- 38 ವರ್ಷ ಶಿಕ್ಷಣ ಇಲಾಖೆ ಸೇವೆ । ಪ್ರಥಮ ಪ್ರಾಶಸ್ತ್ಯ ಮತ ನೀಡಲು ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಸಂಪೂರ್ಣ ಅರಿವು ಹೊಂದಿದ್ದೇನೆ. ತಾವು ಅವುಗಳ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸಲಿದ್ದೇನೆ. ಕ್ಷೇತ್ರದ ಮತದರಾರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ತಮಗೆ ಮತ ನೀಡಿ, ಗೆಲ್ಲಿಸಬೇಕು ಎಂದರು.
ಈಗಾಗಲೇ ಕ್ಷೇತ್ರದ 680 ಶಾಲೆಗಳಿಗೂ ವೈಯಕ್ತಿಕವಾಗಿ ಭೇಟಿ ನೀಡಿ, ಶಿಕ್ಷಕರ ಬಳಿ ಮತಯಾಚಿಸಿದ್ದೇನೆ. ಕ್ಷೇತ್ರದ ಮತದಾರರಾದ ಶಿಕ್ಷಕ-ಶಿಕ್ಷಕಿಯರ ಜೊತೆಗೂ ಚರ್ಚಿಸಿದ್ದೇನೆ. ನನ್ನ ಸೇವಾವಧಿಯಲ್ಲಿ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸಿದ್ದು, ಮೂರೂವರೆ ದಶಕಗಳ ಕಾಲ ಹಲವಾರು ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದೇನೆ ಎಂದು ತಿಳಿಸಿದರು.ಸಂಘ ಸಂಸ್ಥೆಗಳ ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಉಪಾಧ್ಯಕ್ಷನಾಗಿ, ನೌಕರರ ಹಲವಾರು ಬೇಡಿಕೆಗಳಿಗೆ ಸಂಬಂಧಿಸಿದಂತೆ ಹೋರಾಟಗಳನ್ನು ನಡೆಸಿ, ಸರ್ಕಾರದ ಗಮನ ಸೆಳೆದಿದ್ದೇನೆ. ಆದರೆ, ನಮ್ಮ ಹೋರಾಟಗಳನ್ನು ಕೇವಲ ವಿಧಾನಸೌಧದ ಬಾಗಿಲವರೆಗೆ ಮಾತ್ರವೇ ಕೊಂಡೊಯ್ಯಲಷ್ಟೇ ಸಾಧ್ಯವಾಗುತ್ತಿತ್ತು. ವಿಧಾನಸೌಧ, ವಿಧಾನ ಪರಿಷತ್ ಒಳಗೆ ಹೋರಾಟಗಳನ್ನು ಕೊಂಡೊಯ್ದು, ಸರ್ಕಾರದ ಮುಂದೆ ಬಲವಾಗಿ ವಾದ ಮಂಡನೆ ಮಾಡಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಂಬಲಿಗರಾದ ಸಿ.ಎ.ಇಕ್ಬಾಲ್ ಬಾಷಾ, ಟಿ.ಎಸ್. ನಾಗರಾಜ ಇತರರು ಇದ್ದರು.- - -
ಬಾಕ್ಸ್ ಅಟ್ಯಾಚ್ಡ್ ವಾಶ್ ರೂಂ ಸೌಲಭ್ಯ ಸಾಧ್ಯವೇ ಆಗಿಲ್ಲ ಪ್ರತಿಯೊಂದು ಶಾಲೆಗಳಲ್ಲೂ ಅಟ್ಯಾಚ್ಡ್ ವಾಶ್ ರೂಂವುಳ್ಳ ಶಿಕ್ಷಕ-ಶಿಕ್ಷಕಿಯರ ಸ್ಟ್ಯಾಫ್ ರೂಂ ಹೊಂದಲು ಸಾಧ್ಯವಾಗಿಲ್ಲ. ಶಿಕ್ಷಕರು- ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಹೊಂದಲು ಸಾಧ್ಯವಾಗಿಲ್ಲ. ಎನ್‌ಪಿಎಸ್ ಟು ಒಪಿಎಸ್ ಬೇಡಿಕೆ ಈಡೇರಿಸಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಸರಿಸಮಾನವಾದ ವೇತನ ಶ್ರೇಣಿ ಪಡೆಯಲು ಸಾಧ್ಯವಾಗಿಲ್ಲ. ಖಾಸಗಿ ಅನುದಾನಿತ ಶಾಲಾ- ಕಾಲೇಜುಗಳ ಸಿಬ್ಬಂದಿಗೆ ಕಾಲ್ಪನಿಕ ವೇತನ ಪಡೆಯುವುದು ಸಹ ಇಂದಿಗೂ ಸಾಧ್ಯವಾಗಿಲ್ಲ. ತಾವು ಗೆದ್ದರೆ ಅದನ್ನೆಲ್ಲಾ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಎನ್.ಇ. ನಟರಾಜ ಭರವಸೆ ನೀಡಿದರು.- - --1ಕೆಡಿವಿಜಿ1:
ದಾವಣಗೆರೆಯಲ್ಲಿ ಶನಿವಾರ ವಿಪ ಆಗ್ನೇಯ ಶಿಕ್ಷಕರ ಪಕ್ಷೇತರ ಅಭ್ಯರ್ಥಿ ಎನ್.ಇ.ನಟರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.