ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 19161 ವಿದ್ಯಾರ್ಥಿಗಳಲ್ಲಿ 13308 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಗೆ ಶೇ.69.45 ರಷ್ಟು ಫಲಿತಾಂಶ ಬಂದಿದ್ದು ರಾಜ್ಯದಲ್ಲಿ 20ನೇ ಸ್ಥಾನ ಪಡೆದಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಬಸಪ್ಪ ತಿಳಿಸಿದ್ದಾರೆ.
- ರಾಜ್ಯದಲ್ಲಿ 20ನೇ ಸ್ಥಾನ, ಕಳೆದ ಸಾಲಿನಲ್ಲಿ 21ನೇ ಸ್ಥಾನದಲ್ಲಿದ್ದ ಜಿಲ್ಲೆ
- ಪಿಯು ಪರೀಕ್ಷೆ ಬರೆದ 19161ರಲ್ಲಿ 13308 ವಿದ್ಯಾರ್ಥಿಗಳು ಉತ್ತೀರ್ಣ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 19161 ವಿದ್ಯಾರ್ಥಿಗಳಲ್ಲಿ 13308 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಜಿಲ್ಲೆಗೆ ಶೇ.69.45 ರಷ್ಟು ಫಲಿತಾಂಶ ಬಂದಿದ್ದು ರಾಜ್ಯದಲ್ಲಿ 20ನೇ ಸ್ಥಾನ ಪಡೆದಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕರಿಬಸಪ್ಪ ತಿಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ 11402 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 9451 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 82.89, ವಾಣಿಜ್ಯ ವಿಭಾಗದಲ್ಲಿ 3790 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಈ ಪೈಕಿ 2296 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ 60.58, ಕಲಾ ವಿಭಾಗದಲ್ಲಿ 3969 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅದರಲ್ಲಿ 1561 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 39.33 ರಷ್ಟು ಫಲಿತಾಂಶ ಪಡೆಯಲಾಗಿದೆ.
ಉತ್ತೀರ್ಣರಾದವರಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಟ್ಟಾರೆ 3244 ವಿದ್ಯಾರ್ಥಿಗಳ ಪೈಕಿ 1936 ವಿದ್ಯಾರ್ಥಿಗಳು ಉತ್ತೀರ್ಣ ಆಗುವುದರೊಂದಿಗೆ ಶೇ.59.68 ಮತ್ತು ನಗರ ಪ್ರದೇಶದಲ್ಲಿ 15917 ವಿದ್ಯಾರ್ಥಿಗಳ ಪೈಕಿ 11372 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.71.45 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ 69.45 ಹಾಗೂ ರಾಜ್ಯಮಟ್ಟದಲ್ಲಿ 20ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಜಿಲ್ಲೆ ಫಲಿತಾಂಶ 21ನೇ ಸ್ಥಾನದಲ್ಲಿತ್ತು. ಈ ಬಾರಿ ಜಿಲ್ಲೆ ಒಂದು ಸ್ಥಾನ ಏರಿಕೆ ಕಾಣುವ ಮೂಲಕ ಫಲಿತಾಂಶ ಪ್ರಮಾಣ ಹೆಚ್ಚಿಸಿಕೊಂಡಂತಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.