ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಚೆನ್ನಮ್ಮಳ ಧೈರ್ಯವೇ ಪ್ರೇರಣೆ

KannadaprabhaNewsNetwork |  
Published : Oct 24, 2026, 02:30 AM IST
ಕಂಪ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ, ಬಿ.ವಿ.ಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಬ್ರಿಟಿಷರ ಕಂದಾಯ ನೀತಿ ವಿರೋಧಿಸಿ ಅವರ ಆಡಳಿತಕ್ಕೆ ಸವಾಲೆಸೆದ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾಳೆ.

ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಬ್ರಿಟಿಷರನ್ನು ದೇಶದಿಂದ ಹೊರ ಹಾಕಬೇಕೆಂಬ ವೀರರಾಣಿ ಕಿತ್ತೂರು ಚೆನ್ನಮ್ಮಳ ಸಂಕಲ್ಪಕ್ಕೆ ಅಂದಿನ ಇತರರು ಬೆಂಬಲವಾಗಿ ನಿಂತಿದ್ದರೆ ಭಾರತದ ಇತಿಹಾಸದ ಚಿತ್ರಣವೇ ಬದಲಾಗುತ್ತಿತ್ತು. ಬ್ರಿಟಿಷರ ಕಂದಾಯ ನೀತಿ ವಿರೋಧಿಸಿ ಅವರ ಆಡಳಿತಕ್ಕೆ ಸವಾಲೆಸೆದ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾಳೆ. ಆಕೆಯ ಧೈರ್ಯ, ಸಾಹಸ, ಹೋರಾಟದ ಮನೋಭಾವ ಮತ್ತು ಅಚಲ ದೇಶಪ್ರೇಮ ಇಂದಿನ ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ, ಪ್ರಭಾರ ಉಪತಹಸೀಲ್ದಾರ್ ಎಸ್.ಡಿ. ರಮೇಶ, ಶಿರಸ್ತೇದಾರ್ ಜಿ.ಪಂಪಾಪತಿ, ಜಿ. ಅಮರೇಗೌಡ, ಕನಕಗಿರಿ ರೇಣುಕಪ್ಪ, ನೀರಗಂಟಿ ವೀರೇಶ, ವಾಲ್ಮೀಕಿ ಈರಣ್ಣ, ಟಿ.ಎಚ್.ಎಂ. ರಾಜಕುಮಾರ, ಆಹಾರ ನಿರೀಕ್ಷಕ ಬಿ. ವಿರೂಪಾಕ್ಷಗೌಡ, ಕೃಷಿ ಅಧಿಕಾರಿ ಟಿ. ಜ್ಯೋತಿ, ಮಾಲತೇಶ ದೇಶಪಾಂಡೆ, ರಾಧಾ, ವೈಷ್ಣವಿ, ವನಿತಾ, ಸಂಗೀತಾ, ಎಸ್. ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಕೊರತೆ, ತೊಗರಿ ಬೆಳೆಗಾರ ಕಂಗಾಲು
ಚಿರತೆ ಉಗುರು ಸಂಗ್ರಹಿಸಿಟ್ಟ ಆರೋಪಿ ಬಂಧನ