ಬೆಳ್ತಂಗಡಿ: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ 58 ವರ್ಷದ ವ್ಯಕ್ತಿಯೊಬ್ಬರಿಗೆ ಯಶಸ್ವಿಯಾಗಿ ನರಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮಹತ್ವದ ಸಾಧನೆ ಮಾಡಿದ್ದಾರೆ.
ಓಮಯಾಲ ಸರ್ವಾಯರ್ ಎಂಬ ಸಣ್ಣ ಉಪಕರಣ బಳಸಿ ಯಶಸ್ವಿಯಾಗಿ ಮೆದುಳಿನಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ದ್ರವ ಮತ್ತು ರಕ್ತವನ್ನು ತೆಗೆಯಲಾಯಿತು. ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ರಕ್ತದೊತ್ತಡ ಮತ್ತು ಇತರ ದೈಹಿಕ ತೊಂದರೆಗಳು ನಿಯಂತ್ರಣಕ್ಕೆ ಬಂದ ಬಳಿಕ ರೋಗಿಯನ್ನು ಡಿಸ್ಟಾರ್ಜ್ ಮಾಡಲಾಯಿತು, ಪ್ರಸ್ತುತ ರೋಗಿಯು ಆರೋಗ್ಯವಂತರಾಗಿದ್ದಾರೆ ಎಂದು ಇಲ್ಲಿನ ನ್ಯೂರೋ ಸರ್ಜನ್ ಡಾ. ಅರುಣ್.ಎಸ್ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.1.23 . ಕೋ.ರು. ಖರ್ಚು ಮಾಡಿ ಒದಗಿಸಿದ ಸೌಲಭ್ಯ: ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಖ್ಯಾತ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ಅರುಣ್ ಕುಮಾರ್ ಪ್ರತಿದಿನ ಲಭ್ಯವಿದ್ದು, ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಇವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರಲ್ಲಿ ನ್ಯೂರೋ ಸರ್ಜರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿನಂತಿಸಿಕೊಂಡಾಗ ತಕ್ಷಣವೇ ಸ್ಪಂದಿಸಿದ ಅವರು, ಇದಕ್ಕಾಗಿ 1.23 . ಕೋ.ರು. ಖರ್ಚು ಮಾಡಿ ಒದಗಿಸಿದ ಸೌಲಭ್ಯಗಳಿಂದ ಕಳೆದ ಒಂದು ತಿಂಗಳಲ್ಲಿ ನರರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲದೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಾದ 8 ಮೆದುಳಿನ ಶಸ್ತ್ರಚಿಕಿತ್ಸೆ ಮತ್ತು ಒಂದು ಬೆನ್ನುಹುರಿಯ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಅತ್ಯಾಧುನಿಕ ಸೌಲಭ್ಯ: ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನ್ಯೂರೋ ಪರೀಕ್ಷೆಗಾಗಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಇದ್ದು ಅತ್ಯಾಧುನಿಕ ಎಐ ಆಧಾರಿತ ಸೀಮೆನ್ಸ್ ಎಂ.ಆರ್. ಐಸ್ಕ್ಯಾನ್ ಕೂಡ ಇತ್ತೀಚೆಗೆ ಅಳವಡಿಸಲಾಗಿದೆ. ಇದಲ್ಲದೆ ನ್ಯೂರೋ ಸರ್ಜರಿಗಾಗಿ ಮಾಡ್ಯುಲರ್ ಓಟಿ, ಶಸ್ತ್ರಚಿಕಿತ್ಸೆಗೆ ಅವಶ್ಯಕವಾದ ಅತ್ಯಾಧುನಿಕ ಮೈಕ್ರೋಸ್ಕೋಪಿ, ಕ್ಯೂಸಾಯಂತ್ರ ಮತ್ತು ಡ್ರಿಲ್ ಯಂತ್ರಗಳಿವೆ. ನ್ಯೂರೋತಜ್ಞ ವೈದ್ಯರು, ಅನುಭವಿ ಅರೆವಳಿಕೆ ತಜ್ಞರು ಮತ್ತು ಓಟಿ. ಐಸಿಯು ತಂತ್ರಜ್ಞರು ಹಾಗೂ ನುರಿತ ದಾದಿಯರ ತಂಡವನ್ನು ಹೊಂದಿದೆ. ಇದರಿಂದ ಬಹಳ ಮುಖ್ಯವಾದ ನ್ಯೂರೋ ಸರ್ಜರಿ ನಡೆಸಲು ಬೇಕಾಗಿರುವ ಸೌಲಭ್ಯಗಳನ್ನು ಈ ಆಸ್ಪತ್ರೆ ಹೊಂದಿದೆ.