ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರ ಆಯ್ಕೆ

KannadaprabhaNewsNetwork |  
Published : Sep 07, 2024, 01:38 AM IST
6ಕೆಕೆಡಿಯು1. | Kannada Prabha

ಸಾರಾಂಶ

ಕಡೂರು, ತಾಲೂಕಿನ ಕಡೂರಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ. ರಂಗನಾಥ್ ರವರು ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷರಾದ ಪ್ರಶಾಂತ್ ರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಚುನಾವಣಾಧಿಕಾರಿ ಶಶಿಕಾಂತ್ ಕಾರ್ಯ ನಿರ್ವಹಿಸುವ ಮೂಲಕ ರಂಗನಾಥ್ ರವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಅಭಿನಂದನೆ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಕಡೂರಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ. ರಂಗನಾಥ್ ರವರು ಅವಿರೋಧವಾಗಿ ಆಯ್ಕೆಯಾದರು. ಹಿಂದಿನ ಅಧ್ಯಕ್ಷರಾದ ಪ್ರಶಾಂತ್ ರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಚುನಾವಣಾಧಿಕಾರಿ ಶಶಿಕಾಂತ್ ಕಾರ್ಯ ನಿರ್ವಹಿಸುವ ಮೂಲಕ ರಂಗನಾಥ್ ರವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.ಅನಂತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಿಗೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಅಭಿನಂದಿಸಿ ಮಾತನಾಡಿ, ಕಡೂರಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘ ರೈತರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಉನ್ನತ ಸ್ಥಾನದಲ್ಲಿದೆ. ಸದರಿ ಸಹಕಾರ ಸಂಘಕ್ಕೆ ನನ್ನ ಅವಧಿಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರು ಮತ್ತು ನಮ್ಮ ನಾಯಕರಾದ ಬೆಳ್ಳಿ ಪ್ರಕಾಶ್ ನಮ್ಮ ಸಂಘದ ಗೋದಾಮು ನಿರ್ಮಾಣಕ್ಕೆ 4 ಲಕ್ಷ ರು.ಗಳ ಅನುದಾನ ನೀಡಿದ್ದು ಅವರ ಸಲಹೆ ಸಹಕಾರದಿಂದ ಸಂಘ ಅಭಿವೃದ್ಧಿ ಕಂಡಿದೆ.

ಮುಂದಿನ ದಿನಗಳಲ್ಲಿ ಅವರಿಂದ ಮತ್ತಷ್ಟು ಸಹಕಾರ ಪಡೆದು ನೂತನ ಅಧ್ಯಕ್ಷರು ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಅಲ್ಲದೆ ಸರ್ವ ನಿರ್ದೇಶಕರ ವಿಶ್ವಾಸ ಪಡೆದು ಸಂಘವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿ ಎಂದು ಹೇಳಿ ಶುಭ ಹಾರೈಸಿದರು.ನೂತನ ಅಧ್ಯಕ್ಷ ಎಂ.ರಂಗನಾಥ್ ತಮ್ಮ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರುದ್ರಪ್ಪ, ನಿರ್ದೇಶಕರಾದ ಈಶ್ವರಪ್ಪ, ತೇಜರಾಜು, ದಾಕ್ಷಾಯಣಮ್ಮ, ಪ್ರಶಾಂತ್, ರಾಜಪ್ಪ, ಸಂಘದ ಮೇಲ್ವಿಚಾರಕ ಪವನ್ , ಕಾರ್ಯದರ್ಶಿ ಗಂಗಾಧರನಾಯ್ಕ ಸೇರಿದಂತೆ ಗ್ರಾಮದ ಅನೇಕರು ಹಾಜರಿದ್ದು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

6ಕೆಕೆಡಿಯು1. ಕಡೂರಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಎಂ. ರಂಗನಾಥ್ ರವರನ್ನು ಅಭಿನಂದಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ