ನಿಸ್ವಾರ್ಥ ಸೇವೆಯಿಂದ ಮನುಷ್ಯನಿಗೆ ಸಮಾಜದಲ್ಲಿ ಉನ್ನತ ಸ್ಥಾನ: ಬೆಳ್ಳಿಪ್ರಕಾಶ್

KannadaprabhaNewsNetwork |  
Published : Jul 09, 2025, 12:19 AM IST
8 ಬೀರೂರು 2 ಬೀರೂರಿನ ಕೆ.ಚನ್ನವೀರಪ್ಪಯ್ಯ ರೋಟರಿ ಭವನದಲ್ಲಿ ಮಂಗಳವಾರ ಇನ್ನರ್ ವ್ಹೀಲ್ ಸಂಸ್ಥೆ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷೆ ಸವಿತಾರಮೇಶ್ ರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಗೌರವಿಸಿದರು. | Kannada Prabha

ಸಾರಾಂಶ

ಬೀರೂರು, ಮನುಷ್ಯನು ಕೈಗೊಳ್ಳುವ ನಿಸ್ವಾರ್ಥ ಸೇವೆ ಅವನನ್ನು ಸಮಾಜದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು.

ಇನ್ನರ್ ವ್ಹೀಲ್‌ ನೂತನ ಪದಾಧಿಕಾರಿಗಳ ಪದಗ್ರಹಣ: ಸವಿತಾ ರಮೇಶ್ ಅಧ್ಯಕ್ಷೆ

ಕನ್ನಡಪ್ರಭ ವಾರ್ತೆ, ಬೀರೂರು

ಮನುಷ್ಯನು ಕೈಗೊಳ್ಳುವ ನಿಸ್ವಾರ್ಥ ಸೇವೆ ಅವನನ್ನು ಸಮಾಜದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು. ಪಟ್ಟಣದ ರೋಟರಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಇನ್ನರ್ ವ್ಹೀಲ್‌ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಮಾತನಾಡಿದರು. ಸಮಾಜ ಸೇವೆಯಲ್ಲಿ ಸ್ವಾರ್ಥ ಅಡಗಿದ್ದರೇ ಮನುಷ್ಯನ ವ್ಯಕ್ತಿತ್ವವನ್ನೇ ಕುಗ್ಗಿಸುತ್ತದೆ ಆದರೆ ನಿಸ್ವಾರ್ಥದಿಂದ ದುಡಿದರೆ ಹೆಚ್ಚಿನ ಮಾನ್ಯತೆ ದೊರಕುತ್ತದೆ. ಇನ್ನರ್ ವ್ಹೀಲ್ ಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ಸ್ನೇಹ ಮತ್ತು ಸೇವೆಯೇ ಧ್ಯೇಯವಾಗಿದೆ ಎಂದರು.

ಮ್ಯಾಂಚೆಸ್ಟರ್‌ನಲ್ಲಿ ಶುಶ್ರೂಷಕಿ ಮಾರ್ಗರೇಟ್ ಗೋಲ್ಡ್ ವಿಂಗ್ ತನ್ನ ಸಹಪಾಠಿಗಳನ್ನು ಸೇರಿಸಿ ಹುಟ್ಟು ಹಾಕಿದ ಈ ಇನ್ನರ್ ವ್ಹೀಲ್ ಸಂಸ್ಥೆ ಇಂದು ವಿವಿಧ ದೇಶ ವ್ಯಾಪ್ತಿ ಬೃಹದಾಕಾರವಾಗಿ ಬೆಳಿದಿದೆ. ಮಹಿಳೆಯರಾದ ತಾವು ನಮ್ಮ ದೇಶ, ನೆಲ. ಭಾಷೆ, ಸಂಸ್ಕೃತಿ ಗೆ ಧಕ್ಕೆ ಬಾರದಂತೆ ಗಟ್ಟಿಯಾಗಿ ಅಪ್ಪಿಕೊಂಡರೆ ಮಾತ್ರ ದೇಶ ಮತ್ತು ಭಾಷೆ ಉಳಿಯುತ್ತದೆ. ಇದನ್ನು ಮಕ್ಕಳಿಗೆ ಕಲಿಸಿಕೊಡಿ ಎಂದು ಸಲಹೆ ಮಾಡಿದರು.ಸಾಮಾಜಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ನೆರವಾಗಲು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳುವುದು ಮುಖ್ಯ. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಹಿಳಾ ಸಂಘಟನೆಗಳು ಜಾಗೃತಗೊಳಿಸಿದರೆ ಸಂಸ್ಥೆಗಳ ಉದ್ದೇಶ ಸಾರ್ಥಕ. ಮಹಿಳೆಯರು ಶಿಕ್ಷಣ ಕಲಿಕೆಗೆ ಒತ್ತು ನೀಡುವ ಕಾರ್ಯಕ್ರಮಗಳಿಗೆ ನೆರವಾಗಿ, ನೂತನ ಅಧ್ಯಕ್ಷೆ ಸವಿತಾ ರಮೇಶ್ ರಾಜಕೀಯ ಹಿನ್ನಲೆಯಿಂದ ಬಂದವರಾಗಿದ್ದು, ಎಲ್ಲಾ ಅಧಿಕಾರಿಗಳ ಸಂಪರ್ಕವಿದೆ ಆದಷ್ಟು ಮಹಿಳೆಯರಿಗೆ ಬಡವರಿಗೆ ಸಹಾಯ ಮಾಡಲು ಸಹಕಾರಿ ಎಂದು ತಿಳಿಸಿದರು.ಮಹಿಳಾ ಸ್ವಾವಲಂಬನೆ ವಿಚಾರಗಳು ಬಾಯಿ ಮಾತಿಗೆ ಸೀಮಿತಗೊಳ್ಳದೆ ಕಾರ್ಯ ಸಾಧ್ಯವಾಗಲು ಮಹಿಳಾ ಸಂಘಟನೆ ಎಲ್ಲ ವರ್ಗದ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳೆಯರು ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯ ಬೇಕೆಂಬ ನೀತಿ ಬದಲಾಗಿದೆ. ಪುರುಷರಷ್ಟೆ ಸಮಾನ ಸ್ಥಾನಮಾನ ಗಳಿಸುವ ಅವಕಾಶಗಳು ನಿಮಗಿದೆ. ಬದಲಾಗುತ್ತಿರುವ ಕುಟುಂಬ ನಿರ್ವಹಣೆಯ ಆರ್ಥಿಕ ಹೊಣೆಯ ಪಾಲು ಹೊತ್ತಿರುವ ಮಹಿಳೆ ಶೋಷಣೆಯಿಂದ ಮಾತ್ರ ಮುಕ್ತ ಳಾಗಿಲ್ಲ. ದೌರ್ಜನ್ಯಕ್ಕೊಳಗಾಗುವ ಮಹಿಳೆಗೆ ಕಾನೂನಿನ ಅರಿವು, ನೆರವು ನೀಡಲು ವಿದ್ಯಾವಂತ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕೆಂದರು. ನೂತನ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇನ್ನರ್ ವ್ಹೀಲ್ ಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ಸ್ನೇಹ ಮತ್ತು ಸೇವೆಯೇ ಧ್ಯೇಯ. ಸಂಸ್ಥೆ ಹಲವು ಉಪಯುಕ್ತ ಕಾರ್ಯಕ್ರಮ ನಡೆಸಿಕೊಂಡು ಬಂದು ಪಟ್ಟಣದಲ್ಲಿ ಹೆಸರು ಗಳಿಸಿದೆ. ನಮ್ಮ ಅವಧಿಯಲ್ಲಿ ಸಹ ಉತ್ತಮ ಕಾರ್ಯಕ್ರಮ ಏರ್ಪಡಿಸಲು ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯರೊಂದಿಗೆ ಚರ್ಚಿಸಿ , ಸೇವೆ ನೀಡುವ ಮಹದಾಸೆ ಹೊಂದಿರುವುದಾಗಿ ತಿಳಿಸಿದರು. ಇನ್ನರ್ ವ್ಹೀಲ್ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಭಾಗ್ಯ ನಾರಾಯಣ್, ಪದಗ್ರಹಣ ಪಡೆದರು. ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ಸಮಾಜ, ಜೆಸಿಐ ಹಾಗೂ ವಾಸವಿ ಮಹಿಳಾ ಮಂಡಳಿಯ ಸದಸ್ಯರುಗಳು ನೂತನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗೆ ಸನ್ಮಾನಿಸಿ ಗೌರವಿಸಿದರು. ಪೂರ್ವಾಧ್ಯಕ್ಷೆ ನಳಿನಿ ನಾಗರಾಜ್, ಲತಾ ನಾಗರಾಜ್, ಜ್ಯೋತಿ ಮಲ್ಲಿಕಾರ್ಜುನ್, ಪ್ರೇಮಾ ಬಸವರಾಜ್, ಕೃಷ್ಣವೇಣಿ, ಅನ್ನ ಪೂರ್ಣ, ಸುಮಾನವೀನ್, ಶಿಲ್ಪ ವಿಕ್ರಂ, ಚಂದ್ರಿಕಾ ನಾಗರಾಜ್ ಹಾಗೂ ಕಡೂರು, ತರೀಕೆರೆ ,ಅಜ್ಜಂಪುರದ ಅಧ್ಯಕ್ಷರು ಸೇರಿದಂತೆ ಬೀರೂರಿನ ಇನ್ನರ್ ವ್ಹೀಲ್ ಸದಸ್ಯರು ಪಾಲ್ಗೊಂಡಿದ್ದರು. 8 ಬೀರೂರು 2 ಬೀರೂರಿನ ಕೆ.ಚನ್ನವೀರಪ್ಪಯ್ಯ ರೋಟರಿ ಭವನದಲ್ಲಿ ಮಂಗಳವಾರ ಇನ್ನರ್ ವ್ಹೀಲ್ ಸಂಸ್ಥೆ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ನೂತನ ಅಧ್ಯಕ್ಷೆ ಸವಿತಾ ರಮೇಶ್ ರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಗೌರವಿಸಿದರು.

PREV

Recommended Stories

ಪ್ರೇಮದ ಇನ್ನೊಂದು ಹೆಸರೇ ಅಮೃತಾ ಪ್ರೀತಮ್
ಹೋಬೋ ಸೆಕ್ಷುಯಾಲಿಟಿ : ಒಂದು ಹಗುರ ಸಂಬಂಧದ ಕಥೆ!