ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕಿನ ನಂದಿನಿ ರೀಟೆಲ್ ಮಾರಾಟಗಾರರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,. ಉತ್ಪಾದಕರು ಹಾಗೂ ಮಾರಾಟಗಾರರು ಮನ್ಮುಲ್ ಎರಡು ಕಣ್ಣುಗಳು ಇದ್ದಂತೆ. ಇಬ್ಬರ ಪರಿಶ್ರಮದಿಂದಲೇ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಬೆಳೆಯಲು ಸಾಧ್ಯ ಎಂದರು.
ಮನ್ಮುಲ್ ನೂತನ ನಿರ್ದೇಶಕರಾಗಿ ಆಯ್ಕೆಯಾದ ಮೇಲೆ ತಾಲೂಕಿನ ಎಲ್ಲಾ ಮಾರಾಟ ಕೇಂದ್ರದ ಹಳೆಯ ನಾಮಫಲಕ ಬದಲಾಯಿಸಿ ಹೊಸ ಬೊರ್ಡ್‌ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಯಿತು. ಮನ್ಮುಲ್‌ನ ಉಪ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ವರ್ಣರಂಜಿತ ಭಿತ್ತಿ ಪತ್ರಗಳನ್ನು ಕೂಡ ನೀಡಲಾಗುವುದು ಎಂದರು.ಒಂದು ವರ್ಷದ ಅವಧಿಯಲ್ಲಿ ೧೦ ಹೆಚ್ಚು ನಂದಿನಿ ಮಾರಾಟ ಕೇಂದ್ರ ಆರಂಭಿಸಲಾಗಿದೆ. ವರ್ಷದಿಂದ ವರ್ಷಕ್ಕೆ ನಂದಿನಿ ಹಾಲು ಮೊಸರು ಹೆಚ್ಚು ಮಾರಾಟವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನಂದಿನಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬೇಕು. ಮಾರಾಟಗಾರರ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಬಗೆಹರಿಸಲು ಅಗತ್ಯ ಕ್ರಮ ವಹಿಸಲಾಗುವುದೆಂದು ಹೇಳಿದರು.
ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮಾರುಕಟ್ಟೆ ವ್ಯವಸ್ಥಾಪಕ ಶ್ರೀಕಾಂತ್ ಮಾತನಾಡಿ, ಒಕ್ಕೂಟದ ಅರ್ಥಿಕ ಬೆಳವಣಿಗೆಗೆ ಉತ್ಪಾದಕರು ಹಾಗೂ ಮಾರಾಟಗಾರರ ಶ್ರಮ ಕಾರಣವಾಗಿದೆ. ಮುಂಜಾನೆಯಿಂದಲೇ ರೈತರು ಹಾಲು ಕರೆದು ಡೈರಿಗೆ ಹಾಕಿದರೇ ಸಿದ್ದಗೊಂಡಿರುವ ನಂದಿನಿ ಹಾಲನ್ನು ಗ್ರಾಹಕರಿಗೆ ತಲುಪಿಸುವಲ್ಲಿ ನಂದಿನಿ ರೀಟೆಲ್ ಮಾರಾಟಗಾರರ ಪರಿಶ್ರಮವಹಿಸಿ ದುಡಿಯುತ್ತಿರುವ ಪ್ರತಿಫಲದಿಂದಾಗಿ ಹಾಲಿನ ಮಾರಾಟವೂ ಕೂಡ ಹೆಚ್ಚಾಗುತ್ತಿದೆ ಎಂದರು.ಒಕ್ಕೂಟ ಅಧಿಕೃತ ಮಾರಾಟಗಾರರ ಹಿತವನ್ನು ಕಾಪಾಡಲಿದೆ. ಮನ್ಮುಲ್ ವತಿಯಿಂದ ನೀಡಲಾಗುವ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ. ಅಧಿಕಾರಿಗಳು ಹೆಚ್ಚಿನ ಹಾಲು ಉತ್ಪಾದನೆ ಹಾಗೂ ಮಾರಾಟವಾಗುವಂತೆ ನಿರಂತರವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಮನ್ಮುಲ್‌ನಿಂದ ನಂದಿನಿ ರೀಟೆಲ್ ಮಾರಾಟಗಾರರ ಉಡುಗೊರೆ ನೀಡಲಾಯಿತು. ೨೦೨೬ನೇ ದಿನಚರಿ ಹಾಗೂ ಡೈರಿಯನ್ನು ಬಿಡುಗಡೆಗೊಳಿಸಲಾಯಿತು. ತಾಲೂಕು ಉಪಕೇಂದ್ರದಿಂದ ನಿರ್ದೇಶಕ ಕೃಷ್ಣೇಗೌಡ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಮುಖ್ಯಸ್ಥ ಡಾ. ಸದಾಶಿವ, ಸಿಬ್ಬಂದಿ ನಿರ್ಮಿತ ಇತರರಿದ್ದರು.