಮ್ಮನೆ ಮಾಡು ಅಂದರೆ ಮಾಡುವುದಿಲ್ಲ ಆದ್ದರಿಂದ ದೇವರ ಹೆಸರಿನಲ್ಲಿ ನಮ್ಮ ಹಿರಿಯರು ಸಂಪ್ರದಾಯ ಹಾಕಿದ್ದಾರೆ ಎಂದು ತಿಳಿಸಿದರು.

ದೀಪಾವಳಿ ದೀಪದ ಹೊಳೆ ಆಗಬೇಕು ಆದರೆ ಇಂದು ಪಟಾಕಿ ಹೊಳೆ ಆಗಿದೆ ಎಂದು ವಿಷಾದಿಸಿದರು. ಜನರ ಹಿತಕ್ಕಾಗಿ ಸನಾತನ ಧರ್ಮ ತರಲಾಗಿದೆ ಎಂದು ಶ್ರೀಗಳು ತಿಳಿಸಿದರು.

ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ಪುರಾಣ ಸಮಿತಿಯವರು ಇದೇ ಧಾರ್ಮಿಕ ಕಾರ್ಯಕ್ರಮ ಮಾಡುತ್ತಾ ಹರಪನಹಳ್ಳಿ ನಗರದಲ್ಲಿ ಧರ್ಮ ಜಾಗೃತಿ ಮೂಡಲಿ ಎಂದು ತಿಳಿಸಿದರು.

ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲಿಗಿ ಪ್ರಶಾಂತ ಸ್ವಾಮೀಜಿ, ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಎಂ. ರಾಜಶೇಖರ, ಮುದುಕನವರ್‌ ಕೊಟ್ರೇಶಪ್ಪ, ಎಚ್.ಎಂ. ಕೊಟ್ರಯ್ಯ,ಕೆ.ಎಂ. ಮಂಜುನಾಥ, ಎಂ.ಪಿ.ಎಂ. ಶಾಂತವೀರಯ್ಯ, ಹುಳ್ಳಿ ಕೊಟ್ರೇಶಪ್ಪ, ನಿವೃತ್ತ ಶಿಕ್ಷಕ ಚಂದ್ರಶೇಖರ, ಸಾವಳಗಿ ಶಿವರಾಜ, ಎಂ.ವೀರಭದ್ರಪ್ಪ, ಪಿ.ಬಿ. ಗೌಡ, ಸಿ.ಎಂ. ಕೊಟ್ರಯ್ಯ, ಎಎಸ್‌ ಎಂ ಗುರುಪ್ರಸಾದ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಕೊರತೆ, ತೊಗರಿ ಬೆಳೆಗಾರ ಕಂಗಾಲು
ಚಿರತೆ ಉಗುರು ಸಂಗ್ರಹಿಸಿಟ್ಟ ಆರೋಪಿ ಬಂಧನ