ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ವಿಶೇಷ ಅಭಿಯಾನ ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ 90 ದಿನಗಳ ಡ್ರೈವ್‌ನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಆಸ್ತಿ, ವಿಭಾಗ, ಭೂ ಸ್ವಾಧೀನ ಪ್ರಕರಣ, ಚೆಕ್ ಬೌನ್ಸ್, ಪ್ರಕರಣ, ಪತಿ-ಪತ್ನಿ ಪ್ರಕರಣ, ವಾಹನ ಅಪಘಾತ ಪ್ರಕರಣ, ಬ್ಯಾಂಕ್ ಹಣಕಾಸಿಗೆ ಸಂಬಂಧಿಸಿದ ದಾವೆಗಳು, ಸಣ್ಣ ಪುಟ್ಟ ಪ್ರಕರಣ, ಸೇರಿಂದತೆ ಇತರೆ ಪ್ರಕರಣಗಳನ್ನು ಇತ್ಯರ್ಥ ಮಾಡಬಹುದಾದ ವ್ಯಾಜ್ಯಗಳನ್ನು ವಿಶೇಷ ಅಭಿಯಾನ ಮಧ್ಯಕೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು.
ಅಲ್ಲದೇ, ನ್ಯಾಯಾಲಯದಲ್ಲಿ ಬಾಕಿ ಇರುವ ಎಲ್‌ಎಸಿ ಕಾರ್ಯಗತಗೊಳಿಸುವಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಲೋಕ ಆದಾಲತ್ ಸಲುವಾಗಿ ಜ.24 ರಂದು ರಾಜ್ಯಾದ್ಯಾಂತ ಹಮ್ಮಿಕೊಳ್ಳಲಾಗುತ್ತಿದೆ. ಹಾಗಾಗಿ ಈ ವಿಶೇಷ ಲೋಕ ಆದಾಲತ್ ಅನ್ನು ಕಕ್ಷಿದಾರರು, ವಕೀಲರು ಹಾಗೂ ಸಂಬಂಧಪಟ್ಟಂತಹ ಇಲಾಖೆಯವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ಮೂಲಕ ಕೋರಿದ್ದಾರೆ.ವೈಕುಂಠ ಏಕಾದಶಿ ಪ್ರಯುಕ್ತ ಅನ್ನಸಂತರ್ಪಣೆ
ಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಹೊಳಲು ಗ್ರಾಮದ ಶ್ರೀಕೇಶವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀವಿನಾಯಕ ಗೆಳೆಯರ ಬಳಗದಿಂದ 11ನೇ ವರ್ಷದ ವೈಕುಂಠ ಏಕಾದಶಿಯ ಪೂಜಾ ಮಹೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ಶ್ರೀದೇವಿ, ಭೂದೇವಿ, ಸಮೇತ ಶ್ರೀಕೇಶವ ನಾರಾಯಣಸ್ವಾಮಿ, ಶ್ರೀಆಂಜನೇಯಸ್ವಾಮಿ ದೇವರಿಗೆ ವಿಶೇಷ ಪೂಜೆ, ನಾದಸ್ವರದ ಗಟ್ಟಿಮೇಳದೊಂದಿಗೆ ದೇವರಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಡಾ.ಆಶಾಲತಾ, ಡಾ.ಇಂದ್ರೇಶ್, ಬಿಜೆಪಿ ಮುಖಂಡ ಸಚ್ಚಿದಾನಂದ, ರಾಮಚಂದ್ರು, ರೈತ ಮುಖಂಡ ರಾಘು, ಹರ್ಷ ಬೀರೇಗೌಡನಹಳ್ಳಿ, ರಶ್ಮಿ, ವಿಜಯಕುಮಾರ್ ದಂಪತಿ ಮತ್ತು ಅಕ್ಕ ಪಕ್ಕದ ಗ್ರಾಮಸ್ಥರು ದೇವರ ದರ್ಶನ ಪಡೆದರು. ಬಳಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು.
ದೇವಸ್ಥಾನಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಶ್ರೀವಿನಾಯಕ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.ಪದಾಧಿಕಾರಿಗಳಾದ ನವೀನ್ ಗೌಡ, ಶಿವಲಿಂಗ, ವಿನೋದ್ , ಸುನಿಲ್, ಹೆಚ್.ಎಸ್.ಯಶ್ವಂತ್, ಅನಿಲ್ , ಅರುಣ, ಸಾಗರ್, ನಾಗೇಶ್, ಚೆಲುವರಾಜು, ಸುರೇಶ, ರವಿಕುಮಾರ್ ಇತರರಿದ್ದರು.