ಅನಂತ ನಾಡಿಗ್
ಕಸಮುಕ್ತ ಪಟ್ಟಣವಾಗಿಸುವಲ್ಲಿ ಶ್ರಮಿಸಿ ಇತ್ತೀಚೆಗಷ್ಟೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿರಿ ಮಿರಿ ಮಿಂಚಿದ್ದ ತರೀಕೆರೆ ಪುರಸಭೆ, ಇದೀಗ ಈ ಹಾದಿಯಲ್ಲಿ ಇನ್ನಷ್ಟು ಮುಂದೆ ಸಾಗಲು, ಸಾರ್ವಜನಿಕರ ಆರೋಗ್ಯ, ಪಟ್ಟಣದ ಸೌಂದರ್ಯ, ಸ್ವಚ್ಛತೆ, ಒಳ್ಳೆ ಪರಿಸರ ಕಾಪಾಡುವ ಕಾರ್ಯಗಳಿಗೆ ಸಾಣೆ ಹಿಡಿಯವ ಕಾರ್ಯಕ್ಕೆ ಸದ್ದುಗದ್ದವಿಲ್ಲದೆ ಸಿದ್ಧಗೊಂಡಿದೆ.
ಯಾವುದೇ ಪುರಸಭೆ, ನಗರಸಭೆಗಳಿಗೆ ಕಸ ವಿಲೇವಾರಿ ಬಹು ದೊಡ್ಡ ಕೆಲಸ, ಜವಾಬ್ದಾರಿ, ಕ್ಲಿಷ್ಟವಾದ ಕಾರ್ಯ. ಪಟ್ಟಣ ವ್ಯಾಪ್ತಿಯಲ್ಲಿ ದಿನ ನಿತ್ಯ ತೆಗೆದಷ್ಟೂ ಕಸ ರಕ್ತ ಬೀಜಾಸುರನಂತೆ ಮತ್ತೆ ಮತ್ತೆ ಜೀವ ಪಡೆದುಕೊಳ್ಳತ್ತಲೇ ಇರುತ್ತದೆ. ತರೀಕೆರೆ ಪುರಸಭೆ ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ಒಣ ಕಸ, ಹಸಿ ಕಸ, ಉದ್ಯಾನವನಗಳ ಮರಗಳ ಎಲೆಗಳು ಹೀಗೆ ಒಂದೇ ಎರಡೇ ಕಸದ ನಾನಾ ರೂಪಗಳನ್ನು ದಿನ ಬೆಳೆಗಾಗುವುದರೊಳಗೆ ಶುಚಿಗೊಳಿಸಲೇಬೇಕು. ನಿಜಕ್ಕೂ ಇದು ಸವಾಲಿನ ಕೆಲಸವೇ ಹೌದು.ತರೀಕೆರೆ ಪುರಸಭೆ ಈ ಸವಾಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಕಸ ಸಂಗ್ರಹಣೆ, ಸಮರ್ಪಕ ವಿಲೇವಾರಿ ಹಾಗೂ ಕಸವನ್ನು ಆರ್ಥಿಕವಾಗಿ ಮರುಬಳಕೆ ಮಾಡಿಕೊಳ್ಳುವ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ದಿಟ್ಟ ಹೆಜ್ಜೆ ಇಟ್ಟು ಜನಮೆಚ್ಚುವಂತೆ ಯಶ ಸಂಪಾದಿಸಿದೆ.16 ಟನ್ ಕಸ:
ಈ ರೀತಿ ಕಾರ್ಯ ಸ್ಥಳೀಯ ಪುರಸಭೆ ತನ್ನ ಆದ್ಯ ಕರ್ತವ್ಯವೆಂದೇ ಪರಿಗಣಿಸಿ ಕಸ ಸಂಗ್ರಹಣೆ ಮತ್ತು ಅದರ ವಿಲೇವಾರಿಯಲ್ಲಿ ಶಿಸ್ತನ್ನು ಕಾಪಾಡಿಕೊಂಡು ಅಚ್ಚುಕಟ್ಟಾಗಿನಿರ್ವಹಿಸಿ, ಕಸವನ್ನು ವೈಜ್ಞಾನಿಕವಾಗಿ ಉತ್ಕೃಷ್ಟ ಗೊಬ್ಬರವನ್ನಾಗಿ ಮಾರ್ಪಡಿಸಿ, ಪುರಸಭೆ ಖಜಾನೆಗೆ ಲಾಭದಾಯಕವಾಗಿ ಆದಾಯ ಬರುವಂತೆ ಕಸವನ್ನು ನವೀಕರಿಸುತ್ತಿರುವುದೇ ಅಚ್ಚರಿಮೂಡಿಸುವ ವಿಶೇಷ ಸಂಗತಿಯಾಗಿದೆ.11 ಎಕರೆ ವಿಶಾಲವಾದ ಕಾಂಪೋಸ್ಟ್ ಯಾರ್ಡ್:
ದೇಶದಲ್ಲೇ ಬಹು ಅಪರೂಪ ಎನ್ನಲಾದ ದೇಶೀ ಮಾದರಿ ಕಪ್ಪು ಸೈನಿಕ ಹುಳು ಮೊಟ್ಟೆ ಉತ್ಪಾದಕ ಘಟಕ ಇಲ್ಲಿ ಸ್ಥಾಪಿಸಲಾಗಿದೆ. ವಿವಿಧ ಬಗೆ ಕಸ ಸಂಸ್ಕರಿಸಿ, ಪ್ರಕೃತಿದತ್ತವಾಗಿ ಕಪ್ಪು ಸೈನಿಕ ಹುಳುಗಳನ್ನು ಆಕರ್ಷಿಸಿ ಎರೆ ಹುಳು ಗೊಬ್ಬರ ತಯಾರಿಸುವ ಮಾದರಿಯಲ್ಲಿ ಕೇವಲ 25 ದಿನಗಳಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸಲಾಗುತ್ತಿದೆ. ಹೀಗೆ ತಯಾರಿಸಲಾದ ಗೊಬ್ಬರದ ಮಾದರಿ ಪ್ರಯೋಗಾಲಯಕ್ಕೆ ಕಳಿಸಿ ವರದಿ ಪಡೆಯಲಾಗಿದೆ. ಸ್ವಚ್ಛ ಸರ್ವೇಕ್ಷಣ್ ಯೋಜನೆ ನೆರವಿನಿಂದ ಕಾಂಪೋಸ್ಟ್ ಯಾರ್ಡ್‌ನಲ್ಲಿ ಸ್ಥಾಪಿಸಿರುವ ಅತ್ಯಾಧುನಿಕವಾದ ಯಂತ್ರಗಳ ಸಹಕಾರದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಉಪಯುಕ್ತವಾದ ಗೊಬ್ಬರ ತಯಾರಿಕಾ ಘಟಕವನ್ನು ಆರಂಭಿಸಲಿದ್ದು, ಶೀಘ್ರದಲ್ಲೇ ಪುರಸಭೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಲಿದ್ದಾರೆ. ಈ ಅಪರೂಪದ ಯಂತ್ರವನ್ನು ವೀಕ್ಷಿಸಲು ಜಿಲ್ಲಾಧಿಕಾರಿ ಮತ್ತಿತರ ಹಿರಿಯ ಅಧಿಕಾರಿಗಳ ತಂಡ ಕೂಡ ಘಟಕಕ್ಕೆ ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ "ಕನ್ನಡಪ್ರಭ " ಕ್ಕೆ ತಿಳಿಸಿದ್ದಾರೆ.ಯಾರ್ಡ್‌ನಲ್ಲೆ ಪ್ರಯೋಗ:
ತರೀಕೆರೆ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಕಾಯಿಲೆಗಳು ಪಟ್ಟಣ ಪ್ರವೇಶಿಸದಂತೆ ತಡೆಗಟ್ಟಿ, ಸಾರ್ವಜಿನಿಕರ ಆರೋಗ್ಯ ಕಾಪಾಡುವ ಹಿನ್ನೆಲೆ ಪುರಸಭೆ ಪೌರಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿ, ಟಿಪ್ಪರ್ ಚಾಲಕರು, ಟ್ರ್ಯಾಕ್ಟರ್ ಚಾಲಕರು, ಪುರಸಭೆ ದಫೇದಾರ್, ಸಿಬ್ಬಂದಿ ಪರಿಶ್ರಮ ಶ್ಲಾಘನೀಯವಾಗಿದ್ದು ಪುರಸಭೆಗೆ ಕೀರ್ತಿ ತಂದಿದ್ದಾರೆ ಎಂದು ಅವರು ತಿಳಿಸಿದ್ದು, ಶೀಘ್ರದಲ್ಲಿಯೇ ಪಟ್ಟಣದ ಸುಮಾರು 10 ಸಾವಿರ ಮನೆಗಳಿಗೆ ಡಸ್ಟ್ ಬಿನ್ ವಿತರಿಸಲಾಗುವುದು. ಅಲ್ಲದೆ ಕಸ ಸಂಗ್ರಹಣೆಗಾಗಿ ಎರಡು ಟಿಪ್ಪರ್ ಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ನಗರ ಹಸಿರೀಕರಣ:
ಹೆಚ್ಚು ವಿವಿಧ ಬಗೆ ಸಸಿ ನೆಟ್ಟು ಪೋಷಿಸಲಾಗಿದ್ದು ತನ್ಮೂಲಕ ಪಟ್ಟಣ ಹಸಿರೀಕರಣಗೊಳಿಸುವತ್ತ ಪುರಸಭೆ ಪಣ ತೊಟ್ಟಿದೆ.