ಕಷ್ಟಕರ ಸನ್ನಿವೇಶಗಳಲ್ಲಿ ದಾದಿಯರ ನಿಸ್ವಾರ್ಥ ಸೇವೆ : ಹರೀಶ್

KannadaprabhaNewsNetwork | Published : May 15, 2024 1:36 AM

ಸಾರಾಂಶ

ಚಿಕ್ಕಮಗಳೂರು, ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ವೈದ್ಯರಷ್ಟೇ ರೋಗಿಗಳನ್ನು ಶುಶ್ರೂಷೆ ಮಾಡುವವರು ದಾದಿಯರು. ಹಗಲು ರಾತ್ರಿ ಎನ್ನದೆ, ರೋಗಿಗಳ ಸೇವೆ ಮಾಡುವ ನರ್ಸ್ ಗಳು ನಿಜಕ್ಕೂ ಸ್ಮರಣೀಯರು ಎಂದು ಕಿಮ್ಸ್ ಮೆಡಿಕಲ್ ಕಾಲೇಜು ಮುಖ್ಯಸ್ಥ ಎಚ್.ಆರ್.ಹರೀಶ್ ಹೇಳಿದರು.

ಬ್ರಹ್ಮಕುಮಾರೀಸ್ ಜ್ಞಾನ ಪ್ರಕಾಶ ಭವನದಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ವೈದ್ಯರಷ್ಟೇ ರೋಗಿಗಳನ್ನು ಶುಶ್ರೂಷೆ ಮಾಡುವವರು ದಾದಿಯರು. ಹಗಲು ರಾತ್ರಿ ಎನ್ನದೆ, ರೋಗಿಗಳ ಸೇವೆ ಮಾಡುವ ನರ್ಸ್ ಗಳು ನಿಜಕ್ಕೂ ಸ್ಮರಣೀಯರು ಎಂದು ಕಿಮ್ಸ್ ಮೆಡಿಕಲ್ ಕಾಲೇಜು ಮುಖ್ಯಸ್ಥ ಎಚ್.ಆರ್.ಹರೀಶ್ ಹೇಳಿದರು.

ನಗರದ ಬ್ರಹ್ಮಕುಮಾರೀಸ್ ಜ್ಞಾನ ಪ್ರಕಾಶ ಭವನದಲ್ಲಿ ಅಶ್ರಯ ನರ್ಸಿಂಗ್ ಕಾಲೇಜು, ಚಿಕ್ಕಮಗಳೂರು ಇನ್ಸಿಟ್ಯೂಟ್ ಆಫ್ ಮೆಡಿಕಲ್ ನರ್ಸಿಂಗ್ ಕಾಲೇಜು ಹಾಗೂ ಬ್ರಹ್ಮಕುಮಾರೀ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಉದ್ಘಾ ಟಿಸಿ ಮಾತನಾಡಿದರು.ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ಸಮಯದಲ್ಲಿ ನರ್ಸ್ ಗಳು ತಮ್ಮ ಜೀವದ ಹಂಗನ್ನು ತೊರೆದು ಸೋಂಕಿತರ ಸೇವೆ ಮಾಡಿದ್ದರು. ನಾವೆಲ್ಲರೂ ಆರೋಗ್ಯವಾಗಿರಲು ದಾದಿಯರು ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಬಹಳಷ್ಟು ಕಷ್ಟಕರ ಸನ್ನಿವೇಶಗಳಲ್ಲಿ ದಾದಿಯರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದರು.ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ, ಪ್ರತಿ ವರ್ಷ ದಾದಿಯರ ದಿನದ ಅಂಗವಾಗಿ ಕಾರ್ಯಕ್ರಮ ಆಚರಿಸಲಾಗಿದ್ದು ಆರೋಗ್ಯ ಕ್ಷೇತ್ರದ ಸುಧಾರಣೆಗೆ ತನ್ನದೇ ಕೊಡುಗೆ ನೀಡಿದ ವಿಶ್ವವಿಖ್ಯಾತ ನರ್ಸ್, ಫ್ಲಾರೆನ್ಸ್ ನೈಟಿಂಗೇಲ್ ಜನ್ಮದಿನವನ್ನು ಪ್ರತಿ ವರ್ಷ ದಾದಿಯರ ದಿನವನ್ನಾಗಿ ಆಚರಿಲಾಗುತ್ತಿದೆ ಎಂದು ತಿಳಿಸಿದರು.ಯುದ್ಧದಲ್ಲಿ ಗಾಯಗೊಂಡ ಸೇನಾನಿಗಳ ಆರೈಕೆ ಮಾಡಿ ಜಗತ್ತಿನಾದ್ಯಂತ ಗೌರವ ಪಡೆದ ನೈಟಿಂಗೇಲ್ ವೃತ್ತಿ ಘನತೆ ಯನ್ನು ಎತ್ತಿ ಹಿಡಿದ ಅನುಭವಿ ದಾದಿ. ಲಂಡನ್‌ನ ಪ್ರಮುಖ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸಿದ ಅವರು ಮಾನವೀಯತೆಯ ಪ್ರತಿಪಾದಕರಾಗಿ ಪ್ರಸಿದ್ಧಿ ಹೊಂದಿದ್ದರು ಎಂದರು.ಆಶ್ರಯ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ.ಶುಭ ವಿಜಯ್ ಮಾತನಾಡಿ, ನೈಟಿಂಗೇಲ್ ಅವರನ್ನು ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಎಂದು ಕರೆಯಲಾಗುತ್ತದೆ. ಇದರ ಹೊರತಾಗಿ ಆಕೆ ಸಮಾಜ ಸುಧಾರಕಿ ಹಾಗೂ ಸಂಖ್ಯಾಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದರು. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಅವರು ನೀಡಿದ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.ಕಾರ್ಯಕ್ರಮಕ್ಕೂ ಮುನ್ನ ವೇದಿಕೆ ಗಣ್ಯರು ಫ್ಲಾರೆನ್ ನೈಟಿಂಗೇಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿದರು. ರಾಜಯೋಗ ಶಿಕ್ಷಕಿ ರೇಖಾ ದಾದಿಯರ ದಿನಾಚರಣೆ ಕುರಿತು ನರ್ಸಿಂಗ್ ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಕಿಮ್ಸ್ ಮೆಡಿಕಲ್ ಕಾಲೇಜಿನ ವೈದ್ಯ ಡಾ. ಲೋಹಿತ್, ಬ್ರಹ್ಮಕುಮಾರೀಸ್ ಸಂಸ್ಥೆ ಹಾಸನ ಸಂಚಾಲಕಿ ವೀಣಾ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಹಾಜರಿದ್ದರು.ಪೋಟೋ ಫೈಲ್ ನೇಮ್‌ 14 ಕೆಸಿಕೆಎಂ 4ಚಿಕ್ಕಮಗಳೂರಿನ ಬ್ರಹ್ಮಕುಮಾರೀಸ್ ಜ್ಞಾನ ಪ್ರಕಾಶ ಭವನದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಕಿಮ್ಸ್ ಮೆಡಿಕಲ್ ಕಾಲೇಜು ಮುಖ್ಯಸ್ಥ ಹೆಚ್.ಆರ್.ಹರೀಶ್ ಅವರು ಉದ್ಘಾಟಿಸಿದರು. ಡಾ. ಶುಭಾ ವಿಜಯ್‌, ಭಾಗ್ಯ, ಡಾ. ಲೋಹಿತ್‌ ಇದ್ದರು.

Share this article