ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಅಕ್ಕಮಹಾದೇವಿ ರೇಂಜರ್ ಘಟಕದಿಂದ ನಾಲ್ಕು ದಿನಗಳ ಬೇಸಿಗೆ ಶಿಬಿರದ ಉದ್ಘಾಟಿಸಿ ಮಾತನಾಡಿ, ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸತತವಾಗಿ ಭಾಗವಹಿಸುವುದರಿಂದ ಅವರ ಆತ್ಮಬಲ ವೃದ್ಧಿಸಿಕೊಳ್ಳಲು ಈ ಘಟಕ ಸಹಾಯಕವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟನಾ ಶಿಕ್ಷಕರಾದ ಎನ್. ಬಿ. ಎಳ್ಳಿಗುತ್ತಿ ಮಾತನಾಡಿ, ರೇಂಜರ್ ವಿದ್ಯಾರ್ಥಿನಿಯರಲ್ಲಿ ನಾಯಕತ್ವ, ಸ್ವಾವಲಂಬನೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬಹುದು. ವಿದ್ಯಾರ್ಥಿನಿಯರು ನಾಲ್ಕು ಗೋಡೆಗಳ ಮಧ್ಯೆ ಕಲಿಕೆಯ ಜೊತೆಗೆ ಹೊರಗಿನ ಸಮಾಜ ಸಂಪರ್ಕದಿಂದಲೂ ಕಲಿಕೆ ಪಡೆಯಬೇಕು. ಈ ಘಟಕ ಅಂತಹ ಕಲಿಕೆಗೆ ಅವಕಾಶ ಕಲ್ಪಿಸುತ್ತಿದ್ದು, ಎಲ್ಲರೂ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.ಬಾಗಲಕೋಟೆ ಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕ ಪಿ ಕೆ. ಚೌಗುಲೆ ಮಾತನಾಡಿ, ಸೇವಾ ಮನೋಭಾವ ಬೆಳೆಸುವ ಈ ಸಂಸ್ಥೆಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಕೈಲಾದಷ್ಟು ದೇಶಸೇವೆ ಸಲ್ಲಿಸಿ ದೇಶದ ಋಣ ತೀರಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿರುವ ವಿವಿಧ ಅವಕಾಶ ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಸ್ಕೌಟ್ ಗೈಡ್ ಘಟಕದ ರೇಂಜರ್ ಲೀಡರ್ ವಂದನಾ ಸತ್ತಿಗೇರಿ ಹಾಗೂ ಐಕ್ಯೂಎಸಿ ಸಂಯೋಜಕರಾದ ಪಿ.ಕೆ. ಚೌಗುಲಾ ಉಪಸ್ಥಿತರಿದ್ದರು. ರೇಂಜರ್ ವಿದ್ಯಾರ್ಥಿನಿಯಾದ ಕೀರ್ತಿ ಪಾಟೀಲ ಹಾಗೂ ಉಮಾ ಸಾಲಿಮಠ ನಿರೂಪಿಸಿ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.