ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಬನ್ನಾರಿ ಮಾರಿಯಮ್ಮ ದೇವಸ್ಥಾನದ ಬಳಿ ಆಗಮಿಸಿದ ರಥವನ್ನು ವೀರಶೈವ ಸಮುದಾಯದ ಮುಖಂಡ ಎಸ್.ಎ.ಮಲ್ಲೇಶ್, ಜಿಲ್ಲಾಧ್ಯಕ್ಷ ಎಸ್.ಆನಂದ್ ಹಾಗೂ ತಾಲೂಕು ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಮುಖಂಡರು ಸ್ವಾಗತಿಸಿ ಗುರುಗಲ ಮೂರ್ತಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆಸಲ್ಲಿಸಿದರು.
ಎಸ್.ಎ.ಮಲ್ಲೇಶ್ ಮಾತನಾಡಿ, ಸುತ್ತೂರು ಕ್ಷೇತ್ರದ ಜಾತ್ರಾ ಮಹೋತ್ಸವವು ಜನವರಿ 15 ರಿಂದ 20ರ ವರೆಗೆ ನಡೆಯುವುದರಿಂದ ಜಾತ್ರೆಯ ಬಗ್ಗೆ ಪ್ರಚಾರ ನಡೆಸಲು ಆಗಮಿಸಿರುವ ಜಾತ್ರೆಯ ಪ್ರಚಾರ ರಥಕ್ಕೆ ಸ್ವಾಗತಿಸಿ ಬೀಳ್ಗೋಟ್ಟಿದ್ದೇವೆ. ಸುತ್ತೂರು ಕ್ಷೇತ್ರದಲ್ಲಿ ಪ್ರತಿ ವರ್ಷವು ಸಹ ಶ್ರೀಗಳ ನೇತೃತ್ವದಲ್ಲಿ ಸುತ್ತೂರು ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.ಇತ್ತೀಚೆಗೆ ಮಳವಳ್ಳಿಯಲ್ಲಿ ನಡೆದ ಸುತ್ತೂರು ಜಯಂತೋತ್ಸವವು ಸಹ ಅದ್ಧೂರಿಯಾಗಿ ನಡೆದು ಯಶಸ್ವಿಪಡೆದುಕೊಂಡಿತ್ತು. ಇದೀಗ ದೊಡ್ಡಮಟ್ಟದಲ್ಲಿ ಜಾತ್ರೆ ನಡೆಸಲಾಗುತ್ತಿದೆ. ಜಾತ್ರೆಗೆ ಜಿಲ್ಲೆಯ ಸೇರಿದಂತೆ ರಾಜ್ಯ, ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಜಾತ್ರೆಯಲ್ಲಿ ದೇವರ ಉತ್ಸವಗಳು, ಸರಳ ಸಾಮೂಹಿಕ ವಿವಾಹ, ಕೊಂಡೋತ್ಸವ, ರಥೋತ್ಸವ, ಲಕ್ಷದೀಪೋತ್ಸವ, ತೆಪ್ಪೋತ್ಸವ, ಅನ್ನಬ್ರಹ್ಮೋತ್ಸವ, ಭಜನೆ, ರಂಗೋಲಿ, ರಾಗಿಬೀಸುವ ಸ್ಪರ್ದೆಗಳು, ಕೆಸರುಗದ್ದೆ ಓಟ, ಉತ್ತಮ ರಾಸುಗಳಿಗೆ ಬಹುಮಾನ, ಈ ಭಾರಿ ವಿಶೇಷವಾಗಿ ಕೃಷಿ ಬ್ರಹ್ಮಾಂಡ ನಿರ್ಮಿಸಿ ಹಲವಾರು ತಳಿಗಳನ್ನು ಬೆಳೆದು ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ, ನಿತ್ಯವು ಸಹ ದಾಸೋಕಕ್ಕೆ ನೂರಾರು ಕ್ವಿಂಟಾಲ್ ಅನ್ನ ಬೇಯುತ್ತದೆ, ಇಂತಹ ಜಾತ್ರಾ ಮಹೋತ್ಸವ ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳ್ಳಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾಧ್ಯಕ್ಷ ಎಸ್.ಆನಂದ್ ಮಾತನಾಡಿ, ಮಳಮಳ್ಳಿಯಲ್ಲಿ ಅದ್ಧೂರಿಯಾಗಿ ಸುತ್ತೂರು ಜಯಂತ್ಯುತ್ಸವವನ್ನು ನಡೆದಿದೆ, 2008ರಲ್ಲಿ ಪಾಂಡವಪುರ ಪಟ್ಟಣದಲ್ಲಿಯೇ ಜಯಂತ್ಯುತ್ಸವವನ್ನು ನಡೆಸಲಾಗಿತ್ತು, ಸುತ್ತೂರು ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮಗಳು ಸಹ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರುತ್ತಾರೆ, ಅದು ಶ್ರೀಗಳ ಶಕ್ತಿಯಿಂದ ನಡೆಯುತ್ತಿದೆ. ಇಂತಹ ಜಾತ್ರೆಗೆ ತಾಲೂಕು ಸೇರಿದಂತೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಂದರ್ಭದಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪರೋಣದ, ಉಪತಹಸೀಲ್ದಾರ್ ಸಂತೋಷ್, ವೀರಶೈವ ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಜಯಣ್ಣ, ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಟಿಎಪಿಸಿಎಂಎಸ್ ಅಧ್ಯಕ್ಷ ಗಿರೀಶ್, ಮುಖಂಡರಾದ ಕಬ್ಬಿಣದ ಅಂಗಡಿ ಎಸ್.ಮಂಜುನಾಥ್, ಚನ್ನೇಗೌಡ, ನಂಜೇಗೌಡ, ಬಿ.ಎಸ್.ಜಯರಾಮು, ಧನ್ಯಕುಮಾರ್, ಕಲಿಗಣೇಶ್, ಬೇಬಿ ಚಂದ್ರಶೇಖರ್, ಕುಮಾರಸ್ವಾಮಿ, ಸುರೇಶ್, ಕಾಂತರಾಜು, ಮಹದೇವಪ್ಪ, ಮಂಡಿಬೆಟ್ಟಹಳ್ಳಿ ಮಂಜುನಾಥ್, ಅರಳಕುಪ್ಪೆ ಮಹದೇವು, ಎಂ.ಗಿರೀಶ್, ಕಣಿವೆರಾಮು, ಅಂಕಯ್ಯ ಸೇರಿದಂತೆ ಎಲ್ಲಾ ಸಮುದಾಯದ ಮುಖಂಡರು ಇದ್ದರು.