ಕನ್ನಡಪ್ರಭ ವಾರ್ತೆ ತಾಳಿಕೋಟೆ
ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸಿ.ಎಸ್. ನಾಡಗೌಡ ಅಪ್ಪಾಜಿ ಅವರು ಕಳೆದ ೫೦ ವರ್ಷಗಳ ರಾಜಕಾರಣದಲ್ಲಿ ಕಳಂಕ ರಹಿತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಲ್ಲಿರುವ ಅನುಭವ ಬಹಳ ದೊಡ್ಡದಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವ ಸುವರ್ಣಾವಕಾಶ ಕಾಂಗ್ರೆಸ್ ಪಕ್ಷದವರಿಗೆ ಒದಗಿಬಂದಿದೆ. ರಾಜ್ಯದ ಸರ್ವ ಜನರ ನಾಡಿ ಮಿಡಿತ ಅರಿತ ಅತ್ಯಂತ ಹಿರಿಯ ಶಾಸಕರಾಗಿರುವ ಅಪ್ಪಾಜಿ ನಾಡಗೌಡರ ಮನೆತನ ಬ್ರಿಟಿಷರ ಕಾಲದಿಂದಲೂ ದೇಶಕ್ಕಾಗಿ ಅನನ್ಯ ಸೇವೆ ಸಲ್ಲಿಸಿದ ಕುಟುಂಬವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಡಗೌಡರ ಮನೆತನ ಯಾವತ್ತಿಗೂ ಹಣ ಹಿಂದೆ ಹೋಗಿಲ್ಲ, ಸಚ್ಚ್ಯಾರಿತ್ರ್ಯತನದಿಂದ ಗುರುತಿಸಿಕೊಂಡ ರಾಜ ಮನೆತನವಾಗಿದೆ. ಇಂದಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಒಳ್ಳೆಯ ವ್ಯಕ್ತಿತ್ವ ಹೊಂದಿದ ಮತ್ತು ರಾಜ್ಯದ ಜನರ ಸೇವೆ ಮಾಡುವ ಅತ್ಯಂತ ಹಿರಿಯ ಮುಖಂಡರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಸಿ.ಎಸ್. ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸ್ಥಾನ ನೀಡಿದ್ದೇ ಆದಲ್ಲಿ ರಾಜ್ಯದ ರಾಜಕಾರಣದಲ್ಲಿಯೇ ಹೊಸ ದಿಕ್ಕನ್ನೇ ಬದಲಾವಣೆಗೊಳ್ಳಲಿದೆ ಎಂದಿದ್ದಾರೆ.
ಈ ಹಿಂದೆ ಅಲ್ಪ ಲಾಭದಲ್ಲಿದ್ದ ಕೆಆರ್‌ಡಿಎಲ್ ಸಂಸ್ಥೆ ₹೫೦೦ ಕೋಟಿಗೂ ಅಧಿಕ ಲಾಭಗಳಿಸುವತ್ತ ಮುನ್ನಡೆದಿರುವುದು ಶಾಸಕ ಸಿ.ಎಸ್. ನಾಡಗೌಡ ಅವರ ಶ್ರಮದ ಕೊಡುಗೆಯಾಗಿದೆ. ಇದರಿಂದ ಸರ್ಕಾರಕ್ಕೂ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿದ್ದಾರೆ. ಶಾಸಕ ನಾಡಗೌಡರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಯಲ್ಲಿ ಪಕ್ಷದ ನಾಯಕರೊಂದಿಗೆ ಹೆಜ್ಜೆ ಇಟ್ಟಂತಹ ಪ್ರಭಾವಿ ನಾಯಕರಾಗಿದ್ದಾರೆ. ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿ ಪಕ್ಷದ ಹಾಗೂ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಒದಗಿಸಿಕೊಟ್ಟು ಲಕ್ಷಾಂತರ ಜನ ಅಭಿಮಾನಿಗಳ ಆಸೆ ಈಡೇರಿಸಬೇಕೆಂದು ಶ್ರೀಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.