ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಮಹತ್ತರ ತಿರುವು: ಮಧು ಜಿ.ಮಾದೇಗೌಡ

KannadaprabhaNewsNetwork |  
Published : Aug 11, 2025, 12:30 AM IST
10ಕೆಎಂಎನ್ ಡಿ17 | Kannada Prabha

ಸಾರಾಂಶ

ಪಿಯು ಮತ್ತು ಪದವಿ ಸೇರಿ 5 ವರ್ಷಗಳು ವಿದ್ಯಾರ್ಥಿ ಜೀವನದ ಮಹತ್ತರ ತಿರುವು. ಈ ವೇಳೆ ಕಠಿಣ ಪರಿಶ್ರಮ ವಹಿಸಿದರೆ ಭವಿಷ್ಯದಲ್ಲಿ ಐಎಎಸ್ ಮತ್ತು ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದಾರಿದೀಪವಾಗಲಿದೆ. ನಿಮ್ಮ ಮುಂದಿನ ಜೀವನ ಉತ್ತಮವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರವಾದ ತಿರುವಾದ ದ್ವಿತೀಯ ಪಿಯುಸಿಯಲ್ಲಿ ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿದರೇ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಕಿವಿಮಾತು ಹೇಳಿದರು.

ಭಾರತೀ ವಿದ್ಯಾ ಸಂಸ್ಥೆ ಕುವೆಂಪು ಸಭಾಂಗಣದಲ್ಲಿ ಭಾರತೀ ಪದವಿ ಪೂರ್ವ ಕಾಲೇಜು ಆಯೋಜಿಸಿ ಕ್ರೀಡಾ-ಸಾಂಸ್ಕೃತಿಕ, ರಾಷ್ಟ್ರೀಯ ಸೇವೆ ಯೋಜನೆ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಿಯು ಮತ್ತು ಪದವಿ ಸೇರಿ 5 ವರ್ಷಗಳು ವಿದ್ಯಾರ್ಥಿ ಜೀವನದ ಮಹತ್ತರ ತಿರುವು. ಈ ವೇಳೆ ಕಠಿಣ ಪರಿಶ್ರಮ ವಹಿಸಿದರೆ ಭವಿಷ್ಯದಲ್ಲಿ ಐಎಎಸ್ ಮತ್ತು ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದಾರಿದೀಪವಾಗಲಿದೆ. ನಿಮ್ಮ ಮುಂದಿನ ಜೀವನ ಉತ್ತಮವಾಗಿರುತ್ತದೆ ಎಂದರು.

ಶಿಕ್ಷಕರು ಕೊಡುವ ನೋಟ್ಸ್ ಗೆ ಸೀಮಿತವಾಗದೆ ನೀವು ಅಧ್ಯಯನಕ್ಕೆ ಪೂರಕವಾದ ಪಠ್ಯ ಪುಸ್ತಕವನ್ನು ಅಭ್ಯಾಸ ಮಾಡಬೇಕು. ಹೆಣ್ಣು ಮಕ್ಕಳು ತುಂಬಾ ಚೆನ್ನಾಗಿ ಓದುತ್ತಾರೆ. ಇದೇ ಸಮಯದಲ್ಲಿ ಗಂಡು ಮಕ್ಕಳು ಮನಸ್ಸಿನ ಚಂಚಲತೆ ಬಿಟ್ಟು ಓದಿನ ಕಡೆ ಹೆಚ್ಚು ಗಮನ ನೀಡಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಗಮನ ಹರಿಸಿ ಎಂದರು.

ಹಾಡು, ನೃತ್ಯ, ಆಟ ಇವು ಕೂಡ ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯ, ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಯಾವ ವಿಷಯಗಳು ಆಯ್ಕೆ ಮಾಡಿದರೂ ಎಲ್ಲ ವಿಷಯಗಳು ಶ್ರೇಷ್ಠವೇ ಆಗಿದೆ. ನೀವು ಓದಬೇಕು ಅಷ್ಟು. ಆಗ ಉತ್ತಮ ಅಂಕಗಳು ಲಭಿಸಲಿವೆ ಎಂದರು.

ಸಂಪನ್ಮೂಲ ವ್ಯಕ್ತಿ, ಮನಶಾಸ್ತ್ರಜ್ಞ ಬಿ.ಎಚ್.ಸಂದೀಪ್ ಮಾತನಾಡಿ, ಮಾನಸಿಕ ಆರೋಗ್ಯ ಭಾವನಾತ್ಮಕ ಮತ್ತು ನಡವಳಿಕೆ ಹೊಂದಾಣಿಕೆಯ ತೃಪ್ತಿದಾಯಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿ ಮಾನಸಿಕ ಸ್ಥಿತಿ ಮತ್ತು ಜೀವನವನ್ನು ಆನಂದಿಸುವ ಮತ್ತು ಚಟುವಟಿಕೆಗಳ ನಡುವೆ ಸಮತೋಲನವನ್ನು ಸೃಷ್ಟಿಸುವ ವೈಯಕ್ತಿಕ ಸಾಮರ್ಥ್ಯವನ್ನು ಒಳಗೊಂಡಿದೆ ಎಂದರು. ಪ್ರಾಜೆಕ್ಟ್ ಕಿರುಚಿತ್ರಗಳು ಮತ್ತು ವಿಡಿಯೋ ತೋರಿಸಿ ವಿದ್ಯಾರ್ಥಿಗಳಿಗೆ ಹಲವು ಮಾರ್ಗದರ್ಶನ ಮಾಡಿದರು.

ವಿಜ್ಞಾನಿ ಡಾ.ಎಚ್.ಗುಣಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಎಸ್.ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜಿ.ಬಿ ಪಲ್ಲವಿ, ದೈಹಿಕ ಶಿಕ್ಷಕರಾದ ಸುನಿಲ್ ಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಚೇತನ್ ಜುಂಜೀರ್, ರಾಷ್ಟ್ರೀಯ ಸೇವೆ ಯೋಜನೆ ಸಂಚಾಲಕ ಶ್ರೀದತ್ತ, ಅಧ್ಯಾಪಕರು, ಅಧ್ಯಾಪಕೇಕರು ಹಾಜರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ