2037ರೊಳಗೆ ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಗುರಿ

KannadaprabhaNewsNetwork |  
Published : Jul 25, 2025, 12:32 AM IST
24ಕೆಪಿಎಲ್25 ತಾಲೂಕಿನ  ಬಿಸರಳ್ಳಿ ಗ್ರಾಮದಲ್ಲಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ತಾಳೆಬೆಳೆ ಬೇಸಾಯ ಕುರಿತು ನಡೆದ ರೈತರಿಗೆ ತರಬೇತಿ ಹಾಗೂ ಮೇಗಾ ಡ್ರೈವ್ ಕಾರ್ಯಕ್ರಮ | Kannada Prabha

ಸಾರಾಂಶ

ಕೆಲ ವರ್ಷಗಳ ಹಿಂದೆ ಪ್ರತಿ ವ್ಯಕ್ತಿ ವರ್ಷಕ್ಕೆ ೮ ಲೀಟರ್‌ ಅಡುಗೆ ಎಣ್ಣೆ ಬಳಸುತ್ತಿದ್ದ. ಆದರೆ, ಇತ್ತೀಚಿನ ಬದಲಾದ ವರ್ಷಗಳಲ್ಲಿ ಸುಮಾರು ೨೦ ಲೀಟರ್‌ ಎಣ್ಣೆ ಬಳಸುತ್ತಿದ್ದಾನೆ. ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಆಮದಿಗೆ ವರ್ಷಕ್ಕೆ ₹ ೧.30 ಲಕ್ಷ ಕೋಟಿ ವಿದೇಶಿ ವಿನಿಮಯ ಖರ್ಚು ಮಾಡುತ್ತಿದೆ.

ಕೊಪ್ಪಳ:

ಖಾದ್ಯತೈಲ ಉತ್ಪಾದನೆಯಲ್ಲಿ ಭಾರತ ೨೦೩೭ರೊಳಗೆ ಸ್ವಾವಲಂಬನೆ ಸಾಧಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ನೀತಿಯಂತೆ ಅಮದು ಕಡಿಮೆಗೊಳಿಸುವ ದೃಷ್ಟಿಯಿಂದ ಅಡುಗೆ ತೈಲ ಉತ್ಪಾದನೆಗೆ ಒತ್ತು ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ (ತಾಳೆಬೆಳೆ) ಡಾ. ಪಿ.ಎಂ. ಸೊಬರದ ಹೇಳಿದರು..

ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ತ್ರಿಎಫ್‌ ಆಯಿಲ್ ಪಾಮ್ ಪ್ರವೇಟ್ ಲಿಮಿಟೆಡ್ ಸಹಯೋಗದಲ್ಲಿ ನಡೆದ ೨೦೨೫-೨೬ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ತಾಳೆಬೆಳೆ ಬೇಸಾಯ ಕುರಿತು ರೈತರಿಗೆ ತರಬೇತಿ ಹಾಗೂ ಮೇಗಾ ಡ್ರೆವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆಲ ವರ್ಷಗಳ ಹಿಂದೆ ಪ್ರತಿ ವ್ಯಕ್ತಿ ವರ್ಷಕ್ಕೆ ೮ ಲೀಟರ್‌ ಅಡುಗೆ ಎಣ್ಣೆ ಬಳಸುತ್ತಿದ್ದ. ಆದರೆ, ಇತ್ತೀಚಿನ ಬದಲಾದ ವರ್ಷಗಳಲ್ಲಿ ಸುಮಾರು ೨೦ ಲೀಟರ್‌ ಎಣ್ಣೆ ಬಳಸುತ್ತಿದ್ದಾನೆ. ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಆಮದಿಗೆ ವರ್ಷಕ್ಕೆ ₹ ೧.30 ಲಕ್ಷ ಕೋಟಿ ವಿದೇಶಿ ವಿನಿಮಯ ಖರ್ಚು ಮಾಡುತ್ತಿದೆ. ಆಮದು ಕಡಿಮೆ ಮಾಡುವ ದೃಷ್ಟಿಯಿಂದ ರೈತರಗೆ ತಾಳೆಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ರೈತರು ಇದರ ಉಪಯೋಗಪಡಿಸಿಕೊಳ್ಳಬೇಕು ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ತಾಳೆಬೆಳೆ ಬೆಳೆಯುವ ರೈತರಿಗೆ ಸರ್ಕಾರ ಉಚಿತವಾಗಿ ಗಿಡ ನೀಡಿ ಮೂರು ವರ್ಷ ಗೊಬ್ಬರ ನೀಡುತ್ತದೆ. ನಂತರ ಬೆಳೆಯನ್ನು ಸರ್ಕಾರವೇ ಬೆಂಬಲ ಬೆಲೆಯಡಿ ಖರೀದಿಸಲಿದೆ. ಈ ಬೆಳೆ ಮೂರು ವರ್ಷದ ಫಸಲಾಗಿದ್ದು ಈ ಅವಧಿಯಲ್ಲಿ ಮಿಶ್ರ ಬೆಳೆ ಬೆಳೆಯಬಹುದು. ಎಣ್ಣೆ ಉತ್ಪಾದನೆಗೆ ಉತ್ತೇಜನ ನೀಡಿ ಆಮದಿಗೆ ಖರ್ಚಾಗುವ ವಿದೇಶಿ ವಿನಿಮಯ ಉಳಿಸುವುದು ಹಾಗೂ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ತ್ರಿಎಫ್‌ ಆಯಿಲ್ ಪಾಮ್ ಡಿಜಿಎಂ ಬಸವಕುಮಾರ ಮಾತನಾಡಿದರು. ಅಸಿಸ್ಟಂಟ್ ಮ್ಯಾನೇಜರ್‌ ಧರ್ಮರಾಜ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗೀಶ್ವರ ಗಂಗಾವತಿ, ಶಿವಯೋಗಿ ಕುಷ್ಟಗಿ, ದುರ್ಗಾಪ್ರಸಾದ, ಮಂಜುನಾಥ ಲಿಂಗಣ್ಣವರ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರುದ್ರಪ್ಪ ಬೀಡನಾಳ, ಬಸವರಾಜ ರಾಂಪೂರ, ಮಲ್ಲಿಕಾರ್ಜುನ ಬಂಡಿ, ವಿಜಯ ಮಹಾಂತೇಶ ರೈತರಾದ ಚನ್ನಬಸನಗೌಡ, ನಾಗಪ್ಪ ಬಿಕನಳ್ಳಿ, ನಾಗರಾಜ ಮೇಗಳಮನಿ, ಸೈಯದದಸಾಬ, ಮಂಜುಳಾ, ವಿಮಲಾಕ್ಷಿ, ನಿಂಗಮ್ಮ, ಲಕ್ಮಮವ್ವ ಹಾಗೂ ರೈತರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್