ಹರಿಹರ: ಪರಿಶಿಷ್ಟರ ಕಾಲೋನಿಯ ಭಜನಾ ಮಂದಿರದಲ್ಲಿ ಮಾದಿಗ ಸಮಾಜ ನೂತನ ಅಧ್ಯಕ್ಷ ಎನ್.ರಜನಿಕಾಂತ್ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಎಚ್ ನಾಗಭೂಷಣ್, ಸುಭಾಷ್‌ಚಂದ್ರ ಬೋಸ್ ರಾಜನಹಳ್ಳಿ, ಪಿ.ಎನ್, ವಿರೂಪಾಕ್ಷಿ, ಗೌರವ ಸಲಹೆಗಾರರಾಗಿ ವೀರೇಶ್, ಮಂಜುನಾಥ್ ಬಾನಹಳ್ಳಿ, ಎಚ್.ನಿಜಗುಣ, ಕೆ.ಶಿವರಾಂ ಬೇವಿನಹಳ್ಳಿ, ಎಚ್.ಎಸ್. ಕೊಟ್ರೇಶ್, ಮಲ್ಲೇಶಪ್ಪ, ಎಂ.ಬಿ. ಅಣ್ಣಪ್ಪ, ಪ್ರಧಾನ ಖಜಾಂಚಿಯಾಗಿ ಹನುಮಂತಪ್ಪ ಸಾರಥಿ, ಉಪಾಧ್ಯಕ್ಷರಾಗಿ ವಿಜಯಕುಮಾರ್ ಕಮದೋಡು, ಪರಶುರಾಮ್ ಧೂಳೆಹೊಳೆ, ಜಗದೀಶ್ ದೇವರ ಬೆಳಕೇರೆ, ಚಂದ್ರಶೇಖರ್ ಹಳ್ಳಿಹಾಳ್, ಎಂ.ಡಿ. ನಾಗರಾಜ್ ಗುತ್ತೂರು, ಸಹ ಕಾರ್ಯದರ್ಶಿಯಾಗಿ ವೈ.ಬಿ. ಪ್ರಭಾಕರ್, ಸಂತೋಷ್ ನೋಟದವರ, ಹನುಮಂತಪ್ಪ ಆಶ್ರಯ ಕಾಲೋನಿ, ವಿಶ್ವನಾಥ್ ಮೈಲಾಳ, ಸುಧಾಕರ ಎಚ್. ಆಯ್ಕೆಯಾದರು.ಸಂಚಾಲಕರಾಗಿ ಪರಶುರಾಮ್, ಖಜಂಚಿಯಾಗಿ ಸಂತೋಷ್ ದೊಡ್ಮನಿ, ಸುರೇಂದ್ರ ನುಂಕೋಳ್ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಶ್ರೀಕಾಂತ್ ಜುಂಜಪ್ಪ, ಮಂಜಣ್ಣ ಪೂಜಾರಿ, ಹುಲುಗಪ್ಪ, ಸದಾಶಿವ ಬೆಳ್ಳೂಡಿ, ಕೇಶವ ಕಂಚಿಕೇರಿ, ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಎನ್.ರಜನಿಕಾಂತ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳ ಮೀಸಲಾತಿ ವರ್ಗಿಕರಣದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು ಸಮುದಾಯ ಸ್ವಾಗತಿಸಿದೆ. ಸಮಾಜದ ಪರವಾಗಿ ಸಾಕಷ್ಟು ಹಿರಿಯ ಮುಖಂಡರು ನಾಯಕರು ಹಲವು ದಶಕಗಳ ಧರಣಿ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಅಧ್ಯಕ್ಷರು ಒಳಗೊಂಡಂತೆ ನೂತನ ಪದಾಧಿಕಾರಿಗಳು ಸಮಾಜದ ಹಿರಿಯ, ಕಿರಿಯ ಮುಖಂಡರು ಶೈಕ್ಷಣಿಕವಾಗಿ ರಾಜಕೀಯವಾಗಿ ನಾಗರೀಕರ ಸಮಾಜ ನಿರ್ಮಾಣ ಮಾಡಲು ತಾಲೂಕು, ನಗರ ಘಟಕದ ಸಮಾಜದ ಬಂಧುಗಳು ಪಣತೊಡೋಣ ಎಂದು ಪದಾಧಿಕಾರಿಗಳಿಗೆ, ಸಮಾಜದ ಮುಖಂಡರಿಗೆ ಶುಭ ಹಾರೈಸಿದರು.
- - - -4ಎಚ್‌ಆರ್‌ಆರ್2:ಹರಿಹರದ ಪರಿಶಿಷ್ಟರ ಕಾಲೋನಿಯ ಭಜನಾ ಮಂದಿರದಲ್ಲಿ ಮಾದಿಗ ಸಮಾಜದ ನೂತನ ಅಧ್ಯಕ್ಷ ಎನ್.ರಜನಿಕಾಂತ್ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.