ಕೊರಗ ಸಮುದಾಯಕ್ಕೆ ನಿವೇಶನ, ಹಕ್ಕು ಪತ್ರ ಆಗ್ರಹಿಸಿ ‘ಅರೆಬೆತ್ತಲೆ ಮೆರವಣಿಗೆ’

KannadaprabhaNewsNetwork |  
Published : Oct 13, 2026, 02:45 AM IST
ಕೊರಗ ಸಮುದಾಯಕ್ಕೆ ನಿವೇಶನ, ಹಕ್ಕು ಪತ್ರಕ್ಕೆ ಆಗ್ರಹಿಸಿ ‘ಅರೆಬೆತ್ತಲೆ ಮೆರವಣಿಗೆ’ ನಡೆಯಿತು | Kannada Prabha

ಸಾರಾಂಶ

ವಾಮಂಜೂರು ಮಂಗಳಜ್ಯೋತಿಯಲ್ಲಿ ಕೊರಗ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಮತ್ತು ಹಕ್ಕುಪತ್ರ ಕೂಡಲೇ ವಿತರಣೆಗೆ ಒತ್ತಾಯಿಸಿ ವಾಮಂಜೂರು ಜಂಕ್ಷನ್‌ನಿಂದ ಪಡೀಲ್‌ ಜಂಕ್ಷನ್‌ವರೆಗೆ ಕೊರಗ ಫಲಾನುಭವಿಗಳು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಜೊತೆಯಲ್ಲಿ ಪಾದಯಾತ್ರೆ - ಅರೆ ಬೆತ್ತಲೆ ಮೆರವಣಿಗೆಯನ್ನು ಸೋಮವಾರ ನಡೆಸಿದರು.

ಮಂಗಳೂರು : ವಾಮಂಜೂರು ಮಂಗಳಜ್ಯೋತಿಯಲ್ಲಿ ಕೊರಗ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಮತ್ತು ಹಕ್ಕುಪತ್ರ ಕೂಡಲೇ ವಿತರಣೆಗೆ ಒತ್ತಾಯಿಸಿ ವಾಮಂಜೂರು ಜಂಕ್ಷನ್‌ನಿಂದ ಪಡೀಲ್‌ ಜಂಕ್ಷನ್‌ವರೆಗೆ ಕೊರಗ ಫಲಾನುಭವಿಗಳು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಜೊತೆಯಲ್ಲಿ ಪಾದಯಾತ್ರೆ - ಅರೆ ಬೆತ್ತಲೆ ಮೆರವಣಿಗೆಯನ್ನು ಸೋಮವಾರ ನಡೆಸಿದರು.ವಾಮಂಜೂರು, ಪಂಪ್‌ವೆಲ್‌, ಪಡೀಲ್‌ ಮೊದಲಾದ ಕಡೆ ಬಹಿರಂಗ ಸಭೆ ನಡೆಸಿ ತಮ್ಮ ನಿವೇಶನ ಹಕ್ಕಿಗಾಗಿನ ಬೇಡಿಕೆ ಮುಂದಿಟ್ಟರು. ವಾಮಂಜೂರು ಮಂಗಳಜ್ಯೋತಿಯ ಕೊರಗ ಕುಟುಂಬಗಳು ಹಾಗೂ ಪ್ರತಿಭಟನಾಕಾರರ ಅರೆಬೆತ್ತಲೆ ಪಾದಯಾತ್ರೆಯಲ್ಲಿ ಕೊರಗರ ಸಾಂಸ್ಕೃತಿಕ ಪರಿಕರವಾದ ಡೋಲು ವಾದನ ಗಮನ ಸೆಳೆಯಿತು. ಮಧ್ಯಾಹ್ನದ ಉರಿ ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆಯಲ್ಲಿ ಸಾಗಿದರು.

ಪಡೀಲ್‌ ಪ್ರಜಾಸೌಧದ ಬಳಿ ವಾಮಂಜೂರು ನಿವಾಸಿ ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವಾಮಂಜೂರು ಘಟಕದ ಸಂಚಾಲಕ ಕರಿಯ ಕೆ.ಮಾತನಾಡಿ, ಮಂಗಳಜ್ಯೋತಿಯಲ್ಲಿ ಆದಿವಾಸಿ ಕೊರಗ ಸಮುದಾಯದ ಸುಮಾರು 33 ಕುಟುಂಬಗಳಿಗೆ ಮನೆ ನಿವೇಶನ ಹಸ್ತಾಂತರ ಪ್ರಕ್ರಿಯೆ 2018ರಿಂದ ಬಾಕಿಯಾಗಿದೆ ಎಂದರು.

ಸಾಮಾಜಿಕ ಹೋರಾಟಗಾರ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್‌ ಕಾಟಿಪಳ್ಳ ಮಾತನಾಡಿ, ಧ್ವನಿ ಇಲ್ಲದ ಕೊರಗ ಸಮುದಾಯದ ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸರಕಾರ ಮೌನವಾಗಿದೆ ಎಂದು ಆರೋಪಿಸಿದರು.ವಿವಿಧ ಸಂಘಟನೆಗಳ ನಾಯಕರಾದ ಕರಿಯ ಕೆ. ವಾಸುದೇವ ಉಚ್ಚಿಲ್‌, ಜೆ.ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಜಯಂತಿ ಶೆಟ್ಟಿ, ಸುನಿಲ್‌ ಕುಮಾರ್‌ ಬಜಾಲ್‌, ಸಂತೋಷ್‌ ಬಜಾಲ್‌, ಯೋಗೀಶ್‌ ಜಪ್ಪಿನಮೊಗರು, ಶೇಖರ್‌ ವಾಮಂಜೂರು, ಪ್ರಮುಖರಾದ ವಿಘ್ನೇಶ್‌ ವಾಮಂಜೂರು, ಪೂರ್ಣಿಮಾ, ಸುನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್‌ ಅವ್ಯವಸ್ಥೆ: ಸಿಬ್ಬಂದಿಗೆ ತರಾಟೆ
ಏತ ನೀರಾವರಿ ಯೋಜನೆಗಳಿಗೆ ಸಿಎಂ ಚಾಲನೆ