ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯ ಸ್ವಾವಲಂಬನೆ: ಡಾ. ಮಂತರ್‌ಗೌಡ

KannadaprabhaNewsNetwork |  
Published : Dec 03, 2024, 12:30 AM IST
ಸಂಜೀವಿನಿ ಸಭಾಂಗಣ ಉದ್ಘಾಟಿಸಿದ ಶಾಸಕ ಡಾ. ಮಂತರ್‌ಗೌಡ | Kannada Prabha

ಸಾರಾಂಶ

ಸ್ವಸಹಾಯ ಸಂಘಗಳ ಮೂಲಕ ಅನೇಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಕಂಡಿದ್ದಾರೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಹಾನಗಲ್ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ಸಂಜೀವಿನಿ ಸಭಾಂಗಣವನ್ನು ಶಾಸಕ ಡಾ. ಮಂತರ್‌ಗೌಡ ಸೋಮವಾರ ಉದ್ಘಾಟಿಸಿದರು.

ಮಹಿಳೆಯರ ಸ್ವ ಸಹಾಯ ಸಂಘಗಳು ತಮ್ಮ ಕಾರ್ಯಚಟುವಟಿಕೆಗೆ ಈ ಸಭಾಂಗಣವನ್ನು ಉಪಯೋಗಿಸಿಕೊಳ್ಳಬಹುದು. ಸ್ವ ಸಹಾಯ ಸಂಘಗಳ ಮೂಲಕ ಅನೇಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಕಂಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಯಾಶಾಂತ್ ಕುಮಾರ್, ಉಪಾಧ್ಯಕ್ಷರಾದ ರೇಣುಕಾ, ಸದಸ್ಯರಾದ ಮಿಥುನ್ ಹಾನಗಲ್, ಸುದೀಪ್, ರಘು, ಪ್ರಕಾಶ್, ವಿಜಯ್, ಸುಶೀಲಾ, ಇಒ ಪರಮೇಶ ಕುಮಾರ್, ಪಿಡಿಒ ವಿ.ಯು. ಆಸ್ಮಾ ಇದ್ದರು.

-----------------------------

ಮೈಸೂರು-ಮಡಿಕೇರಿ ಹೆದ್ದಾರಿ 2026ಕ್ಕೆ ಪೂರ್ಣ: ಎನ್‌ಎಚ್‌ಎಐ

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತ್ ಮಾಲಾ ಯೋಜನೆ ಅಡಿ ನಿರ್ಮಿಸಲಾಗುತ್ತಿರುವ ಮೈಸೂರು-ಮಡಿಕೇರಿ ಆರ್ಥಿಕ ಕಾರಿಡಾರ್‌ಗೆ ಐದು ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ನೀಡಲಾಗಿದ್ದು, 2026ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ನೀಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ.ಬ್ರಹ್ಮಂಕರ್ ತಿಳಿಸಿದ್ದಾರೆ.

ಮೈಸೂರು-ಮಡಿಕೇರಿ ನಡುವಿನ ದ್ವಿಪಥ ಮಾರ್ಗದ ಬದಲಿಗೆ ಭಾರತ್‌ ಮಾಲಾ ಯೋಜನೆ ಅಡಿ ನಾಲ್ಕು ಪಥದ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡೋ ಉದ್ದೇಶದಿಂದಾಗಿ ಈ ಆರ್ಥಿಕ ಕಾರಿಡಾರ್‌ ನಿರ್ಮಾಣಗೊಳುತ್ತಿದೆ. ಒಟ್ಟು 115 ಕಿ.ಮೀ. ಉದ್ದದ ಆರ್ಥಿಕ ಕಾರಿಡಾರ್‌ ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದೆ. ಮೈಸೂರು-ಮಡಿಕೇರಿ ಆರ್ಥಿಕ ಕಾರಿಡಾರ್‌ನ 2ನೇ ಹಂತವಾಗಿ ಮಡಿಕೇರಿಯಿಂದ ಮಂಗಳೂರು ಸಮೀಪದ ಬಂಟ್ವಾಳಕ್ಕೆ ವಿಸ್ತರಿಸಲಾಗುತ್ತದೆ ಎಂದಿದ್ದಾರೆ.

ಯೋಜನೆಗಾಗಿ ಮೂರು ಸಾವಿರ ಕೋಟಿ ರು.ಗೂ ಹೆಚ್ಚಿನ ಮೊತ್ತ ವ್ಯಯಿಸಲಾಗುತ್ತಿದೆ. ಈಗಾಗಲೇ ಮೈಸೂರು-ಮಡಿಕೇರಿ ಆರ್ಥಿಕ ಕಾರಿಡಾರ್‌ ಕಾಮಗಾರಿ ಆರಂಭಿಸಲಾಗಿದ್ದು, 2026ರ ಮಧ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಸದ್ಯ ಮೈಸೂರಿನಿಂದ ಮಡಿಕೇರಿಗೆ 2ರಿಂದ 2.30 ಗಂಟೆ ಬೇಕಾಗಲಿದ್ದು, ಆರ್ಥಿಕ ಕಾರಿಡಾರ್‌ ನಿರ್ಮಾಣದ ನಂತರ ಎರಡೂ ಜಿಲ್ಲೆಗಳ ನಡುವಿನ ಪ್ರಯಾಣದ ಸಮಯ 1ರಿಂದ 1.30 ಗಂಟೆಗೆ ಇಳಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!