ಶಿಲ್ಪಿ ಜಕಣಾಚಾರಿ ಎಂದೆಂದಿಗೂ ಅಮರ

KannadaprabhaNewsNetwork |  
Published : Jan 02, 2026, 02:30 AM IST
1 ಟಿವಿಕೆ 1 – ತುರುವೇಕೆರೆ ತಾಲೂಕು ಕಛೇರಿಯಲ್ಲಿ ನಡೆದ ಅಮರ ಶಿಲ್ಪಿ ಜಕಣಾಚಾರಿಯವರ ಜನ್ಮ ದಿನಾಚರಣೆ ಅಂಗವಾಗಿ ವಿಶ್ವಕರ್ಮ ಸಮಾಜದ ಹಿರಿಯರಾದ ಬೆಟ್ಟಾಚಾರ್ ಮತ್ತು ಜಗದೀಶಾ ಚಾರ್ ರವರನ್ನು ಗೌರವಿಸಲಾಯಿತು. | Kannada Prabha

ಸಾರಾಂಶ

ತುರುವೇಕೆರೆ: ಅಮರ ಶಿಲ್ಪಿ ಜಕಣಾಚಾರಿ ಎಂದೆಂದಿಗೂ ಅವರು ಅಮರರಾಗಿದ್ದಾರೆಂದು ತಾಲೂಕು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ದೇವರಾಜು ಹೇಳಿದರು.

ತುರುವೇಕೆರೆ: ಅಮರ ಶಿಲ್ಪಿ ಜಕಣಾಚಾರಿ ಎಂದೆಂದಿಗೂ ಅವರು ಅಮರರಾಗಿದ್ದಾರೆಂದು ತಾಲೂಕು ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ದೇವರಾಜು ಹೇಳಿದರು.

ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ನಡೆದ ಅಮರ ಶಿಲ್ಪಿ ಜಕಣಾಚಾರಿಯವರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ಜಕಣಾಚಾರಿಯವರು ತುಮಕೂರು ಜಿಲ್ಲೆಯ ಕೈದಾಳದ ಹೆಮ್ಮೆಯ ಪುತ್ರರು ಎಂಬುದು ಹೆಮ್ಮೆಯ ವಿಷಯ. ಅವರು ಕೆತ್ತನೆ ಮಾಡಿರುವ ಹಲವಾರು ದೇಗುಲಗಳು ಇಂದಿಗೂ ಜನರ ಮನಸೂರೆಗೊಂಡಿದೆ. ಬೇಲೂರು, ಹಳೇಬೀಡು, ಸೋಮನಾಥಪುರ, ತುಮಕೂರು ಜಿಲ್ಲೆಯ ತುರುವೇಕೆರೆಯ ಗಂಗಾಧರೇಶ್ವರ, ಮೂಲೇಶಂಕರೇಶ್ವರ ಮತ್ತು ಚನ್ನಿಗರಾಯಸ್ವಾಮಿ ದೇವಾಲಯವೂ ಸೇರಿರುವುದು ಸಂತಸವಾಗಿದೆ. ನೂರಾರು ವರ್ಷಗಳ ಹಿಂದೆ ಅವರು ಮಾಡಿರುವ ಸಾಧನೆ ಇಂದಿಗೂ ಜನಮಾನಸದಲ್ಲಿ ಉಳಿದಿದೆ ಎಂದರು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಹಿರಿಯರಾದ ತಂಡಗದ ಬೆಟ್ಟಾಚಾರ್, ಜಗದೀಶಾಚಾರ್ ರವರನ್ನು ಸಮಾಜದ ಅಧ್ಯಕ್ಷ ಟಿ.ಎನ್.ಅರುಣ್ ರವರ ನೇತೃತ್ವದಲ್ಲಿ ಗೌರವಿಸಲಾಯಿತು. ಈ ವೇಳೆ ತಹಸೀಲ್ದಾರ್ ಗ್ರೇಡ್ 2 ಸುಮತಿ, ಶಿರಸ್ತೇದಾರ್ ಸುನಿಲ್. ವಿಶ್ವಕರ್ಮ ಸಮಾಜದ ಅಧ್ಯಕ್ಷ ಟಿ.ಎನ್.ಅರುಣ್, ಉಪಾಧ್ಯಕ್ಷರಾದ ಪ್ರೇಮ್ ಕುಮಾರ್, ನಾಗರಾಜಾಚಾರ್, ಪ್ರಧಾನ ಕಾರ್ಯದರ್ಶಿ ಸತೀಶ್, ನಿರ್ದೇಶಕರಾದ ನಂದೀಶ್, ಕುಮಾರ್, ಮಂಜುನಾಥ್, ವೀರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ