ದುಶ್ಚಟಗಳನ್ನು ಬಿಟ್ಟರೆ ಆತ್ಮಗೌರವ ಹೆಚ್ಚಿಸಿಕೊಳ್ಳಬಹುದು-ಸದಾಶಿವ ಸ್ವಾಮೀಜಿ

KannadaprabhaNewsNetwork |  
Published : Dec 20, 2025, 02:15 AM IST
19ಎಚ್‌ವಿಆರ್5 | Kannada Prabha

ಸಾರಾಂಶ

ಪ್ರಾಮಾಣಿಕ ದುಡಿತ, ಸದ್ಗುಣಗಳಿಗೆ ತುಡಿತ ಹೊಂದುವ ಮೂಲಕ ದುಶ್ಚಟ ಬಿಟ್ಟರೆ ಉತ್ತಮ ಆರೋಗ್ಯ, ಸದೃಢ ಆರ್ಥಿಕತೆ ಹಾಗೂ ಆತ್ಮಗೌರವ ಹೆಚ್ಚಿಸಿಕೊಳ್ಳಬಹುದು ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಹಾವೇರಿ: ಪ್ರಾಮಾಣಿಕ ದುಡಿತ, ಸದ್ಗುಣಗಳಿಗೆ ತುಡಿತ ಹೊಂದುವ ಮೂಲಕ ದುಶ್ಚಟ ಬಿಟ್ಟರೆ ಉತ್ತಮ ಆರೋಗ್ಯ, ಸದೃಢ ಆರ್ಥಿಕತೆ ಹಾಗೂ ಆತ್ಮಗೌರವ ಹೆಚ್ಚಿಸಿಕೊಳ್ಳಬಹುದು ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ವಿದ್ಯಾನಗರ, ರಾಜೇಂದ್ರ ನಗರ ಹಾಗೂ ಜಯದೇವ ನಗರದಲ್ಲಿ ಪಾದಯಾತ್ರೆ ಕೈಗೊಂಡು ಮಾತನಾಡಿದ ಅವರು, ದುಶ್ಚಟಗಳಿಂದ ಆರೋಗ್ಯಕ್ಕೆ ಹಾನಿಕರ ಎಂಬ ಸಂಗತಿ ತಿಳಿದಿದ್ದರೂ ಯುವಜನತೆ ದುರ್ಜನರ ಸಂಗದಿಂದ ಹಾದಿ ತಪ್ಪುತ್ತಿದೆ. ಚಟ ಬಿಟ್ಟವರು ಸನ್ಮಾನಕ್ಕೆ ಯೋಗ್ಯತೆ ಪಡೆಯುತ್ತಾರೆ. ಮನೆಯಲ್ಲಿನ ಕ್ಷುಲ್ಲಕ ಕಾರಣಗಳಿಗೆ ಸಾರಾಯಿ, ಸಿಗರೇಟ್‌ಗಳಿಗೆ ದಾಸರಾಗುತ್ತಿರುವ ಯುವಜನರಿಂದ ಸ್ವಸ್ಥ ಸಮಾಜ ಮರೀಚಿಕೆ ಆಗುತ್ತಿದೆ. ಮೌಢ್ಯ, ಕಂದಾಚಾರಗಳಿಂದ ಮುಳುಗಿರುವ ಜನರನ್ನು ಸದಾಚಾರಕ್ಕೆ ಕರೆದೊಯ್ಯುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಜನ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ. ತಾವೆಲ್ಲ ತಮ್ಮ ಮನೆ-ಮನಗಳಲ್ಲಿ ಪೂಜ್ಯರನ್ನು ಆಹ್ವಾನಿಸಿ ಗೌರವಿಸಿರುವುದು ಹೃದಯ ತುಂಬಿ ಬಂದಿದೆ ಎಂದರು.ಮಾದನ ಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಮಠದ ಮೇಲಿನ ಅಭಿಮಾನವನ್ನು ಸದಾಶಿವ ಸ್ವಾಮೀಜಿಯವರಿಗೆ ಭಕ್ತಿಯಿಂದ ತೋರಿಸಿದ್ದೀರಿ. ಅಜ್ಞಾನದಿಂದ ಜ್ಞಾನದ ಕಡೆಗೆ, ಅಧರ್ಮದಿಂದ ಧರ್ಮದ ಕಡೆಗೆ ಸಾಗುತ್ತ ದೇವರನ್ನು ಕಾಣುವ ಪ್ರಯತ್ನವೇ ಪಾದಯಾತ್ರೆಯ ಉದ್ದೇಶ. ಓದಲು ಬಾರದವರು ಅಕ್ಷರಭ್ಯಾಸಕ್ಕೆ ಬರುವ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸದಾಶಿವ ಸ್ವಾಮೀಜಿ ಅವರ ಬೆಳ್ಳಿ ತುಲಾಭಾರ ನಡೆಯಲಿದೆ. ಇದರಿಂದ ಬಂದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವುದು ಶ್ರೀಗಳ ಕನಸು. ಅವರ ಕನಸನ್ನು ತಾವು ನನಸು ಮಾಡಲು ಕೈಜೋಡಿಸಬೇಕೆಂದು ಹೇಳಿದರು.ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ದೂರದರ್ಶಕದಿಂದ ದೂರ ಗ್ರಹಗಳನ್ನು ಮತ್ತು ಸೂಕ್ಷö್ಮದರ್ಶಕದಿಂದ ಸೂಕ್ಷ್ಮಾಣುಗಳನ್ನು ನೋಡಿದಂತೆ ಧರ್ಮ ದರ್ಶನದ ಮೂಲಕ ಜನರ ಮನಸ್ಸನ್ನು ಅರಿಯಲು ಇಚ್ಛಿಸಿರುವ ಸದಾಶಿವ ಸ್ವಾಮೀಜಿ ಅವರ ನೇತೃತ್ವದ ಪಾದಯಾತ್ರೆ ಅರ್ಥಪೂರ್ಣವಾಗಿ ಜರುಗಿರುವುದು ಅಭಿಮಾನ ಮೂಡಿಸಿದೆ. ದೇವರ ಸ್ವರೂಪದ ಅವರಿಗೆ ಭಕ್ತಿ ಸಮರ್ಪಣೆ ಮಾಡುವುದರಿಂದ ಭಗವಂತನ ಪಾದಕ್ಕೆ ಅರ್ಪಣೆ ಆಗುತ್ತದೆ ಎಂದರು.ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಸ್ವಾಮೀಜಿ, ವಿಜಯಪುರದ ಅಭಿನವ ಷಣ್ಮುಖರೂಢ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು ಪಾದಯಾತ್ರೆಯಲ್ಲಿ ಸಾಗಿದರು.ಪ್ರೊ.ವಿರೂಪಾಕ್ಷ ಕೋರಗಲ್ಲ, ಪಿ.ಡಿ. ಶಿರೂರ, ಡಾ.ಸುದೀಪ ಪಂಡಿತ, ಡಾ.ವಿ.ಪಿ. ದ್ಯಾಮಣ್ಣವರ, ಎಸ್.ಆರ್.ಹಿರೇಮಠ, ರಾಜಣ್ಣ ಮಾಗನೂರ, ಮಹೇಶ ಚಿನ್ನಿಕಟ್ಟಿ, ಮಹೇಶ ಹಾವೇರಿ, ಈರಣ್ಣ ಬೆಳವಡಿ, ಕಿರಣ ಕೊಳ್ಳಿ, ಗಿರೀಶ ತುಪ್ಪದ, ದಯಾನಂದ ಯಡ್ರಾಮಿ, ಪ್ರಸನ್ನ ಧಾರವಾಡಕರ, ಬಸವರಾಜ ಮಾಸೂರ, ವಿ.ಜಿ. ಹೇರೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ