ಮಂಗಳೂರು: ಅಪಸ್ಮಾರ (ಮೂರ್ಛೆ ರೋಗ) ರೋಗ ಮೆದುಳಿನಲ್ಲಿನ ನರಕೋಶಗಳಿಗೆ ಉಂಟಾಗುವ ಹಾನಿ, ಅಸಮತೋಲನ, ನರಗಳ ದೌರ್ಬಲ್ಯದಿಂದ ಬರುವ ಖಾಯಿಲೆ. ದೇಶದಲ್ಲಿ ಸುಮಾರು ೧೨ ಮಿಲಿಯನ್ ಜನರು ಈ ರೋಗ ಪೀಡತರಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿ ನುರಿತ ವೈದ್ಯರ ಸಲಹೆ ಮತ್ತು ಚಿಕಿತ್ಸೆಯಿಂದ ಇದರಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಬೆಂಗಳೂರು ನಗರ ಮೂಲಕ ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಕ ಡಾ.ನಿಹಾಲ್ ಅಹಮದ್ ಹೇಳಿದರು.
ಗ್ರಾಮೀಣ ಪ್ರದೇಶಗಳ ಅವಿದ್ಯಾವಂತ ಜನರಲ್ಲಿ ಇರುವ ಮೂಢನಂಬಿಕೆಯಂತೆ ಅಪಸ್ಮಾರ ಒಂದು ಶಾಪವಲ್ಲ, ಅದು
ಸಂಪೂರ್ಣವಾಗಿ ಗುಣಪಡಿಸಲಾಗುವ ಖಾಯಿಲೆ ಎಂದು ಜನಜಾಗೃತಿ ಮೂಡಿಸಿದರು.ಸ್ಪರ್ಶ ಆಸ್ಪತ್ರೆಯ ಹಿರಿಯ ನರರೋಗ ಶಾಸ್ತ್ರತಜ್ಞ ಡಾ.ಬಾಲಾಜಿ ಮಾತನಾಡಿ, ಅಪಸ್ಮಾರ ರೋಗದ ಮುಖ್ಯ ಕಾರಣಗಳಾದ ಧೀರ್ಘಕಾಲಿಕ ಮದ್ಯಸೇವನೆ, ಅತಿಯಾದ ಧೂಮ್ರಪಾನ, ನಿದ್ರಾಹೀನತೆ, ತಲೆಗೆ ಗಾಯ, ಅನುವಂಶಿಕಅಂಶಗಳು, ನಿಯಮಿತ ದೈಹಿಕ ವ್ಯಾಯಾಮದ ಕೊರತೆ, ಪೌಷ್ಟಿಕ ಆಹಾರದ ಕೊರತೆ, ಬದಲಾದ ಜೀವನ ಶೈಲಿ ಎಂದರು.
ಬಗ್ಗೆ ಅತಿಥಿ ಉಪನ್ಯಾಸ ನೀಡಿದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಚಕ್ರಪಾಣಿ, ಸಂಸ್ಥೆಯ ಚುನಾಯಿತ ಅಧ್ಯಕ್ಷ ಡಾ.ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ.ಜ್ಯೂಲಿಯನ್ ಸಲ್ಡಾನ್ಹಾ, ವೆನ್‌ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಪ್ರಕಾಶ್, ಸ್ಪರ್ಶ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಅಧಿಕಾರಿ ಅಮೃತೇಶ್ ಇದ್ದರು.
ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಅಕ್ಷತಾ ನಿರೂಪಿಸಿದರು.