ಧರ್ಮಸ್ಥಳ ಕೇಸ್‌ ಎನ್‌ಐಎ, ಇ.ಡಿಗೆವಹಿಸಿ

KannadaprabhaNewsNetwork |  
Published : Aug 30, 2025, 01:00 AM IST
ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ಹಾಗೂ ಇಡಿ ವಹಿಸುವಂತೆ ಮನವಿ | Kannada Prabha

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆದಿರುವ ಷಡ್ಯಂತ್ರವು ರಾಷ್ಟ್ರೀಯ ಸುರಕ್ಷತೆಗೆ ಸವಾಲೊಡ್ಡುವಂತಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್‌ ಹಾಗೂ ಜರಂಗದಳದ ಮುಖಂಡರು ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆದಿರುವ ಷಡ್ಯಂತ್ರವು ರಾಷ್ಟ್ರೀಯ ಸುರಕ್ಷತೆಗೆ ಸವಾಲೊಡ್ಡುವಂತಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್‌ ಹಾಗೂ ಜರಂಗದಳದ ಮುಖಂಡರು ಜಿಲ್ಲಾಧಿಕಾರಿ ಶಿಲ್ಪಾನಾಗ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಧರ್ಮಸ್ಥಳ ದೇವಸ್ಥಾನದ ಮೇಲಿರುವ ಧಾರ್ಮಿಕ ಶ್ರದ್ಧಾಭಕ್ತಿಗೆ ಧಕ್ಕೆಯುಂಟು ಮಾಡಬೇಕೆಂಬ ಪಡ್ಯಂತ್ರದ ಹಿಂದೆ ರಾಷ್ಟ್ರ ವಿರೋಧಿಗಳ ಕೈವಾಡವಿದೆ. ಷಡ್ಯಂತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಘನತೆಗೆ ಚ್ಯುತಿತಂದು ಮಾನಹರಣ ಮಾಡಬೇಕೆಂಬ ಉದ್ದೇಶದಿಂದ ವ್ಯವಸ್ಥಿತವಾಗಿ ಸಂಚನ್ನು ರೂಪಿಸಿದ್ದಾರೆ ಎಂದರು.

ಭಾರತ ವಿರೋಧಿ ವರದಿಗಳಿಗೆ ಕುತಂತ್ರಗಳಿಗೆ ಖ್ಯಾತಿ ಪಡೆದಿರುವ ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಒಟ್ಟು ಪ್ರಕರಣಗಳನ್ನು ಧರ್ಮಸ್ಥಳ ದೇವಸ್ಥಾನದ ಸುತ್ತ ಕೇಂದ್ರೀಕರಿಸಿ ವ್ಯವಸ್ಥಿತವಾದ ಅಪಪ್ರಚಾರ ಎಸಗಲಾಗಿದೆ. ಇದರ ಹಿಂದಿರುವ ಶಕ್ತಿಗಳು ಯಾವುದು ಎಂಬುದನ್ನು ತನಿಖೆ ನಡೆಸಬೇಕಿರುವುದು ಅತ್ಯವಶ್ಯಕವಾಗಿದೆ. ಇದಿಷ್ಟೇ ಅಲ್ಲದೇ ಲಕ್ಷಾಂತರ ರುಪಾಯಿ ಖರ್ಚು ಮಾಡಿ, ವಿವಿಧ ಸ್ವರೂಪದ ಕಿರುಚಿತ್ರಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಕೋಟ್ಯಾಂತರ ರುಪಾಯಿಗಳನ್ನು ವ್ಯಯಿಸಿ ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಹರಿಬಿಡಲಾಗಿದೆ ಎಂದರು.

ದೇಶದ ಕಾನೂನಿನ ವಿರುದ್ಧವಾಗಿ ಅಕ್ರಮ ಮತಾಂತರಕ್ಕೆ ಪ್ರಚೋದಿಸುವ ವಿದೇಶಿ ಮಿಷನರಿಗಳೊಂದಿಗೆ ನಂಟು ಹೊಂದಿರುವ ಕೆಲ ಎನ್‌ಜಿಒಗಳ ಪಾತ್ರವನ್ನೂ ಮಾಧ್ಯಮಗಳು ವರದಿ ಮಾಡಿವೆ. ಈ ಎಲ್ಲಾ ಬೆಳವಣಿಗೆಗಳು ತೀವ್ರ ಸ್ವರೂಪದ್ದಾಗಿರುವುದಷ್ಟೇ ಅಲ್ಲದೆ ರಾಷ್ಟ್ರೀಯ ಸುರಕ್ಷತೆಗೂ ಸವಾಲೊಡ್ಡುವಂತಹದ್ದು ಎಂಬುದು ಋಜುವಾತಾಗಿರುತ್ತದೆ,

ಆದ್ದರಿಂದ ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯದ ಮೂಲಕ ಧರ್ಮಸ್ಥಳದ ವಿರುದ್ಧ ಜರುಗಿರುವ ಷಡ್ಯಂತ್ರದ ಸಮಗ್ರ ತನಿಖೆ ನಡೆಸುವಂತೆ ರಾಜ್ಯದ ಜನತೆಯ ಪರವಾಗಿ ಮನವಿ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಸೇವಾ ಪ್ರಮುಖ ರಾ. ಸತೀಶ್, ಜಿಲ್ಲಾ ಅಧ್ಯಕ್ಷ ಕೆ. ಬಾಲಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಮಧು, ಸಹಕಾರ್ಯದರ್ಶಿ ಶ್ರೀನಿವಾಸ್, ಭಜರಂಗದಳ ಜಿಲ್ಲಾ ಸಹ ಸಂಯೋಜಕರು ರಮೇಶ್ ನಾಯಕ್, ಶಂಕರ್ ವಿಶ್ವ ಹಿಂಧೂ ಪರಿಷದ್, ಭಜರಂಗದಳದ ಕಾರ್ಯಕರ್ತರು ಇದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ