ಸ್ವಾರ್ಥ ರಹಿತ ಸಮಾನತೆ ನಿರ್ಮಾಣವಾಗಬೇಕು: ಸ್ವಾಮೀಜಿ

KannadaprabhaNewsNetwork | Published : Jun 1, 2024 12:45 AM

ಸಾರಾಂಶ

ಕಡೂರು, ಸಮಾಜದಲ್ಲಿ ಸ್ವಾರ್ಥ ತುಂಬಿರುವ ಇಂದಿನ ಕಾಲದಲ್ಲಿ ಧರ್ಮ ಮಾರ್ಗದಲ್ಲಿರುವ ರಾಮಾನುಜಾಚಾರ್ಯರ ಸ್ವಾರ್ಥ ರಹಿತ ಸಮಾನತೆ ನಿರ್ಮಾಣವಾಗಬೇಕು ಎಂದು ಮೇಲುಕೋಟೆ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಹೇಳಿದರು.

ಶ್ರೀ ವೈಷ್ಣವ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯ ಕ್ರಮದಲ್ಲಿ ವಟುಗಳಿಗೆ ಪಂಚ ಸಂಸ್ಕಾರ ದೀಕ್ಷೆ ಧಾರ್ಮಿಕ ಸಭೆ

ಕನ್ನಡಪ್ರಭ ವಾರ್ತೆ, ಕಡೂರು

ಸಮಾಜದಲ್ಲಿ ಸ್ವಾರ್ಥ ತುಂಬಿರುವ ಇಂದಿನ ಕಾಲದಲ್ಲಿ ಧರ್ಮ ಮಾರ್ಗದಲ್ಲಿರುವ ರಾಮಾನುಜಾಚಾರ್ಯರ ಸ್ವಾರ್ಥ ರಹಿತ ಸಮಾನತೆ ನಿರ್ಮಾಣವಾಗಬೇಕು ಎಂದು ಮೇಲುಕೋಟೆ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ತಾಲೂಕು ಶ್ರೀ ವೈಷ್ಣವ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯ ಕ್ರಮದಲ್ಲಿ ವಟುಗಳಿಗೆ ಪಂಚ ಸಂಸ್ಕಾರ ದೀಕ್ಷೆ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ರಾಮಾನುಜಾಚಾರ್ಯರು ಸುಖೀ ಸಮಾಜದ ಕಲ್ಪನೆಯಲ್ಲಿ ಸಮಾನತೆ ಕ್ರಾಂತಿ ಮಾಡಿದರು. ಆಗ ಇದ್ದ ನೆಮ್ಮದಿಯ ವಾತಾವರಣ ಇಂದಿಲ್ಲ. ಸ್ವಾರ್ಥ ತುಂಬಿದ ಇಂದಿನ ಕಾಲದಲ್ಲಿ ಧರ್ಮ ಮಾರ್ಗದಲ್ಲಿರುವ ಸುಖೀ ಸಮಾಜ ನಿರ್ಮಾಣವಾಗಬೇಕು. ರಾಮಾನುಜಾಚಾರ್ಯರ ಸ್ವಾರ್ಥ ರಹಿತ ಸಮಾನತೆ ಸಮಾಜದ ಆಶಯವನ್ನು ಸಾಕಾರಗೊಳಿಸಲು ಶ್ರೀ ಮಠ ಶ್ರಮಿಸುತ್ತಿದೆ. ಶ್ರೀವೈಷ್ಣವ ಸಭಾ ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಕನ್ನಡ ಪೂಜಾರಿ ಡಾ. ಹಿರೇಮಗಳೂರು ಕಣ್ಣನ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸುವ ಶಕ್ತಿ ನಮ್ಮಲ್ಲಿಯೇ ಇದೆ. ಅದನ್ನು ಪ್ರೇರೇಪಿಸುವ ಕಾರ್ಯವನ್ನು ಯತಿರಾಜ ಮಠದಂತಹ ಧಾರ್ಮಿಕ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು. ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಮನೋಭಾವನೆ ಉದ್ದೀಪಿಸುವ ಕಾರ್ಯ ಮಾಡುತ್ತಿರುವ ವೈಷ್ಣವ ಸಮಾಜದ ಕಾರ್ಯ ಶ್ಲಾಘನೀಯ. ಸಮಾಜದ ಉತ್ತಮ ಕಾರ್ಯಗಳಿಗೆ ಸದಾ ನನ್ನ ಸಹಕಾರ ಇರುತ್ತದೆ ಎಂದರು. ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಎಲ್ಲ ಇದ್ದರೂ ಎಲ್ಲೋ ಒಂದು ಕಡೆ ನೆಮ್ಮದಿಯಿಲ್ಲದಂತಹ ವಾತಾವರಣ ನಮ್ಮನ್ನು ಕಾಡುತ್ತಿದೆ. ಮಾನಸಿಕ ಸಮಾಧಾನ ಮತ್ತು ನೆಮ್ಮದಿ ಬೇಕಾಗಿದೆ. ಅದಕ್ಕೆ ಯತಿರಾಜ ಮಠದಂತಹ ಧಾರ್ಮಿಕ ಸಂಸ್ಥೆಗಳ ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದರು. ಕಲಿಯನ್ ರಾಮಾನುಜ ದಾಸನ್, ರವಿ ನರಸಿಂಹನ್, ಸಾಲ್ಕಟ್ಟೆ ಶ್ರೀನಿವಾಸ್, ಭಾರತಿ, ತಾಲೂಕು ವೈಷ್ಣವ ಸಭಾ ಅಧ್ಯಕ್ಷ ಹನುಮಂತರಾಯ ( ಅರುಣ್), ಉಪಾಧ್ಯಕ್ಷ ಸಂತೋಷ್, ಮಾರುತಿ ಕಶ್ಯಪ್, ರಾಜ್ಯ ಮುಜರಾಯಿ ಅರ್ಚಕರ ಸಂಘದ ಅಧ್ಯಕ್ಷ ವೆಂಕಟಾಚಲಯ್ಯ, ಮುಖಂಡರಾದ ಜಿಗಣೇಹಳ್ಳಿ ನೀಲಕಂಠಪ್ಪ, ಟಿ.ಆರ್.ಲಕ್ಕಪ್ಪ, ಪ್ರೇಂ ಕುಮಾರ್, ಚಂದ್ರಶೇಖರ್, ಈಶ್ವರಪ್ಪ ಮತ್ತಿತರರು ಇದ್ದರು.

--ಬಾಕ್ಸ್ ---ಗ್ರಾಮಕ್ಕೆ ಆಗಮಿಸಿದ ಯತಿರಾಜ ಶ್ರೀಗಳ ಪುರ ಪ್ರವೇಶದಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಕರೆತರಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 36 ಕ್ಕೂ ಹೆಚ್ಚು ಶ್ರೀ ವೈಷ್ಣವ ವಟುಗಳಿಗೆ ಸ್ವಾಮೀಜಿ ಶ್ರೀ ವೈಷ್ಣವ ದೀಕ್ಷೆ ನೀಡಿದರು.

31ಕೆಕೆಡಿಯು1. ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಕಡೂರು ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ತಾಲೂಕು ಶ್ರೀ ವೈಷ್ಣವ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

31ಕೆಕೆಡಿಯು1ಎ. ಶ್ರೀ ಯದುಗಿರಿ ರಾಮಾನುಜ ಜೀಯರ್ ಶ್ರೀಗಳು ಚಿಕ್ಕಬಾಸೂರು ಗ್ರಾಮದಲ್ಲಿ ತಾಲೂಕು ಶ್ರೀ ವೈಷ್ಣವ ಸಭಾ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ವಟುಗಳಿಗೆ ಸಮಾಸ್ರಯಣ ಪಂಚ ಸಂಸ್ಕಾರ ದೀಕ್ಷೆಯ ನೀಡಿದರು.

Share this article