- ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಡಿಸಿ ಪಿ.ಎನ್.ಲೋಕೇಶ್ ಅಭಿಮತ
ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಲಿರುವ ಭಾರತವು ದೊಡ್ಡ ಮೊತ್ತದ ಯುವಶಕ್ತಿಯನ್ನೂ ಹೊಂದಿದೆ. ಭವಿಷ್ಯದ ಯುವಶಕ್ತಿ ಆಗಲಿರುವ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಉತ್ತಮ ನಾಗರೀಕರಾಗಲು ಸಾಧ್ಯವಿದೆ ಎಂದು ದಾವಣಗೆರೆ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷ, ಹಿರಿಯ ವ್ಯಂಗ್ಯಚಿತ್ರಕಾರ ಡಾ. ಎಚ್.ಬಿ. ಮಂಜುನಾಥ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಾವಣಗೆರೆ ಜಿಲ್ಲಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಶಾಲಾ ಪರೀಕ್ಷೆ ಎದುರಿಸಲು ಪಠ್ಯ ಶಿಕ್ಷಣವು ಅನುಕೂಲವಾದರೆ, ಜೀವನದ ಪರೀಕ್ಷೆಗಳ ಎದುರಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯವಾಗಿವೆ. ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಗಳು ಇದಕ್ಕೆ ಪೂರಕವಾಗಿವೆ. 1907ರಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಅಧಿಕಾರಿ ಆಗಿದ್ದ ರಾಬರ್ಟ್ ಸ್ಟೀವನ್ ಸನ್ ಬೇಡೆನ್ ಪೊವೆಲ್ ಸ್ಕೌಟ್ಸ್ ಸಂಘಟನೆ ಹುಟ್ಟುಹಾಕಿದರು. ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾಗಿದ್ದ ಈ ಸಂಘಟನೆ ಈಗ ಪ್ರಪಂಚದ 216 ದೇಶಗಳಲ್ಲಿ 6 ಕೋಟಿಯಷ್ಟು ಸ್ಕೌಟ್ಸ್ ಮತ್ತು ಗೈಡ್ಸ್‌ಗಳನ್ನು ಹೊಂದಿದೆ ಎಂದರು.
ಪ್ರಶಸ್ತಿ, ಪುರಸ್ಕಾರ ಪ್ರದಾನ ಮಾಡಿದ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿ, ಶಾಲಾ ಜೀವನದಲ್ಲಿನ ಪಠ್ಯೇತರ ಚಟುವಟಿಕೆಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ ಆಗುತ್ತವೆ. ಮಕ್ಕಳು ಒಳ್ಳೆಯ ಕನಸುಗಳನ್ನು ಕಾಣಬೇಕು. ಅದರ ನನಸಿಗಾಗಿ ಕ್ರಿಯಾಶೀಲರಾಗಬೇಕು ಎಂದರು.
- - -
ದಾವಣಗೆರೆಯಲ್ಲಿ 1928ನೇ ಇಸವಿಯಲ್ಲಿ ಆರಂಭವಾದ ಸ್ಥಳೀಯ ಸ್ಕೌಟ್ ಸಂಸ್ಥೆ ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ, ಕೊಂಡಜ್ಜಿ ಬಸಪ್ಪ, ಚಿಗಟೇರಿ ಜಯಣ್ಣ, ಶಿವಶಂಕರ, ಶಿಕ್ಷಕರಾಗಿದ್ದ ಅ.ರಾ. ಶಂಕರಯ್ಯ ಮುಂತಾದ ಅನೇಕ ಮಹನೀಯರ ಪ್ರೋತ್ಸಾಹದಿಂದಾಗಿ ಬೆಳೆದು ಬಂದಿದೆ
- - - -24ಕೆಡಿವಿಜಿ36ಃ: