ದ್ವಿತೀಯ ಪಿಯು ಪರೀಕ್ಷೆ: ಜಿಲ್ಲೆಗೆ ಶೇ.73.97 ಫಲಿತಾಂಶ

KannadaprabhaNewsNetwork | Published : Apr 9, 2025 12:31 AM

ಸಾರಾಂಶ

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಚಾಮರಾಜನಗರ ಜಿಲ್ಲೆಯು ಶೇ.73.97ರಷ್ಟು ಫಲಿತಾಂಶ ಪಡೆದಿದ್ದು ರಾಜ್ಯದಲ್ಲಿ 13ನೇ ಸ್ಥಾನ ಪಡೆದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಚಾಮರಾಜನಗರ ಜಿಲ್ಲೆಯು ಶೇ.73.97ರಷ್ಟು ಫಲಿತಾಂಶ ಪಡೆದಿದ್ದು ರಾಜ್ಯದಲ್ಲಿ 13ನೇ ಸ್ಥಾನ ಪಡೆದಿದೆ.ಹಿಂದಿನ ವರ್ಷದಲ್ಲಿ ಜಿಲ್ಲೆಯು ಶೇ.84.99 ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ 14ನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶದಲ್ಲಿ ಸುಧಾರಣೆಯಾಗಿದ್ದು 13ನೇ ಸ್ಥಾನಕ್ಕೆ ಬಂದಿದೆ. ಒಟ್ಟು 6488 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 4799 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ ಬಾಲಕರ ಸಂಖ್ಯೆ 3064 ಇದ್ದು ಇವರಲ್ಲಿ 1876 ಬಾಲಕರು ತೇರ್ಗೆಡೆಯಾಗಿದ್ದಾರೆ. ಶೇಕಡವಾರು ಫಲಿತಾಂಶ ಶೇ. 61.23ರಷ್ಟಿದೆ. ಪರೀಕ್ಷೆಗೆ ಹಾಜರಾದವರಲ್ಲಿ ಬಾಲಕಿಯರ ಸಂಖ್ಯೆ 4028 ಇದ್ದು ಇವರಲ್ಲಿ 3059 ಬಾಲಕಿಯರು ತೇರ್ಗೆಡೆಯಾಗಿದ್ದಾರೆ. ಶೇಕಡವಾರು ಫಲಿತಾಂಶ ಶೇ.75.94 ರಷ್ಟಿದೆ.

ಕಲಾ ವಿಭಾಗದಲ್ಲಿ ಒಟ್ಟು 2122 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1122 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 62.3ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 2343 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1873 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.79.94ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 2023 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1604 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ. 79.29ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ 4700 ಇವರಲ್ಲಿ ಉತ್ತೀರ್ಣರಾದವರ ಸಂಖ್ಯೆ 3463 ಇದ್ದು, ಶೇ. 73.68ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ 1788 ಇದ್ದು, ಇವರಲ್ಲಿ ಉತ್ತೀರ್ಣರಾದವರ ಸಂಖ್ಯೆ 1336 ಆಗಿದ್ದು ಶೇ.74.72ರಷ್ಟು ಫಲಿತಾಂಶ ಬಂದಿದೆ.

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ:ಕಲಾ ವಿಭಾಗ:

ಅಶ್ವಿನಿ. ಬಿ, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 573 (ಶೇ.95.50), ಕಾವ್ಯ ಎಂ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕಬ್ಬಳ್ಳಿ, ಪಡೆದ ಅಂಕ 573 (ಶೇ.95.50), ಮನೋಜ್ ಕುಮಾರ್, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಾಮರಾಜನಗರ, ಪಡೆದ ಅಂಕ 572 (ಶೇ.95.30), ಹರ್ಷಿತ ಎಂ.ಕೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಆಲೂರು, ಪಡೆದ ಅಂಕ 571 (ಶೇ.95.16).ವಾಣಿಜ್ಯ ವಿಭಾಗ:

ಮಹೇಶ್. ಎನ್, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 589 (ಶೇ.98.16), ಸುಪ್ರೀತಾ. ಕೆ, ಬ್ರೈಟ ಪದವಿ ಪೂರ್ವ ಕಾಲೇಜು, ಚಾಮರಾಜನಗರ, ಪಡೆದ ಅಂಕ 586 (ಶೇ.97.66), ತನುಶ್ರೀ ಹೆಚ್., ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 584 (ಶೇ.97.33),ವಿಜ್ಞಾನ ವಿಭಾಗ:

ಅಮೃತಾ. ವಿ, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 584 (ಶೇ.97.33), ಪ್ರೀಯಾ. ಆರ್, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 583 (ಶೇ.97.16), ಯತೀನ್ ಗೌಡ. ಪಿ, ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 583 (ಶೇ.97.16), ಜೀವನ್. ಎಸ್. ನಿಸರ್ಗ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ, ಪಡೆದ ಅಂಕ 581 (ಶೇ.96.83), ಪ್ರಭಾಮಣಿ ಕೆ.ಪಿ, ಮುರುಘರಾಜೇಂದ್ರ ಪದವಿ ಪೂರ್ವ ಕಾಲೇಜು, ಮರಿಯಾಲ, ಪಡೆದ ಅಂಕ 581 (ಶೇ. 96.83), ಸಾನಿಕಾ. ಜಿ, ಶ್ರೀ ವಾಸವಿ ಪದವಿ ಪೂರ್ವ ಕಾಲೇಜು ಕೊಳ್ಳೇಗಾಲ, ಪಡೆದ ಅಂಕ 581 (ಶೇ.96.83) ಆಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ತಿಳಿಸಿದ್ದಾರೆ.

Share this article