ಪಾಂಡವಪುರ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ ಶಾಸ್ತ್ರ

KannadaprabhaNewsNetwork |  
Published : Aug 15, 2024, 01:45 AM IST
14ಕೆಎಂಎನ್ ಡಿ15 | Kannada Prabha

ಸಾರಾಂಶ

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಪೇದೆ ತುಂಬು ಗರ್ಭಿಣಿಯಾಗಿದ್ದ ಚಂದ್ರಿಕಾ ಅವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಸಬ್ ಇನ್ಸ್ ಪೆಕ್ಟರ್ ಆರ್.ಬಿ.ಉಮೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಆತ್ಮೀಯತೆಯಿಂದ ಠಾಣೆಯಲ್ಲಿ ಹಿಂದೂ ಸಂಪ್ರದಾಯದಂತೆ ಸೀಮಂತ ಮಾಡಿ ಆರ್ಶೀವಾಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತಶಾಸ್ತ್ರ ಮಾಡಲಾಯಿತು.

ನಿತ್ಯ ಖಾಕಿ ವಸ್ತ್ರ ಧರಿಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆ ಚಂದ್ರಿಕಾ ಅವರಿಗೆ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗದಿಂದ ಸಂಪ್ರದಾಯದಂತೆ ಸೀಮಂತ ಶಾಸ್ತ್ರ ನೆರವೇರಿಸಲಾಯಿತು.

ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಪೇದೆ ತುಂಬು ಗರ್ಭಿಣಿಯಾಗಿದ್ದ ಚಂದ್ರಿಕಾ ಅವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಸಬ್ ಇನ್ಸ್ ಪೆಕ್ಟರ್ ಆರ್.ಬಿ.ಉಮೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಆತ್ಮೀಯತೆಯಿಂದ ಠಾಣೆಯಲ್ಲಿ ಹಿಂದೂ ಸಂಪ್ರದಾಯದಂತೆ ಮಡಿಲಕ್ಕಿ ಹಾಕಿ, ಕೊಬ್ಬರಿ, ಬೆಲ್ಲ, ತೆಂಗಿನಕಾಯಿ ನೀಡಿ, ಅರಿಶಿನ, ಕುಂಕುಮ ಹಚ್ಚಿ, ಹಸಿರು ಬಳೆ ತೊಡಿಸಿ ಸೀಮಂತ ಮಾಡಿ ಆರ್ಶೀವಾಸಿದರು.

ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ವರ್ಗಕ್ಕೆ ಸೀಮಂತ ಸ್ವೀಕರಿಸಿದ ಮಹಿಳಾ ಪೇದೆ ಚಂದ್ರಿಕಾ ಧನ್ಯವಾದ ಹೇಳಿದರು.

ಹೆದ್ದಾರಿಯಲ್ಲಿ ಅತಿವೇಗದ ಚಾಲನೆ 90 ಪ್ರಕರಣಗಳು ದಾಖಲು

ಮದ್ದೂರು:

ಸಂಚಾರಿ ಠಾಣೆ ವ್ಯಾಪ್ತಿಯ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅತಿ ವೇಗವಾಗಿ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ವಾಹನ ಚಾಲಕರ ವಿರುದ್ಧ ಕಳೆದ 15 ದಿನಗಳಿಂದ 90 ಪ್ರಕರಣಗಳನ್ನು ದಾಖಲಿಸಿ ಕೊಂಡು ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಲಾಗಿದೆ.

ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಅವರ ಆದೇಶದ ಮೇರೆಗೆ ಸಂಚಾರಿ ಠಾಣೆ ಪಿಎಸ್ಐ ಜೆ.ಇ.ಮಹೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ನಿಡಘಟ್ಟ ಸಮೀಪದ ರುದ್ರಾಕ್ಷಿಪುರ ಹಾಗೂ ಗೆಜ್ಜಲಗೆರೆ ಮಾರ್ಗದ ಹೆದ್ದಾರಿಯಲ್ಲಿ 130 ಕಿಲೋ ಮೀಟರ್‌ಗಿಂತ ಅತಿ ವೇಗದಲ್ಲಿ ಚಾಲನೆ ಮಾಡಿದ ವಾಹನಗಳ ಬಗ್ಗೆ ಎನ್‌ಪಿಆರ್ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಆದರಿಸಿ 90 ವಾಹನಗಳ ಮತ್ತು ಚಾಲಕರ ವಿರುದ್ಧ ಬಿಎಸ್ಎನ್ ಮತ್ತು 184 ಮೋಟಾರ್ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕೆ ಎಫ್ಐಆರ್ ಸಲ್ಲಿಸಲಾಗಿದೆ ಎಂದು ಸಂಚಾರಿ ಠಾಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾ.27ಕ್ಕೆ ಜಿಬಿಎ ಮೊದಲ ಬಜೆಟ್‌ ಮಂಡನೆ: ಹಲವು ನಿರೀಕ್ಷೆ
ಐಪಿಎಲ್ ಪಂದ್ಯಾ‍‍ವಳಿ ಭದ್ರತೆಗೆ 2000 ಪೊಲೀಸರ ನಿಯೋಜನೆ