ಗೋಣಿಕೊಪ್ಪ: ಅತ್ಯುತ್ತಮ ಎಸ್ ಡಿ ಎಂಸಿ ಪ್ರಶಸ್ತಿಗೆ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. 2025-26ನೇ ಸಾಲಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನೀಡುವ ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯವೈಖರಿಯನ್ನು ಪರಿಗಣಿಸಿ ನೀಡುವ ಅತ್ಯುತ್ತಮ ಜಿಲ್ಲಾಮಟ್ಟದ ಪ್ರಶಸ್ತಿ ಇದಾಗಿದೆ.
ಮುಖ್ಯ ಶಿಕ್ಷಕ ಸೇರಿದಂತೆ ಸುಮಾರು 15 ಸಹ ಶಿಕ್ಷಕರು ಇದ್ದಾರೆ. 2.40 ಎಕರೆ ವಿಸ್ತೀರ್ಣದಲ್ಲಿ ಮಕ್ಕಳ ಕಲಿಗೆ ಅನುಕೂಲಕರವಾದ ವಾತಾವರಣವನ್ನುಕಟ್ಟಿಕೊಡಲಾಗಿದೆ. 2015 ರಿಂದಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲಾಗಿದ್ದು, ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಯುಕೋಕ್ಲಬ್, ಚಿತ್ರಕಲಾ ಸಂಘ, ವಿಜ್ಞಾನ ಸಂಘ, ಕ್ರೀಡಾ ಸಂಘಗಳು ಕ್ರಿಯಾಶೀಲವಾಗಿವೆ. ತಂತ್ರಜ್ಞಾನದ ಬಳಕೆಯಲ್ಲಿ ಮುಂದುವರಿದಿದ್ದು, ಪ್ರಾಜೆಕ್ಟರ್, ಕಂಪ್ಯೂಟರ್ ಉಪಯೋಗಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ. ಪ್ರಶಸ್ತಿ ದೊರೆತ ಸಂಭ್ರಮವನ್ನು ಹಂಚಿಕೊಂಡ ಎಸ್‌ಡಿಎಂಸಿ ಅಧ್ಯಕ್ಷಜಗದೀಶ್ ಜೋಡುಬೀಟಿ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗಿದೆ. ಶಾಲೆಯ ವಾತಾವರಣದಲ್ಲಿ ಮತ್ತಷ್ಟು ಸೃಜನಶೀಲತೆಯನ್ನು ತರುವ ಪ್ರಯತ್ನಕ್ಕೆ ಸಮಿತಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆಕುಮಾರ್ ಮಾತನಾಡಿ, ಶಾಲೆಯಲ್ಲಿನ ಸಮರ್ಪಕ ನಿರ್ವಹಣೆಯ ಹಿನ್ನೆಲೆಯ ಜೊತೆಗೆ ಸ್ಥಳೀಯ ದಾನಿಗಳು ಮತ್ತು ಪಂಚಾಯತಿಯ ಸಹಕಾರದೊಂದಿಗೆ ಬಹುತೇಕವಾಗಿ ಶಾಲೆಯ ವಾತಾವರಣವನ್ನು ಕಲಿಕೆಯ ಪ್ರಯೋಗಕ್ಕೆ ವಿಸ್ತರಿಸಲಾಗಿದೆ.ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಬೇಕಾದಎಲ್ಲ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗುತ್ತಿದೆ.ಈ ನಿಟ್ಟಿನಲ್ಲಿ ಸ್ಥಳೀಯ ದಾನಿಗಳ ಸಹಕಾರ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘದ ಸಹಕಾರ ಬಹು ಪ್ರಾಮುಖ್ಯತೆಯಾಗಿದೆ ಶಾಲೆಯನ್ನು ಮತ್ತಷ್ಟು ಮಕ್ಕಳ ಕಲಿಕೆಯ ಕಡೆ ಕೊಂಡೊಯ್ಯುವ ಚಿಂತನೆ ಹೊಂದಲಾಗಿದೆ ಎಂದು ಹೇಳಿದರು.