ಕನ್ನಡಪ್ರಭ ವಾರ್ತೆ, ಚಾಮರಾಜನಗರ
ವೈದ್ಯಕೀಯ ಸೇವೆಯಲ್ಲಿ ಸಿಗುವ ಆತ್ಮತೃಪ್ತಿ ಬೇರೆಯಲ್ಲೂ ಸಿಗೋದಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ಹೆಚ್ಚುವರಿ ಅಡ್ವೂಕೇಟ್ ಜನರಲ್ ಎಸ್.ಎ.ಅಹಮದ್ ಹೇಳಿದರು.ನಗರದ ಹೊರವಲಯದಲ್ಲಿರುವ ಎಡಬೆಟ್ಟದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅರೆ ವೈದ್ಯಕೀಯ ವಿಭಾಗದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮನ್ನು ಯಾರು ಗುರುತಿಸಲಿಲ್ಲ ಎಂದು ಭಾವಿಸಿಕೊಳ್ಳಬಾರದು. ಯಾರ ಒಬ್ಬ ರೋಗಿ ಸೇವೆ ಮಾಡುತ್ತೀರಿ ಆದ್ದರಿಂದ ನಿಮಗೆ ಆತ್ಮ ತೃಪ್ತಿ ಸಿಗುತ್ತದೆ. ಸೇವೆ ಕೊಡುವುದರ ಮೂಲಕ ಸಂತೋಷ ಇದೆಯಲ್ಲ ಅದನ್ನು ಅನುಭವಿಸಿ ನೋಡಿದಾಗ ಅದರ ಸಂತೋಷ ಜಗತ್ತಿನಲ್ಲಿ ಎಲ್ಲೂ ಸಿಗಲ್ಲ. ನಾಳೆ ಸಮಾಜ ನಿಮ್ಮ ಗುರುತಿಸುತ್ತದೆ. ನಿಮ್ಮ ಸೇವೆಯ ಮೂಲಕ ಗೌರಯುತ ವ್ಯಕ್ತಿಯಾಗುತ್ತೀರಿ ಎಂದರು.ಅರೆ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡಿದ ನೀವೆಲ್ಲರೂ ಉತ್ತಮ ಸೇವೆ ಸಲ್ಲಿಸಬೇಕು. ಸಮಾಜ ನಿಮ್ಮನ್ನು ಎದುರು ನೋಡುತ್ತಿದೆ. ವ್ಯಾಪಾರಿ ಮನಸ್ಥಿತಿಯ ಸಂದರ್ಭದಲ್ಲಿ ಹಣವೇ ಮುಖ್ಯ, ಸೇವೆಗೆ ಪ್ರಾಧಾನ್ಯತೆ ಇಲ್ಲವೇ ಅನ್ನುವ ಕಾಲಘಟ್ಟದಲ್ಲಿ ನೀವುಗಳು ಸಮಾಜ ಸೇವೆ ಮಾಡುವ ಕಾಲಘಟ್ಟದಲ್ಲಿ ನಿಮ್ಮ ಬಳಿ ಬರುವ ರೋಗಿ, ಕುಟುಂಬಸ್ಥರಿಗೆ ನೀವು ಹೇಳುವ ಸಾಂತ್ವನ, ತಾವು ತುಂಬುವ ಧೈರ್ಯವನ್ನು ಜಗತ್ತಿನಲ್ಲಿ ಯಾರು ತುಂಬಲು ಸಾಧ್ಯವಿಲ್ಲ. ನನ್ನ ತಂದೆಗೆ ಹೃದಯಾಘಾತವಾಯಿತು. ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ ಅವರು 6 ತಿಂಗಳ ಕಾಲ ಐಸಿಯುನಲ್ಲಿದ್ದರು ಎಂದು ಭಾವುಕರಾದರು. ನೀವೆಲ್ಲರೂ ಸರ್ಕಾರಿ ಸೇವೆ ಆಯ್ಕೆ ಮಾಡಿಕೊಂಡಿದ್ದೀರಿ. ನಿಮಗೆಲ್ಲ ಧನ್ಯವಾದ ಹೇಳುತ್ತೇನೆ. ಅತ್ಯಂತ ಅರೆ ವೈದ್ಯಕೀಯ ವ್ಯಾಸಂಗ ಪೂರ್ಣಗೊಳಿಸಿ ನಾಳೆ ಜನರ ಸೇವೆ ಗೆ ಹೋಗುತ್ತಿದ್ದೀರಿ. ಒಳ್ಳೆಯ ಬಟ್ಟೆ ಹಾಕಿಕೊಂಡು ಆಸ್ಪತ್ರೆ, ಶಾಲೆಗಳಲ್ಲಿ ಉತ್ತಮವಾಗಿ ಮಾತನಾಡುವುದನ್ನು ಕಾಣುತ್ತೇವೆ. ಆದರೆ ಹೃದಯಪೂರ್ವಕವಾಗಿ ಚಿಕಿತ್ಸೆ ಮಾಡುವವರನ್ನು ಸೇವೆ ಮಾಡುವವರನ್ನು ಸರ್ಕಾರಿ ವೈದ್ಯರಲ್ಲಿ ಸರ್ಕಾರಿ ಸೇವೆಯೊಳಗೆ ಕಾಣುತ್ತೇವೆ ಎಂದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ ಕೆ.ಟಿ. ಅಜಯ್, ಎನ್ ಸಿಸಿ ಅಧಿಕಾರಿ ಸಿ.ಡಿ. ಮಾರುತಿ, ಪ್ರಾಂಶುಪಾಲ ಡಾ.ಎಂ.ಆರ್.ರವಿ. ಅರೆ ವೈದ್ಯಕೀಯ ವಿಭಾಗದ ಡಾ.ವಸೀಂಅಜುಂ. ವಕೀಲರಾದ ಅರುಣ್ ಕುಮಾರ್, ವಿದ್ಯಾರ್ಥಿಗಳು ಹಾಜರಿದ್ದರು.